Site icon Vistara News

Road Accident : ಮಗನ ಜತೆಗೆ ಬೈಕ್‌ನಲ್ಲಿ ಹೋಗುವಾಗ ಬಸ್‌ ಡಿಕ್ಕಿ; ಕೆಳಗೆ ಬಿದ್ದು ತಾಯಿ ಸಾವು

Bus Hit Bike lady dead

ಚಿಕ್ಕಬಳ್ಳಾಪುರ/ತುಮಕೂರು: ಚಲಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ (Road Accident) ಮೃತಪಟ್ಟರೆ, ಸವಾರ ಗಂಭೀರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ನೇತ್ರಾವತಿ ಎಂಬುವವರು ಸ್ಥಳದಲ್ಲಿ ಮೃತಪಟ್ಟರೆ, ಇವರ ಮಗ ರಾಜು ಗಂಭೀರ ಗಾಯಗೊಂಡಿದ್ದಾರೆ.

ಚಿಂತಾಮಣಿ ಕೋಲಾರ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳಗೆ ಬಿದ್ದ ರಭಸಕ್ಕೆ ನೇತ್ರಾವತಿ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಪರಿಣಾಮ ನೇತ್ರಾವತಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಗಾಯಾಳು ರಾಜುವಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಟಾಟಾ ಏಸ್‌ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ತುಮಕೂರಿನ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಬೇಗೂರು ಬಳಿ ಟಾಟಾ ಏಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚನ್ನರಾಯಪಟ್ಟಣ ಮೂಲದ‌ ಅಣ್ಣೇಗೌಡ(38), ನಿರಂಜನ್ (37) ಮೃತ ದುರ್ದೈವಿಗಳು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಣಿಗಲ್‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಟಾಟಾ ಏಸ್ ಚಾಲಕನನ್ನು ವಶಕ್ಕೆ ಪಡೆದಿರುವ ಕುಣಿಗಲ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Assault Case: ಹೊಳೆಹೊನ್ನೂರಲ್ಲಿ ಕೋಮು ಗಲಾಟೆ; ತಪ್ಪಾಯ್ತು ಅಂದ್ರು ಬಿಡದೇ ಟೈಲ್ಸ್‌, ದೊಣ್ಣೆಯಿಂದ ಹೊಡೆದ್ರು

Road Accident : ಚಲಿಸುತ್ತಿದ್ದಾಗಲೇ ಕಾರಿನ ಟೈರ್‌ ಸ್ಫೋಟ; ಹೆದ್ದಾರಿಯಲ್ಲಿ ಮತ್ತೆ ವ್ಹೀಲಿಂಗ್‌ ಹುಚ್ಚಾಟ

ಆನೇಕಲ್/ಹಾಸನ: ಕಾರಿನ ಟೈರ್ ಸ್ಫೋಟಗೊಂಡು ಬ್ಯಾರಿಕೇಡ್‌ (Road Accident) ಗುದ್ದಿದೆ. ಪರಿಣಾಮ ಸಮೀಪವೇ ಕಸ ಗುಡಿಸುತ್ತಿದ್ದ ಟೋಲ್ ಸಿಬ್ಬಂದಿ ಮೇಲೆ ಬ್ಯಾರಿಕೇಡ್ ಬಿದ್ದಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಟೋಲ್ ಬಳಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮೂವರು ಟೋಲ್ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಬಂದಿದ್ದ ಅತ್ತಿಬೆಲೆ ಪೊಲೀಸರು ಪರಿಶೀಲಿಸಿದ್ದಾರೆ. ತಮಿಳುನಾಡು ಮೂಲದ ಕಾರು ಚಾಲಕ ಮೂರ್ತಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.

ತ್ರಿಬಲ್‌ ರೈಡಿಂಗ್‌ ಜತೆಗೆ ವ್ಹೀಲಿಂಗ್‌

ಸಂಚಾರಿ ಪೊಲೀಸರು ಅದೆಷ್ಟೇ ವಾರ್ನಿಂಗ್‌ ಕೊಟ್ಟರೂ ಪುಂಡರ ಹುಚ್ಚಾಟ ಮಾತ್ರ ಕಡಿಮೆ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡಿ ಇತರೆ ವಾಹನ ಸವಾರರಿಗೆ ಕಾಟ ಕೊಡುತ್ತಿದ್ದಾರೆ. ಹಾಸನ- ಮೈಸೂರು ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಘಟನೆ ನಡೆದಿದೆ.

ಮೂರ್ನಾಲ್ಕು ಬೈಕ್‌ನಲ್ಲಿ ಒಟ್ಟೊಟ್ಟಿಗೆ ಬರುವ ಈ ಪುಂಡಾರು ತ್ರಿಬಲ್ ರೈಡಿಂಗ್ ಮಾಡುತ್ತಾ ಇಡೀ ರಸ್ತೆಯನ್ನು ಆವರಿಸಿಕೊಂಡು ತೊಂದರೆ ನೀಡುತ್ತಿದ್ದಾರೆ. ಯುವಕರ ಹುಚ್ಚಾಟದ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಿತ್ಯವೂ ಇಂತಹ ವ್ಹೀಲಿಂಗ್ ಪುಂಡರಿಂದ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

ಸ್ವಲ್ಪ‌ ಯಡವಟ್ಟಾದರೂ ಜೀವಕ್ಕೆ ಕುತ್ತು ಬರಲಿದೆ. ರಸ್ತೆಯಲ್ಲಿ ಇತರೆ ವಾಹನಗಳಿಗೂ ಸೈಡ್ ಕೂಡದೇ ವ್ಹೀಲಿಂಗ್ ಮಾಡುತ್ತಿದ್ದಾರೆ. ಇಂತಹ ಪುಂಡರಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version