Site icon Vistara News

Physical Harming: ಭುಜದೆತ್ತರಕ್ಕೆ ಬೆಳೆದ ಮಗಳನ್ನು ಕೊಂದು, ಬೈಕ್‌ಗೆ ಕಟ್ಟಿ ಎಳೆದ ತಂದೆ; ಇವನೆಂಥಾ ಅಪ್ಪ

Father Kills Daughter In Punjab

Punjab man kills daughter, ties body to bike, drags it before dumping

ಚಂಡೀಗಢ: ಕಣ್ಣ ಮುಂದೆಯೇ ಗೆಜ್ಜೆ ಸದ್ದು ಮಾಡಿಕೊಂಡು ಓಡಾಡಿಕೊಂಡಿದ್ದ ಮಗಳು ಭುಜದೆತ್ತರಕ್ಕೆ ಬೆಳೆದರೆ, ಯಾವ ತಂದೆಗಾದರೂ ಖುಷಿಯಾಗದೆ ಇರದು. ಆಗ, ಮಗಳ ಮೇಲಿನ ಪ್ರೀತಿ ಇಮ್ಮಡಿಯಾಗುತ್ತದೆ. ಆಕೆಯ ಬಗ್ಗೆ ಇರುವ ಕಾಳಜಿ, ಮಮಕಾರ, ಭವಿಷ್ಯದ ಕುರಿತ ಕಾಳಜಿಯು ನೂರ್ಮಡಿಯಾಗುತ್ತದೆ. ಆದರೆ, ಪಂಜಾಬ್‌ನಲ್ಲಿ ದುರುಳ ತಂದೆಯೊಬ್ಬ 20 ವರ್ಷದ ಮಗಳನ್ನು ಕೊಂದು, ಆಕೆಯ ದೇಹವನ್ನು ಬೈಕ್‌ ಕಟ್ಟಿ (Physical Harming) ಎಳೆದಿದ್ದಾನೆ. ದೂರಕ್ಕೆ ಎಳೆದುಕೊಂಡು ಹೋಗಿ ಶವವನ್ನು ಬಿಸಾಕಿದ್ದಾನೆ.

ಅಮೃತಸರ ಜಿಲ್ಲೆಯ ಮುಚ್ಚಲ್‌ ಗ್ರಾಮದಲ್ಲಿ ದುರುಳ ತಂದೆಯು ಮಗಳ ಮೇಲೆಯೇ ಇಂತಹ ಕ್ರೌರ್ಯ ಮೆರೆದಿದ್ದಾನೆ. ರೈಲು ಹಳಿಯ ಮೇಲೆ ಯುವತಿಯ ಶವ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಕಟುಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಾವು ಎಂಬುದಾಗಿ ಗುರುತಿಸಲಾಗಿದೆ. ಆತನು ಬೈಕ್‌ಗೆ ಮಗಳ ಶವ ಕಟ್ಟಿ ಎಳೆದ ವಿಡಿಯೊ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಏಕೆ ಇಂಥ ನೀಚ ಕೃತ್ಯ?

ಮಗಳ ವ್ಯಕ್ತಿತ್ವವನ್ನೇ ಅನುಮಾನಿಸಿ ಬಾವು ಇಂತಹ ನೀಚ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್‌ 9ರಂದು ಯುವತಿಯು ಯಾರಿಗೂ ಹೇಳದೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಆಗಸ್ಟ್‌ 10ರಂದು ಆಕೆ ಮನೆಗೆ ಹಿಂತಿರುಗಿದ್ದಾಳೆ. ಮಗಳು ಮನೆಗೆ ಬರುತ್ತಲೇ ಕೆಂಡವಾದ ಬಾವು, ಆಕೆಯ ಜತೆ ವಾಗ್ವಾದ ನಡೆಸಿದ್ದಾನೆ. ಇದೇ ವೇಳೆ ಮಾರಕಾಸ್ತ್ರಗಳಿಂದ ಇರಿದು ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

“ಹೊರಗೆ ಹೋಗಿದ್ದ ಮಗಳು ಮನೆಗೆ ಬರುತ್ತಲೇ ಆಕೆಯ ಜತೆ ಜಗಳವಾಡಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ. ಯಾರಿಗಾದರೂ ಹೇಳಿದರೆ ಕೊಂದು ಬಿಡುತ್ತೇನೆ ಎಂದು ನಮ್ಮನ್ನೆಲ್ಲ ಹೆದರಿಸಿದ್ದಾನೆ. ಇದರಿಂದಾಗಿ ನಾವು ಮನೆಯಿಂದ ಹೊರಗೆ ಬರಲು ಕೂಡ ಆಗಿಲ್ಲ” ಎಂದು ಬಾವು ತಾಯಿ ತಿಳಿಸಿದ್ದಾರೆ. ಬಾವು ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Exit mobile version