Site icon Vistara News

Rape Case | ಮಗ ರೇಪ್ ಮಾಡಿದ, ತಾಯಿ ಮತ್ತೊಬ್ಬನ ಜತೆ ಸೆಕ್ಸ್ ಮಾಡು ಎಂದಳು!

Rape

ನಾಗ್ಪುರ್: 22 ವರ್ಷದ ಯುವಕನೊಬ್ಬ ಹದಿಹರಿಯದ ಯುವತಿಯನ್ನು ಅತ್ಯಾಚಾರ (Rape Case) ಮಾಡಿದರೆ, ಆ ಯುವಕನ ತಾಯಿಯು ಅದೇ ಸಂತ್ರಸ್ತೆಗೆ ಮತ್ತೊಬ್ಬರ ಜತೆಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಪ್ರಕರಣವು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಮೇ ತಿಂಗಳಲ್ಲಿ ಭೋಪಾಲ್‌ಗೆ ಹೋಗಿದ್ದಳು. ಆಗ ಆರೋಪಿ ಅಭಿಷೇಕ್ ಕುರ್ಲಿ ಎಂಬಾತನ ಪರಿಚಯವಾಗಿದೆ. ಆತ ಯುವತಿಗೆ ದೈಹಿಕ ಸಂಪರ್ಕಕ್ಕೆ ಆಹ್ವಾನಿಸಿದ್ದಾನೆ. ಒಪ್ಪದಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇರೆಯವರ ಜತೆ ಮಲಗು ಎಂದಳು ಆರೋಪಿ ತಾಯಿ!
45 ವರ್ಷದ ರಜಿನಿ ಎಂಬಾಕೆ ಆರೋಪಿ ಅಭಿಷೇಕ್ ಕುರ್ಲಿಯ ತಾಯಿ. ಈಕೆಯ ವಿರುದ್ಧವೂ ಪ್ರಕರಣವನ್ನು ದಾಖಲಿಸಲಾಗಿದೆ. ದೂರಿನ ಪ್ರಕಾರ, ಅತ್ಯಾಚಾರಕ್ಕೀಡಾದ ಯುವತಿಗೆ ಈಕೆ ಬೇರೆಯವರ ಜತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದಳು. ಆರೋಪಿ, ಅಭಿಷೇಕ್ ಸಂತ್ರಸ್ತೆಯ ಮೊಬೈಲ್ ಕದ್ದು, ಆಕೆಯ ಆಕ್ಷೇಪಾರ್ಹ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ಎನ್ನುವ ಆರೋಪ ಕೂಡ ಇದೆ.

ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಅಪರಾಧಗಳನ್ನಾಧರಿಸಿ ಅಭಿಷೇಕ ಕುರ್ಲಿ ಮತ್ತು ಆತನ ತಾಯಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ನಾಗ್ಪುರದ ಜರಿಪಟ್ಕಾ ಪೊಲೀಸ್ ಸ್ಟೇಷನ್ ತಿಳಿಸಿದೆ.

ಇದನ್ನೂ ಓದಿ | Verdict | ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

Exit mobile version