Site icon Vistara News

Road Accident : ರಿಪ್ಪನ್‌ಪೇಟೆಯಲ್ಲಿ ಕಾರು ಗುದ್ದಿ ಬೈಕ್‌ ಸವಾರ ಗಂಭೀರ; ರಾಯಚೂರಲ್ಲಿ ಬೈಕ್‌ ಸವಾರನ ತಲೆ ಚೂರು!

Ripponpete accident

ಶಿವಮೊಗ್ಗ/ರಾಯಚೂರು: ಶಿವಮೊಗ್ಗ ಜಿಲ್ಲೆಯ ಹೊಸನಗರದ ರಿಪ್ಪನ್‌ಪೇಟೆಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ (Road Accident) ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ರಾಯಚೂರು ಜಿಲ್ಲೆಯ ಲಿಂಗಸಗೂರು (Lingasagur in Raichur district) ತಾಲೂಕಿನ ಅಮರೇಶ್ವರ ಕ್ರಾಸ್ ಬಳಿ ಬೈಕ್‌ಗೆ ಗೂಡ್ಸ್‌ ವಾಹನವೊಂದು (Goods Vehicle) ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನ ತಲೆ ಚೂರು ಚೂರಾಗಿದೆ.

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ (Riponpet in Hosanagara) ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿ ಸೇತುವೆ ಬಳಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ.

ಬೈಕ್‌ಗೆ ಡಿಕ್ಕಿ ಹೊಡೆದ ಕಾರು

ಇದನ್ನೂ ಓದಿ: Shakti Scheme Effect : ಬಸ್‌ನೊಳಗೆ ಜಾಗವಿಲ್ಲದೆ ಪುಟ್ಟ ಕಂದನ ಕೈಯಲ್ಲಿ ಹಿಡಿದು ಬಾಗಿಲಲ್ಲೇ ಕುಳಿತು ಪ್ರಯಾಣಿಸಿದ ಮಹಿಳೆ

ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರದ ಕಡೆಗೆ ಬೈಕ್ ತೆರಳುತಿದ್ದರೆ, ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಕಾರು ಬರುತಿತ್ತು. ಅಲಗೇರಿಮಂಡ್ರಿಯ ಮಂಜುನಾಥ್ (21) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಹೊಸನಗರದ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ಮಂಜುನಾಥ್‌ ಅವರ ಬಲಗಾಲು ಮುರಿತಕ್ಕೊಳಗಾಗಿದೆ. ಅವರಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂಬದಿ ಸವಾರ ಹೇಮಂತ್ (21) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: Shakti Scheme : ಮಹಿಳೆಯರ ಉಚಿತ ಪ್ರಯಾಣದ ಸ್ಮಾರ್ಟ್‌ ಕಾರ್ಡ್‌; ಹುಟ್ಟಿದ ಹೊಸ ಕಥೆ!

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪಿಎಸ್‌ಐ ಪ್ರವೀಣ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ವಿಳಂಬವಾದ ಹಿನ್ನೆಲೆಯಲ್ಲಿ ಪೊಲೀಸ್ ವಾಹನದಲ್ಲೇ ಗಾಯಾಳುಗಳನ್ನು ಸ್ಥಳಾಂತರ ಮಾಡಿದ್ದಾರೆ. ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಿಂಗಸಗೂರಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು

ರಾಯಚೂರಿನಲ್ಲಿ ಬೈಕ್‌ ಸವಾರ ಸಾವು

ಲಿಂಗಸಗೂರು ತಾಲೂಕಿನ ಅಮರೇಶ್ವರ ಕ್ರಾಸ್ ಬಳಿ ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ ಸವಾರನ ತಲೆ ಚೂರು ಚೂರಾಗಿ ಮೆದುಳು ಹೊರ ಬಂದಿದೆ.

ಅಪಘಾತಕ್ಕೊಳಗಾದ ಕಾರು

ಇದನ್ನೂ ಓದಿ: Tourism Policy : ಇನ್ನೊಂದೇ ತಿಂಗಳಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿ

ಮತ್ತಣ್ಣ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ತಲೆಯಿಂದ‌ ಮೆದುಳು ಹೊರಕ್ಕೆ ಬಂದಿದೆ. ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Exit mobile version