Site icon Vistara News

Road Accident : ಅತಿ ವೇಗ ತಂದ ಆಪತ್ತು; ಬೆಂಗಳೂರಲ್ಲಿ ಬಸ್‌ ಹರಿದು ಬೈಕ್‌ ಸವಾರ ಸಾವು

The bus collided with the bike Rider death

ಬೆಂಗಳೂರು: ಖಾಸಗಿ ಬಸ್ ಹರಿದು ಬೈಕ್ ಸವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಮುರುಳಿ (40) ಮೃತ ದುರ್ದೈವಿ. ಬೆಂಗಳೂರಿನ ನಾಗರಾಬಾವಿ ರಿಂಗ್ ರಸ್ತೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಅಪಘಾತ (Road Accident) ನಡೆದಿದೆ.

ಮುರುಳಿ ಬೈಕ್‌ನಲ್ಲಿ ತೆರಳುತ್ತಿದ್ದಾಗ, ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಮುರುಳಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮುರುಳಿ ತಲೆ ಮೇಲೆ ಬಸ್‌ ಚಕ್ರ ಹರಿದಿದೆ. ಪರಿಣಾಮ ಸ್ಥಳದಲ್ಲೇ ಮುರುಳಿ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಖಾಸಗಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Dog Attack: ಬೆಳಗಾವಿಯಲ್ಲಿ ಬೀದಿ ನಾಯಿಗಳ ದಾಳಿ; 4 ಮಕ್ಕಳಿಗೆ ಗಾಯ

ಚಿಕ್ಕಬಳ್ಳಾಪುರ‌ದಲ್ಲಿ ಭೀಕರ ಅಪಘಾತ; ಟ್ರಾಕ್ಟರ್‌ ಇಂಜಿನ್‌ ಪೀಸ್‌ ಪೀಸ್‌

ಖಾಸಗಿ ಬಸ್ ಹಾಗು ಟ್ರಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಟ್ರಾಕ್ಟರ್ ಇಂಜಿನ್‌ ಪೀಸ್‌ ಪೀಸ್‌ ಆಗಿದೆ. ಬೆಂಗಳೂರು ಕಡಪ ಮುಖ್ಯರಸ್ತೆಯ ಮುನಗನಹಳ್ಳಿ ಗೇಟ್ ಬಳಿ ಅಪಘಾತ‌ ನಡೆದಿದೆ.

ಚಿಂತಾಮಣಿ ತಾಲೂಕಿನ ಮುನಗನಹಳ್ಳಿ ಗೇಟ್‌ ಮೂಲಕ ಖಾಸಗಿ ಬಸ್‌ ಪಿಲ್ಲಗುಂಪೆ ಗಾರ್ಮೆಂಟ್ ಫ್ಯಾಕ್ಟರ್‌ಗೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಅದೃಷ್ಟವಶಾತ್ ಟ್ರಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯವಾಗಿದ್ದು, ಚಿಂತಾಮಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version