Site icon Vistara News

Shraddha murder | ಲವ್ ಜಿಹಾದ್‌ ತಡೆಗೆ ಪ್ರತ್ಯೇಕ ಕಾನೂನು ಜಾರಿಯಾಗಲಿ: ಡಾ. ದೀಕ್ಷಾ ಪೆಂಡಭಾಜೆ

ranaragini mahila foundation

ಮುಂಬಯಿ: ಮುಂಬಯಿಯ ಹಿಂದು ಯುವತಿ ಶ್ರದ್ಧಾ ವಾಲಕರ್ (Shraddha murder) ಅವರನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ಅಮಾನುಷವಾಗಿ ಕೊಲೆ ಮಾಡಿರುವ ಪ್ರಕರಣವು ಲವ್‌ ಜಿಹಾದ್‌ನ ಒಂದು ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಲವ್‌ ಜಿಹಾದ್‌ ತಡೆಗೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು ಎಂದು ಹಿಂದು ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯ ಸಮನ್ವಯಕಾರರಾದ ಡಾ. ದೀಕ್ಷಾ ಪೆಂಡಭಾಜೆ ಆಗ್ರಹಿಸಿದ್ದಾರೆ.

ಮುಂಬಯಿಯ ದಾದರ್ (ಪೂರ್ವ) ರೈಲು ನಿಲ್ದಾಣದ ಹೊರಾಂಗಣದಲ್ಲಿ ಹಿಂದು ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇಲ್ಲಿ ಆರೋಪಿ ಅಫ್ತಾಬ್‌ ಅಮೀನ್‌ ಪ್ರೀತಿಯ ನಾಟಕವಾಡಿದ್ದಾನೆ. ಆ ಮೂಲಕ ಯುವತಿಯನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡಿದ್ದಾನೆ. ನಿಜವಾಗಿ ಪ್ರೀತಿ ಮಾಡಿದವರು ಯಾರೂ ಸಹ ಕೊಲೆ ಮಾಡಲಾರರು. ಹೀಗಾಗಿ ಈ ಕೊಲೆಯ ಹಿಂದಿನ ಉದ್ದೇಶ ಏನು ಎಂಬುದನ್ನು ತನಿಖೆ ಮೂಲಕ ಬಯಲಿಗೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.

ಶ್ರದ್ಧಾ ವಾಲಕರ್‌ರನ್ನು ಪ್ರೀತಿಯ ಬಲೆಯಲ್ಲಿ ಕೆಡವಿದ್ದಲ್ಲದೆ, ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಿಸಿಕೊಂಡಿದ್ದಾನೆ. ಆದರೆ, ಯಾವಾಗ ಆಕೆ ವಿವಾಹವಾಗಲು ಒತ್ತಾಯ ಮಾಡಿದಳೋ ಆಗ ಕೊಲೆ ಮಾಡಿ ದೇಹವನ್ನು ತುಂಡು ತುಂಡು ಮಾಡಿ ವಿಕೃತಿ ಮೆರೆದಿದ್ದಾನೆ. ಇಂಥವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | ಚಿಕಿತ್ಸೆ ಬರುತ್ತಿದ್ದ ಮಹಿಳೆಯರ ವಿಡಿಯೊ ಮಾಡುತ್ತಿದ್ದ ವಿಕೃತ ವೈದ್ಯ ಪೊಲೀಸ್‌ ಬಲೆಗೆ!

ಹಿಂದು ಯುವತಿಯರನ್ನು ಮೋಸ ಮಾಡಿ ಪ್ರೇಮದ ಬಲೆಗೆ ಬೀಳಿಸಿ ಮತಾಂತರಿಸುವುದು, ಅವರೊಂದಿಗೆ ‘ನಿಕಾಹ್‌’ ಮಾಡಿಕೊಳ್ಳುವುದು, ಅದಕ್ಕೆ ನಿರಾಕರಿಸಿದರೆ ಅತ್ಯಾಚಾರ ಮಾಡುವುದು, ಬ್ಲ್ಯಾಕ್‌ಮೇಲ್ ಮಾಡುವುದು, ಕೊಲ್ಲುವುದು ಇತ್ಯಾದಿ ಸಾವಿರಾರು ಗಂಭೀರ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಈ ಘಟನೆಗಳು ಈಗ ನಿತ್ಯವಾಗಿ ಬಿಟ್ಟಿದೆ. ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸಲು ಈ ನರಾಧಮರು ನಮ್ಮ ಮನೆಗಳಿಗೆ ತಲುಪಿದ್ದಾರೆ. ಹಿಂದು ಪೋಷಕರು ಮತ್ತು ಹಿಂದು ಯುವತಿಯರು ಎಚ್ಚರಗೊಳ್ಳುವುದು ಯಾವಾಗ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ‘ಲವ್ ಜಿಹಾದ್ ವಿರೋಧಿ ಕಾಯ್ದೆ’ಯನ್ನು ಕೂಡಲೇ ಜಾರಿಗೊಳಿಸುವಂತೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲವ್ ಜಿಹಾದಿ ಅಫ್ತಾಬ್‌ನನ್ನು ಕೂಡಲೇ ಗಲ್ಲಿಗೇರಿಸಬೇಕು. ಈ ಕೆಲಸ ದೇಶಾದ್ಯಂತ ಆಗಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮೂಲಕ ಒತ್ತಾಯ ಮಾಡುತ್ತಿರುವುದಾಗಿ ದೀಕ್ಷಾ ಪೆಂಡಭಾಜೆ ಹೇಳಿದರು.

ಈ ಪ್ರತಿಭಟನೆಯಲ್ಲಿ ವಿವಿಧ ಹಿಂದು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ‘ಅಬಲೆ ಅಲ್ಲ ನೀನು ಸಬಲೆಯಾಗು, ಚಂಡಿ, ದುರ್ಗಾ, ಕಾಳಿ ಆಗು’, ‘ಲವ್ ಜಿಹಾದಿ ನರಾಧಮ ಅಫ್ತಾಬ್‌ನನ್ನು ಗಲ್ಲಿಗೇರಿಸಿ’, ‘ಲವ್ ಜಿಹಾದ್‌ ವಿರೋಧಿ ಕಾನೂನು ಜಾರಿಗೊಳಿಸಿ’ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಪ್ರದರ್ಶನ ಮಾಡಿ ಘೋಷಣೆಗಳನ್ನು ಕೂಗಲಾಯಿತು.

ಇದನ್ನೂ ಓದಿ | Delhi crime | ಶ್ರದ್ಧಾ ತಲೆಯನ್ನು ಫ್ರಿಜ್ಜಿನಲ್ಲಿಟ್ಟು ಪ್ರತಿದಿನ ನೋಡುತ್ತಿದ್ದ ಸೈಕೋ ಅಫ್ತಾಬ್

Exit mobile version