Site icon Vistara News

Self Harming: ಬ್ಯಾಂಕ್‌ನಿಂದ ಕಿರುಕುಳ ಆರೋಪ; ವಿಕಾಸಸೌಧದೆದುರು ದಂಪತಿಯಿಂದ ಆತ್ಮಹತ್ಯೆ ಹೈಡ್ರಾಮಾ

Self Harming case infront of Vikas Soudha

ಬೆಂಗಳೂರು: ಖಾಸಗಿ ಬ್ಯಾಂಕ್‌ನಲ್ಲಿ (Private Bank) ಪಡೆದುಕೊಂಡಿದ್ದ ಸಾಲಕ್ಕೆ ದುಪ್ಪಟ್ಟು ಹಣ ಕಟ್ಟಿದರೂ ಕಿರುಕುಳ ನಿಂತಿಲ್ಲ ಎಂದು ಆರೋಪಿಸಿ ಕುಟುಂಬವೊಂದು ವಿಕಾಸಸೌಧದ ಮುಂದೆ ಆತ್ಮಹತ್ಯೆಗೆ (Self Harming) ಯತ್ನಿಸಿದೆ. ಕೂಡಲೇ ಅವರನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದಿದ್ದಾರೆ.

ವಿಕಾಸಸೌಧದ ಮುಂದೆ ಬಂದಿದ್ದ ಶಾಯಿಸ್ತಾ ಬಾನು ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿ ಏಕಾಏಕಿ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದಾರೆ. ತಮಗೆ ಅನ್ಯಾಯವಾಗಿದೆ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೂಗಿಕೊಡಿದ್ದಾರೆ. ಆದರೆ, ಅಷ್ಟರಲ್ಲಿ ವಿಕಾಸಸೌಧದ ಕಾವಲಿಗೆ ಇದ್ದ ಪೊಲೀಸರು ಅವರನ್ನು ತಡೆದಿದ್ದು, ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Coronavirus News: ಬಳ್ಳಾರಿಯಲ್ಲಿ ಕೋವಿಡ್‌ಗೆ ಮಹಿಳೆ ಬಲಿ

ಏನಿದು ಪ್ರಕರಣ?

ಜೆಜೆ ನಗರದಲ್ಲಿ ಶಾಯಿಸ್ತಾ ಬಾನು ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿಯ ಮನೆಯ ಇದೆ. ಈ ಮನೆ ಮೇಲೆ 50 ಲಕ್ಷ ರೂಪಾಯಿ ಸಾಲವನ್ನು ಈ ಕುಟುಂಬವು ಪಡೆದಿದೆ ಎನ್ನಲಾಗಿದೆ. ಈ ಸಾಲಕ್ಕೆ ಈಗ ಬಡ್ಡಿ ಸೇರಿ ಒಟ್ಟು 97 ಲಕ್ಷ ರೂಪಾಯಿಯನ್ನು ಕಟ್ಟಿದರೂ ಬ್ಯಾಂಕ್‌ನಿಂದ ಕಿರುಕುಳ ತಪ್ಪಿಲ್ಲ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ತಮಗೆ ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಮೇಲೆ ಕೇಸ್ ದಾಖಲು

ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಮೇಲೆ ಈಗ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಐಪಿಸಿ 309 (ಆತ್ಮಹತ್ಯೆಗೆ ಯತ್ನ) ಹಾಗೂ ಐಪಿಸಿ 290 (ಸಾರ್ವಜನಿಕ ಸ್ಥಳಗಳಲ್ಲಿ ದುರ್ವರ್ತನೆ ) ಅಡಿ ಕೇಸ್ ದಾಖಲಾಗಿದೆ. ಶಾಯಿಸ್ತಾ ಬಾನು ಹಾಗು ಮೊಹಮದ್ ಮುನಾಯಿದ್ ಉಲ್ಲಾ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಆ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಠಾಣಾ ಜಾಮೀನಿನ ಮೇಲೆ ಅವರನ್ನು ಪೊಲೀಸರು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.

POCSO Case: ಬಾಗೇಪಲ್ಲಿಯಲ್ಲಿ 14 ವರ್ಷದ ಬಾಲಕಿಗೆ ಹೆರಿಗೆ!

ಚಿಕ್ಕಬಳ್ಳಾಪುರ: ತುಮಕೂರು ಜಿಲ್ಲೆಯ ಮಧುಗಿರಿ ಹಾಸ್ಟೆಲ್‌ನಲ್ಲಿದ್ದ (Madhugiri Hostel) 14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಆರೋಪಿ ಮೇಲೆ ಪೋಕ್ಸೋ (POCSO Case) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದ್ದುಕೊಂಡು ಈಕೆ 9ನೇ ತರಗತಿ ಓದುತ್ತಿದ್ದಳು. ಈ ಮಧ್ಯೆ ಗರ್ಭಿಣಿಯಾಗಿದ್ದು, ಈಗ ಹೆರಿಗೆಯಾಗಿದೆ. ಆದರೆ, ತನಗೆ ಹೀಗಾಗಿರುವ ವಿಚಾರವನ್ನು ಆಕೆ ಭಯದಿಂದ ಮುಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಬಾಗೇಪಲ್ಲಿ ತಾಲೂಕಿನ ಕನ್ನಂಪಲ್ಲಿ ಗ್ರಾಮದಲ್ಲಿ ತಾಯಿ ಜತೆಗೆ ಇದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ತಾಯಿಯು ಮಗಳನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಈಕೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಇದು ಹೊಟ್ಟೆನೋವಲ್ಲ, ಹೆರಿಗೆ ನೋವು ಎಂದು ಹೇಳಿದ್ದಾರೆ. ಇದರಿಂದ ತಾಯಿ – ಮಗಳಿಗೆ ಆಕಾಶವೇ ಕಳಚಿಬಿದ್ದಂತೆ ಆಗಿದೆ. ಕೂಡಲೇ ಆಕೆಗೆ ಹೆರಿಗೆ ಮಾಡಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಎಐಸಿಸಿ ಪಟ್ಟಿಯನ್ನೇ ಬದಲಾಯಿಸಿದ ಡಿಕೆಶಿ; ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸ್ಥಾನ!

ಮಗುವಿನ ತೂಕ 2.2 ಕೆಜಿ ಇದ್ದು, ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈಗ ಬಾಲಕಿಯ ಈ ಪರಿಸ್ಥಿತಿಗೆ ಕಾರಣವಾದವನಿಗಾಗಿ ಹುಡುಕಾಟ ನಡೆಸಲಾಗಿದೆ. ಈ ಬಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Exit mobile version