Site icon Vistara News

Punjab MMS Scandal | ಹುಡುಗಿಯ ಸ್ನಾನದ ವಿಡಿಯೊ ಲೀಕ್​ ಕೇಸ್​; ಉನ್ನತ ತನಿಖೆಗೆ ಸರ್ಕಾರದ ಆದೇಶ

Punjab MMS Scandal high level probe ordered By Government

ಮೊಹಾಲಿ: ಚಂಡೀಗಢ ಯೂನಿವರ್ಸಿಟಿ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಲೀಕ್​​ ಕೇಸ್​ನ್ನು ಸಮಗ್ರ ತನಿಖೆ ನಡೆಸುವಂತೆ ಪಂಜಾಬ್​ ಉನ್ನತ ಶಿಕ್ಷಣ ಸಚಿವ ಗುರ್ಮೀತ್​ ಸಿಂಗ್​ ಮೀಟ್​ ಹೇಯರ್​​ ಆದೇಶ ನೀಡಿದ್ದಾರೆ. ವಿಡಿಯೋ ಎಂಎಂಎಸ್​ ಮಾಡುವ ಬಹಿರಂಗಗೊಳಿಸಿದ ವಿದ್ಯಾರ್ಥಿನಿಯನ್ನು ಪೊಲೀಸರು ಈಗಾಗಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಹಾಸ್ಟೆಲ್​​​ನ​ ಒಬ್ಬಳು ಹುಡುಗಿ ಅಲ್ಲಿನ ಸುಮಾರು 60 ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ತನ್ನ ಬಾಯ್​ಫ್ರೆಂಡ್ ಮೂಲಕ ವೈರಲ್​ ಮಾಡಿದ್ದಾಳೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಇದೇ ಕಾರಣಕ್ಕೆ ಯೂನಿವರ್ಟಿಸಿ ಕ್ಯಾಂಪಸ್​​ನಲ್ಲಿ ಉಳಿದ ವಿದ್ಯಾರ್ಥಿನಿಯರೆಲ್ಲ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆ ಹುಡುಗಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿ, ಆಕೆಯ ಬಳಿಯಿದ್ದ ಮೊಬೈಲ್​ ಮತ್ತು ಇತರ ಎಲೆಕ್ಟ್ರಿಕ್​ ಡಿವೈಸ್​​ಗಳನ್ನು ವಶಪಡಿಸಿಕೊಂಡ ಬಳಿಕ ಗೊತ್ತಾಗಿದ್ದೇನೆಂದರೆ, ‘ಆ ಆರೋಪಿ ಹುಡುಗಿ ಇನ್ಯಾರ ವಿಡಿಯೋನೂ ವೈರಲ್​ ಮಾಡಿಲ್ಲ. ಬದಲಿಗೆ ಅವಳದ್ದೇ ಒಂದು ವಿಡಿಯೋ ಅಡಲ್ಟ್​ ವೆಬ್​ಸೈಟ್​​ನಲ್ಲಿ ಅಪ್ಲೋಡ್​ ಆಗಿದೆ’

ಈ ಬಗ್ಗೆ ಡಿಐಜಿ ಗುರ್​ಪ್ರೀತ್​ ಭುಲ್ಲಾರ್​ ಪ್ರತಿಕ್ರಿಯೆ ನೀಡಿದ್ದು ‘ವಿದ್ಯಾರ್ಥಿನಿ ವೈರಲ್ ಮಾಡಿದ ವಿಡಿಯೋಕ್ಕೆ ಸಂಬಂಧ ಪಟ್ಟ ತನಿಖೆಯನ್ನು ಮೊಹಾಲಿ ಎಸ್​ಎಸ್​ಪಿ ನೇತೃತ್ವದ ತಂಡ ಪ್ರಾರಂಭಿಸಿದೆ’ ಎಂದು ಹೇಳಿದ್ದಾರೆ. ತನಿಖೆಗೆ ಆದೇಶಿಸಿದ ಉನ್ನತ ಶಿಕ್ಷಣ ಸಚಿವ ಗುರ್ಮೀತ್​ ಸಿಂಗ್​ ಮೀಟ್​ ಹೇಯರ್ ‘ಚಂಡೀಗಢ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ಆದರೆ ಈ ಬಗ್ಗೆ ತಪ್ಪು ಸುದ್ದಿಗಳನ್ನು ಯಾರೂ ಹಬ್ಬಿಸಬೇಡಿ. ಇಲ್ಲಿ ಯಾವ ಹುಡುಗಿಯೂ ಆತ್ಮಹತ್ಯೆ ಪ್ರಯತ್ನ ಮಾಡಿಲ್ಲ. ಇಲ್ಲಿನ ವಿದ್ಯಾರ್ಥಿನಿಯರಿಗೆ ನಿಜಕ್ಕೂ ಅನ್ಯಾಯವಾಗಿದ್ದೇ ಹೌದಾದರೆ ಖಂಡಿತ ನ್ಯಾಯ ಸಿಗುವಂತೆ ಮಾಡುತ್ತೇವೆ. ತಪ್ಪಿತಸ್ಥರನ್ನು ಬಿಡುವುದೇ ಇಲ್ಲ’ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Punjab MMS Scandal | ಲೀಕ್ ಆಗಿದ್ದು ಆರೋಪಿ ಹುಡುಗಿಯ ವಿಡಿಯೋ ಮಾತ್ರ; ಆತ್ಮಹತ್ಯೆ ಯತ್ನವೂ ನಡೆದಿಲ್ಲ

Exit mobile version