Site icon Vistara News

Gang Rape | ಜಾರ್ಖಂಡ್‌ನಲ್ಲಿ ಬಾಯ್‌ಫ್ರೆಂಡ್‌ ಜತೆ ಹೊರಗೆ ಹೋದ ಟೆಕಿ ಮೇಲೆ 10 ಮಂದಿಯಿಂದ ಅತ್ಯಾಚಾರ

Rape Sexual Harassment Banglore electronic city rape case

ರಾಂಚಿ: ದೇಶದಲ್ಲಿ ದಿನೇದಿನೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ ರಾಂಚಿಯಲ್ಲಿ 26 ವರ್ಷದ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಎಸಗಲಾಗಿದೆ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಯುವತಿ ಬಾಯ್‌ಫ್ರೆಂಡ್‌ ಜತೆ ಸುತ್ತಾಡಲು ಹೋದಾಗ 10 ಜನ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಕಳೆದ ಗುರುವಾರ ಸಂಜೆ ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯ ಚೈಬಾಸಾಗೆ ಯುವತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಇದೇ ವೇಳೆ ಪ್ರೇಮಿಗಳು ಇದ್ದ ಜಾಗಕ್ಕೆ ಆಗಮಿಸಿದ 10 ದುಷ್ಕರ್ಮಿಗಳು ಯುವತಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ 12 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.

ಇದನ್ನೂ ಓದಿ | Gang Rape | ಉತ್ತರ ಪ್ರದೇಶದಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌, ಗುಪ್ತಾಂಗಕ್ಕೆ ರಾಡ್‌ ತುರುಕಿ ವಿಕೃತಿ

Exit mobile version