Site icon Vistara News

Self Harming: ನೇಣು ಬಿಗಿದು ಮಹಿಳೆ ಆತ್ಮಹತ್ಯೆ; ವರದಕ್ಷಿಣೆ ಕಿರುಕುಳ ಆರೋಪ

students self harming

ಕಲಬುರಗಿ: ಕಲಬುರಗಿ‌ ನಗರದ ಭವಾನಿ ನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ (Dowry harassment) ಮಹಿಳೆಯೊಬ್ಬರು ನೇಣಿಗೆ (Self Harming) ಕೊರಳೊಡ್ಡಿದ್ದಾರೆ.

ಶಿವಾನಿ (22) ಜಮಾದಾರ್ ಆತ್ಮಹತ್ಯೆ ಮಾಡಿಕೊಂಡವರು. ಮೂರು ವರ್ಷದ ಹಿಂದೆ ಸಾಗರ್‌ ಎಂಬುವವರ ಜತೆ ಇವರಿಗೆ ವಿವಾಹವಾಗಿತ್ತು. ಕಳೆದ ಎರಡು ವರ್ಷದಿಂದ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಅತ್ತೆ, ಮಾವ ಹಾಗೂ ಪತಿ ಸೇರಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಶಿವಾನಿ ಸಾಕಷ್ಟು ಬಾರಿ ತನ್ನ ಪೋಷಕರ ಗಮನಕ್ಕೂ ತಂದಿದ್ದಾಳೆ ಎನ್ನಲಾಗಿದೆ. ಆದರೆ, ಪತಿಯ ಜತೆ ಅನುಸರಿಸಿಕೊಂಡು ಹೋಗುವಂತೆ ಮನೆಯವರು ಹೇಳಿದ್ದಾರೆ. ಮನೆಯಲ್ಲಿ ಕಿರುಕುಳ ವಿಪರೀತವಾಗಿದ್ದಕ್ಕೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕಲಬುರಗಿಯ ಚೌಕ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Physical Abuse : ಬಹಿರ್ದೆಸೆಗೆ ತೆರಳಿದ ಮಹಿಳೆ ಮೇಲೆ ಎರಗಿ ಬಲತ್ಕಾರ ಮಾಡಿದ ರಾಕ್ಷಸ

ಬೀದರ್: ಬಹಿರ್ದೆಸೆಗೆಂದು ತೆರಳಿದ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿದ ಕಲಿಯುಗ ರಾಕ್ಷಸನೊಬ್ಬ ಬಲವಂತವಾಗಿ (Physical Abuse) ಅತ್ಯಾಚಾರ ಎಸಗಿದ್ದಾನೆ. ಈ ಅಮಾನವೀಯ ಘಟನೆ ಬೀದರ್ (Bidar News) ತಾಲೂಕಿನ ಚಾಂಬೋಳ ಗ್ರಾಮದಲ್ಲಿ ನಡೆದಿದೆ.

ಮೂವರು ಮಕ್ಕಳಿರುವ ಸಂತ್ರಸ್ತೆ ಅನಾರೋಗ್ಯವೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಬಹಿರ್ದೆಸೆಗೆ ತೆರಳಿದ್ದಾಗ ಅಲ್ಲಿಗೆ ಬಂದ ಪಾಪಿಯೊಬ್ಬ ಮಹಿಳೆ ಮೇಲೆ ಎರಗಿದ್ದಾನೆ. ಆಕೆಗೆ ಹೊಡೆದು ಬಡಿದು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ತೀವ್ರ ಅಸ್ವಸ್ತಳಾಗಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಜನವಾಡಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜನವಾಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Theft Case : ಕಳ್ಳತನಕ್ಕೆ ದೇವರೇ ಪಾರ್ಟ್ನರ್;‌ ಕದ್ದ ಚಿನ್ನದಲ್ಲಿ ಮಲೆ ಮಹದೇಶ್ವರನಿಗೂ ಪಾಲು

ಇದೆಂಥಾ ಮೂರ್ಖತನ; ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ

ಅಜ್ಮೀರ್: ಸಾಮೂಹಿಕ ಅತ್ಯಾಚಾರಕ್ಕೆ (Physical Abuse) ಒಳಗಾಗಿದ್ದರಿಂದ ಶಾಲೆಯ ಬೋರ್ಡ್ ಪರೀಕ್ಷೆಗೆ (board exam) ಹಾಜರಾಗಲು ನನಗೆ ಅವಕಾಶ ನೀಡಲಿಲ್ಲ ಎಂದು ರಾಜಸ್ಥಾನದ (Rajasthan ) 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (student) ಆರೋಪಿಸಿದ್ದಳು. ಕಳೆದ ವರ್ಷ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದರಿಂದ ಸರಿ ಸುಮಾರು ನಾಲ್ಕು ತಿಂಗಳು ಕಾಲೇಜಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಲೆಯು ಬೋರ್ಡ್ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲ. ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ನೀಡಲಿಲ್ಲ ಎಂದು ಅಜ್ಮೀರ್‌ನ ಖಾಸಗಿ ಶಾಲೆಯ (ajmer private school) ವಿದ್ಯಾರ್ಥಿನಿ ದೂರಿದ್ದಳು.

