ಗುಜರಾತ್ನ ವಿಶ್ವವಿದ್ಯಾಲಯವೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಹಿರಿಯ ವಿದ್ಯಾರ್ಥಿಗಳು ನೀಡುತ್ತಿದ್ದ ಚಿತ್ರಹಿಂಸೆಗೆ ಹೈರಾಣಾಗಿದ್ದಾನೆ. ಅಲ್ಲಿನ ರಾಜಕೋಟ್ನಲ್ಲಿರುವ ಮಾರ್ವಾಡಿ ವಿಶ್ವವಿದ್ಯಾನಿಲಯದಲ್ಲಿ ಈತ ಓದುತ್ತಿದ್ದ. ಅದೇ ಯೂನಿವರ್ಸಿಟಿಯ ಹಾಸ್ಟೆಲ್ನಲ್ಲಿಯೇ ಇದ್ದ. ಆದರೆ ಒಂದು ದಿನ ಮನೆಗೆ ಫೋನ್ ಮಾಡಿ, ತನ್ನ ಅಕ್ಕನ ಬಳಿ ಮಾತನಾಡುತ್ತ ದೊಡ್ಡದಾಗಿ ಅತ್ತಿದ್ದಾನೆ. ‘ನಾನಿಲ್ಲಿ ಯಾವ ಕಾರಣಕ್ಕೂ ಇರುವುದಿಲ್ಲ. ನನ್ನನ್ನು ಕರೆದುಕೊಂಡು ಹೋಗಿ’ ಎಂದು ತುಂಬ ದಯನೀಯವಾಗಿ ಬೇಡಿಕೊಂಡಿದ್ದ. ಆತನ ಸಹೋದರಿಗೆ ಅನುಮಾನ ಬಂದು, ತಂದೆಯನ್ನು ಕರೆದುಕೊಂಡು ಹುಡುಗನ ಹಾಸ್ಟೆಲ್ಗೆ ಬಂದಾಗಲೇ ಸಂಪೂರ್ಣ ಸತ್ಯ ಹೊರಬಿತ್ತು. ಆ ಹುಡುಗನಿಗೆ ಅವನ ಹಿರಿಯ ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ನೀಡಿದ್ದರು. ಅಷ್ಟೇ ಅಲ್ಲ, ಖಾಸಗಿ ಅಂಗವನ್ನೇ ಕತ್ತರಿಸುವ ಬೆದರಿಕೆಯನ್ನೂ ಹಾಕಿದ್ದರು. ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.
ಅದೇ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳು ಈ ಹುಡುಗ ಸ್ನಾನ ಮಾಡುವ ವಿಡಿಯೊವೊಂದನ್ನು ಚಿತ್ರೀಕರಣ ಮಾಡಿಟ್ಟುಕೊಂಡಿದ್ದರು. ಅದನ್ನು ತೋರಿಸಿ ಸದಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಹೇಳಿದಂತೆ ಕೇಳದೆ ಇದ್ದರೆ ವಿಡಿಯೊ ಲೀಕ್ ಮಾಡುತ್ತೇವೆ ಎಂದು ಹೆದರಿಸುತ್ತಿದ್ದರು. ಅಷ್ಟೇ ಅಲ್ಲ ಹುಡುಗನ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್, ಜೇನುತುಪ್ಪಗಳನ್ನೆಲ್ಲ ಅವರು ಹಾಕಿದ್ದರು. ಟೂತ್ಬ್ರಷ್, ಪೆನ್ಸಿಲ್ಗಳನ್ನು ತುರುಕಿ ಹಿಂಸೆಯನ್ನೂ ನೀಡಿದ್ದಾರೆ. ಇದೆಲ್ಲವನ್ನೂ ಈತ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ. ಹುಡುಗ ಕೊಟ್ಟ ದೂರಿನ ಅನ್ವಯ ಪೊಲೀಸರು ಐವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು, ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ಆ ಸೀನಿಯರ್ಸ್ಗಳು ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ಒಂದೋ ನೀನು ಹಾಸ್ಟೆಲ್ನ ಟೆರೇಸ್ನಿಂದ ಹಾರಬೇಕು, ಇಲ್ಲ ಕಿವಿ ಕತ್ತರಿಸಲು ಬಿಡಬೇಕು. ಅದಾಗದೆ ಇದ್ದರೆ ನಿನ್ನ ಖಾಸಗಿ ಅಂಗ ಕತ್ತರಿಸುತ್ತೇವೆ ಎಂದು ಕಿರಿಯ ವಿದ್ಯಾರ್ಥಿಯನ್ನು ಹೆದರಿಸಿದ್ದರು. ಇದರಿಂದಾಗಿ ಹುಡುಗ ತುಂಬ ಹೆದರಿದ್ದ. ಹೇಗಾದರೂ ಮನೆಗೆ ಹೋಗಬೇಕು ಎಂಬ ಧಾವಂತಕ್ಕೆ ಬಿದ್ದಿದ್ದ. ಅಕ್ಕಂಗೆ ಫೋನ್ ಮಾಡಿ ಅತ್ತಿದ್ದ.
ಹುಡುಗನ ಮೇಲಾದ ದೌರ್ಜನ್ಯ ಬೆಳಕಿಗೆ ಬರುತ್ತಿದ್ದಂತೆ ಯೂನಿವರ್ಸಿಟಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಗುಜರಾತ್ ರಾಜ್ಯಾಧ್ಯಕ್ಷ ನರೇಂದ್ರ ಸೋಲಂಕಿ ಅವರು ರಾಜ್ಯದ ಶಿಕ್ಷಣ ಸಚಿವರಿಗೆ ಪತ್ರ ಬರೆದು, ಈ ಖಾಸಗಿ ವಿಶ್ವ ವಿದ್ಯಾಲಯದ ಮಾನ್ಯತೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಮಾರ್ವಾಡಿ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗೆ ಇಷ್ಟು ದೊಡ್ಡ ದೌರ್ಜನ್ಯ ಆಗಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಗಮನಕ್ಕೆ ಬಾರದೆ ಇರುವುದು ಅದರ ಆಡಳಿತ ವೈಫಲ್ಯ ತೋರಿಸುತ್ತದೆ. ಮಕ್ಕಳನ್ನು ಇಲ್ಲಿಗೆ ಕಳಿಸಲು ಪಾಲಕರು ಹೆದರುವಂತಾಗಿದೆ. ಕೂಡಲೇ ಮಾನ್ಯತೆ ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Crime News | ಡ್ರಾಪ್ ಕೇಳುವ ನೆಪದಲ್ಲಿ ಹಣ, ಮೊಬೈಲ್ ದೋಚುತ್ತಿದ್ದ ಇಬ್ಬರು ಖದೀಮರ ಬಂಧನ