ತುಮಕೂರು/ಗದಗ: ತುಮಕೂರಿನ ಚಿಕ್ಕನಾಯನಹಳ್ಳಿಯಲ್ಲಿ ಪಟ್ಟಣದಲ್ಲಿ ವೃದ್ಧೆಗೆ ವೇಗವಾಗಿ (Fast Driving) ಬಂದ ಸಿಮೆಂಟ್ ಲಾರಿಯೊಂದು ಡಿಕ್ಕಿ (Lorry Accident) ಹೊಡೆದಿದೆ. ಅಪಘಾತದಲ್ಲಿ (Road Accident) ಗಾಯಗೊಂಡ ವೃದ್ಧೆ ರಸ್ತೆಯಲ್ಲೇ ನರಳಾಡಿದ್ದಾರೆ. ಆಂಬ್ಯುಲೆನ್ಸ್ ಬಾರದ ಕಾರಣಕ್ಕೆ ರಕ್ತದ ಮಡುವಿನಲ್ಲೇ ಅರ್ಧ ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾರೆ.
ಇತ್ತ ನೋವಿನಿಂದ ನರಳಾಡುತ್ತಿದ್ದ ವೃದ್ಧೆಯನ್ನು ಸ್ಥಳೀಯರೇ ಆಟೋ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳು ಕೊಡ್ಲಾಪುರ ಗ್ರಾಮದ ಗೌರಮ್ಮ ಎಂದು ತಿಳಿದುಬಂದಿದೆ. ತಾಲೂಕು ಆಸ್ಪತ್ರೆಯಲ್ಲಿ ಗೌರಮ್ಮಗೆ ಚಿಕಿತ್ಸೆ ನೀಡಲಾಗುತ್ತಿದೆ.
ತರಕಾರಿಯನ್ನು ಖರೀದಿ ಮಾಡಿ ಮನೆಗೆ ವಾಪಸ್ ಆಗುವಾಗ ಸರ್ಕಾರಿ ಶಾಲೆ ಮುಂಭಾಗ ವೇಗವಾಗ ಬಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ಅಜಾಗರೂಕತೆಯಿಂದ ವೃದ್ಧೆ ಗೌರಮ್ಮ ಅವರ ಎಡಗಾಲು ಮುರಿದುಹೋಗಿದೆ.
ಇದನ್ನೂ ಓದಿ: Physical Abuse : ನೂರು ಡಾಲರ್ ಆಫರ್ ಮಾಡಿ ಗಗನ ಸಖಿ ಮೈ ಮುಟ್ಟಿದ ಮಾಲ್ಡೀವ್ಸ್ ಪ್ರಜೆ ಅರೆಸ್ಟ್!
ಚಲಿಸುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ
ಗದಗ ನಗರದ ಧೋಬಿ ಘಾಟ್ ಬಳಿಯ ಪಾರ್ವತಿ ಪೆಟ್ರೋಲ್ ಬಂಕ್ ಎದುರು ಆಗಷ್ಟೇ ಕಾರೊಂದು ಪೆಟ್ರೋಲ್ ಹಾಕಿಸಿಕೊಂಡು ಮುಖ್ಯರಸ್ತೆಗೆ ಬಂದಿತ್ತು. ಇನ್ನೇನು ರೋಡ್ ಕ್ರಾಸ್ ಮಾಡಬೇಕು ಎನ್ನುವಾಗ ಬೈಕ್‌ವೊಂದು ಡಿಕ್ಕಿ ಹೊಡೆದಿದೆ.
ಇಲ್ಲಿದೆ ನೋಡಿ ಅಪಘಾತದ ವಿಡಿಯೋ
ಪೆಟ್ರೋಲ್ ಬಂಕ್‌ನಿಂದ ನಿಧಾನವಾಗಿ ರಸ್ತೆಗೆ ಬಂದ ಇಂಡಿಕಾ ಕಾರು ಬೈಕ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಸವಾರ ಹಾಗೇ ತಟಸ್ಥವಾಗಿ ಗಾಡಿ ಜತೆಗೆ ನಿಂತಿದ್ದರೆ, ಇತ್ತ ಯೂಟರ್ನ್ ತೆಗೆದುಕೊಳ್ಳುತ್ತಲೇ ರಸ್ತೆ ಮಧ್ಯದ ಡಿವೈಡರ್ ಫುಟ್ ಮೇಲೆ ಏರಿ ಬಳಿಕ ರಸ್ತೆಗೆ ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಹಾಗೂ ಬೈಕ್ ಅಪಘಾತದ ದೃಶ್ಯ ಪಕ್ಕದ ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