ನಾನು ಪರೀಕ್ಷೆಗೆ ಹಾಜರಾದರೆ ವಾತಾವರಣ ಹಾಳಾಗುತ್ತದೆ ಎಂದು ಶಾಲಾ ಅಧಿಕಾರಿಗಳು ಹೇಳಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಳು. ಈ ಬಗ್ಗೆ ವಿದ್ಯಾರ್ಥಿನಿ ಬೇರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅವರು ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಸಲಹೆ ನೀಡಿದರು.

ಪ್ರಕರಣ ದಾಖಲು

ಈ ಕುರಿತು ಅಜ್ಮೀರ್‌ನ ಮಕ್ಕಳ ಕಲ್ಯಾಣ ಆಯೋಗ (CWC) ಪ್ರಕರಣ ದಾಖಲಿಸಿದೆ. ತನಿಖೆಯ ಬಳಿಕ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಬಗ್ಗೆ ವಿದ್ಯಾರ್ಥಿಯೊಂದಿಗೆ ಮಾತನಾಡಿದ್ದೇನೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಅಂಜಲಿ ಶರ್ಮಾ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪ ಮತ್ತು ಇತರ ಇಬ್ಬರು ಪುರುಷರು ಅತ್ಯಾಚಾರ ಮಾಡಿದ್ದರು. ಅವಳು ಶಾಲೆಗೆ ಬರುವುದರಿಂದ ಶಾಲೆಯ ವಾತಾವರಣ ಹಾಳಾಗುತ್ತದೆ ಎಂದು ಶಾಲೆಯವರು ಮನೆಯಿಂದಲೇ ಓದುವಂತೆ ಸೂಚಿಸಿದ್ದಾರೆ. ಇದಕ್ಕೆ ಅವಳು ಒಪ್ಪಿಕೊಂಡಳು ಮತ್ತು ಮನೆಯಲ್ಲಿ ತನ್ನ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು ಎಂದು ಅಂಜಲಿ ಶರ್ಮಾ ತಿಳಿಸಿದ್ದಾರೆ.


ಶಾಲೆಗೆ ಪ್ರವೇಶ ನಿರಾಕರಣೆ

ಬೋರ್ಡ್ ಪರೀಕ್ಷೆ ಬರೆಯಲು ಆಕೆ ತನ್ನ ಪ್ರವೇಶ ಪತ್ರವನ್ನು ಪಡೆಯಲು ಹೋದಾಗ ಶಾಲಾ ಅಧಿಕಾರಿಗಳು ನೀನು ಇನ್ನು ಮುಂದೆ ಶಾಲೆಯ ವಿದ್ಯಾರ್ಥಿಯಲ್ಲ ಎಂದು ಹೇಳಿದರು. ಆಕೆಯ ಮೇಲೆ ಅತ್ಯಾಚಾರವಾದ ಬಳಿಕ ಇತರ ವಿದ್ಯಾರ್ಥಿಗಳ ಪೋಷಕರು ಆಕೆ ಶಾಲೆಗೆ ಬರುವುದನ್ನು ವಿರೋಧಿಸಿದ್ದರಿಂದ ಶಾಲೆಯ ಅಧಿಕಾರಿಗಳು ಆಕೆ ಶಾಲೆಗೆ ಪ್ರವೇಶಿಸದಂತೆ ನಿರ್ಬಂಧಿಸಿರುವುದಾಗಿ ಅವಳಿಗೆ ತಿಳಿಯಿತು.

ಶೈಕ್ಷಣಿಕವಾಗಿ ಉತ್ತಮ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿನಿ ಈ ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದಾಳೆ. ಅವಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ. 79 ಅಂಕಗಳಿಸಿದ್ದಳು. ಅವಳು 12 ನೇ ಬೋರ್ಡ್‌ ಪರೀಕ್ಷೆ ಉತ್ತಮವಾಗಿ ಬರೆಯುತ್ತಿದ್ದಳು. ಆದರೆ ಶಾಲೆಯ ನಿರ್ಲಕ್ಷ್ಯದಿಂದಾಗಿ ಅವಳು ಒಂದು ವರ್ಷ ಕಳೆದುಕೊಳ್ಳುವಂತಾಗಿದೆ ಎಂದು ಅಂಜಲಿ ಶರ್ಮಾ ಹೇಳಿದ್ದಾರೆ.

Exit mobile version