Site icon Vistara News

Self Harming : 6ನೇ ಮಹಡಿಯಿಂದ ಜಿಗಿದು ಪಿಇಎಸ್‌ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

Student commits suicide by jumping from 6th floor of PES College

ಬೆಂಗಳೂರು: ಬೆಂಗಳೂರಿನ ಹೊಸರೋಡ್‌ ಬಳಿ ಇರುವ ಪಿಇಎಸ್ ಕಾಲೇಜಿನ (PES College) ಆರನೇ ಅಂತಸ್ತಿನಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Self harming Case) ಮಾಡಿಕೊಂಡಿದ್ದಾನೆ. ವಿಘ್ನೇಶ್.ಕೆ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಂಗಸಂದ್ರದ ರಾಘವೇಂದ್ರ ಲೇಔಟ್ ನಿವಾಸಿಯಾಗಿರುವ ವಿಘ್ನೇಶ್‌, ಪಿಇಎಸ್‌ ಕಾಲೇಜಿನಲ್ಲಿ ಬಿಬಿಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ. ಸಂಜೆ ಹೊತ್ತಿಗೆ ಎಂಜಿನಿಯರಿಂಗ್ ವಿಭಾಗದ ಆರನೇ ಮಹಡಿಗೆ ಬಂದವನೇ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೇಲಿಂದ ಬಿದ್ದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ವಿಘ್ನೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.‌

ಇದನ್ನೂ ಓದಿ: Forced Conversion : ಶಿರಸಿಯಲ್ಲಿ ಮತಾಂತರಕ್ಕೆ ಪ್ರಚೋದನೆ; ಮಹಿಳೆಯರು ಸೇರಿ ಆರು ಮಂದಿ ಬಂಧನ

Murder Case: ತಲೆ ಮೇಲೆ ಕಲ್ಲು ಹಾಕಿ, ಬೆಂಕಿ ಹಚ್ಚಿ ಕೊಲೆ! ಅನೈತಿಕ ಸಂಬಂಧ ಕಾರಣವೇ?

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಹತ್ಯೆ (Murder Case) ಬಳಿಕ ಬೆಂಕಿ ಹಾಕಿ ಸುಡಲಾಗಿದೆ. ಆದರೆ, ಮೃತದೇಹ ಅರೆಬರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹುಬ್ಬಳ್ಳಿ- ಕಲಘಟಗಿ ರಸ್ತೆಯ ಎಂಟಿಎಸ್ ಕಾಲನಿ ಬಳಿ ಘಟನೆ ನಡೆದಿದೆ. ಮಾರುತಿ ನಗರದ ನಿವಾಸಿ ವಿಜಯ ಬಸವ (25) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ವಿಜಯ ಬಸವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಎಂಟಿಎಸ್ ಕಾಲನಿ ಬಳಿಯ ರಸ್ತೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Hubballi Murder Case investigation

ಮುಖ, ಮೈಕೈ ಸುಟ್ಟಿದ್ದರಿಂದ ಮೊದಲಿಗೆ ಈತ ಯಾರು ಎಂಬುದು ಗುರುತು ಸಿಕ್ಕಿರಲಿಲ್ಲ. ಆದರೆ, ಆತನ ಬಲಗೈ ವೈಕಲ್ಯಕ್ಕೆ ಒಳಗಾಗಿದ್ದರಿಂದ ಅದರ ಜಾಡು ಹಿಡಿದು ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈಗ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Old Pension Scheme: ಹಳೇ ಪಿಂಚಣಿಗೆ ಅರ್ಜಿ ಸಲ್ಲಿಸಬೇಕೇ? ನಿಮ್ಮ ಬಳಿ ಇರಲಿ ಈ ದಾಖಲೆಗಳು

ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Road Accident: ರೈತ ನಾಯಕ ಜೆ. ಕಾರ್ತಿಕ್‌ ರಸ್ತೆ ಅಪಘಾತದಲ್ಲಿ ಸಾವು; ಕೊಲೆ ಶಂಕೆ

ವಿಜಯನಗರ:‌ ರಸ್ತೆ ಅಪಘಾತವೊಂದರಲ್ಲಿ (Road Accident) ರಾಜ್ಯ ವ್ಯಾಪ್ತಿಯ ರೈತ ನಾಯಕ (Farmer Leader) ಜೆ. ಕಾರ್ತಿಕ್ (40) ಮೃತಪಟ್ಟಿದ್ದಾರೆ. ಅಪಘಾತ ನಡೆದ ರೀತಿ ನಿಗೂಢವಾಗಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೊಲೆ ಸಾಧ್ಯತೆಗಳನ್ನೂ (Murder Case) ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಬೂದಗುಂಪಾ ಕ್ರಾಸ್ ಬಳಿಯಲ್ಲಿ ಜೆ. ಕಾರ್ತಿಕ್‌ ಅವರು ಚಲಾಯಿಸುತ್ತಿದ್ದ ಬೈಕ್‌ ಹೆದ್ದಾರಿ ಬಳಿ ಬಿದ್ದಿದ್ದು, ಅದರ ಪಕ್ಕದಲ್ಲಿ ತೀವ್ರ ಗಾಯಗೊಂಡು ತಲೆಯಿಂದ ರಕ್ತ ಸೋರುತ್ತಿದ್ದ ಕಾರ್ತಿಕ್‌ ಕಂಡುಬಂದಿದ್ದರು. ಗಾಯಗೊಂಡಿದ್ದ ಕಾರ್ತಿಕ್‌ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4.30ರ ವೇಳೆ ಅವರು ಕೊನೆಯುಸಿರು ಎಳೆದಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿಯಾದ ಜೆ. ಕಾರ್ತಿಕ್ ಅವರು ಹೊಸಪೇಟೆಯಿಂದ ಕೊಪ್ಪಳದತ್ತ ಬೈಕ್ ಮೇಲೆ ತೆರಳುತ್ತಿದ್ದರು ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಅಪಘಾತದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲವಾದುದರಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ, ಹಿಟ್ ಆ್ಯಂಡ್ ರನ್ ಆಗಿದೆಯೋ ತಿಳಿದುಬಂದಿಲ್ಲ.

ಹೊಸಪೇಟೆಯ ನಿವಾಸಿ ಕಾರ್ತಿಕ್ ನಾನಾ ರೈತರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದಲ್ಲಿದ್ದರು. ನಂತರ ಕೋಡಿಹಳ್ಳಿ ಚಂದ್ರಶೇಖರ್ ಬಣದಿಂದ ಹೊರಬಂದು ಸ್ವತಃ ಸಂಘವೊಂದನ್ನು ಕಟ್ಟಿದ್ದರು. ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆ ಅನ್ನುವ ಸಂಘದಲ್ಲಿ ಸಕ್ರಿಯರಾಗಿದ್ದರು.

ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದ ಕಾರ್ತಿಕ್ ಸಾವಿನ ಹಿಂದೆ ಹಲವು ಅನುಮಾನ ಎದ್ದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version