ಮೊಳಕಾಲ್ಮೂರು: ಕಟ್ಟಿಕೊಂಡವನ ಕುಡಿತದ ಚಟ (Drinking addiction) ನೋಡಿ ನೋಡಿ ಸಾಕಾಗಿ ಹೆಂಡತಿ ಬಿಟ್ಟು ಹೋಗಿದ್ದಳು. ಕೊನೆಗೆ ಹೆತ್ತಮ್ಮನನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಪಾಪಿ ಮಗ, ಆಕೆ ಕುಡಿಯಲು ಹಣ ನೀಡಿಲ್ಲವೆಂದು ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ರೊಪ್ಪ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.
ರೊಪ್ಪ ಗ್ರಾಮದ 37 ವರ್ಷದ ಶಿವ ರೆಡ್ಡಿ ಎಂಬಾತ ಹೆತ್ತ ತಾಯಿಯಾದ 58 ವರ್ಷದ ಅಂಜಿನಮ್ಮ ಎಂಬುವರನ್ನು ಕೊಲೆಗೈದ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: Bangalore Kambala : ಬೆಂಗಳೂರಿನಲ್ಲಿ ಕಳೆಗಟ್ಟಿದ ಕಂಬಳದ ವೈಭವ: ಸಂಜೆ ಮ್ಯೂಸಿಕ್ ಬೀಟ್, ವಿಜೇತರಿಗೆ ಬಹುಮಾನ
ಕೊಲೆ ಆರೋಪಿಯಾಗಿರುವ ಶಿವ ರೆಡ್ಡಿ 10 ವರ್ಷಗಳಿಂದ ಮದ್ಯ ವ್ಯಸನಿಯಾಗಿದ್ದ. ಈತನ ಕುಡಿತದ ಚಟವನ್ನು ಕಂಡು ರೋಸಿ ಹೋಗಿದ್ದ ಮಡದಿ ಕಳೆದ ಎಂಟು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದಳು ಎಂದು ತಿಳಿದುಬಂದಿದೆ. ಪ್ರತಿನಿತ್ಯವೂ ಕುಡಿಯುವ ಅಭ್ಯಾಸವಿದ್ದ ಈತನಿಗೆ ಮದ್ಯಪಾನ ಮಾಡಲು ತಾಯಿ ಬಳಿ ಪೀಡಿಸುತ್ತಿದ್ದ. ಆಕೆ ದುಡ್ಡು ಕೊಡುವುದಿಲ್ಲ ಎಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದೆ.
ತಾಯಿಗೆ ಚೂರಿ ಇರಿದ
ಶನಿವಾರ ಸಂಜೆ ತನ್ನ ತಾಯಿಯ ಬಳಿ ಬಂದು ಕುಡಿಯಲು ಹಣ ಕೇಳಿದ್ದಾನೆ. ಆದರೆ, ಆಕೆ ಹಣ ಕೊಡಲು ನಿರಾಕರಿಸಿದ್ದಾಳೆ. ದುಡಿಯುವ ಯೋಗ್ಯತೆ ಇಲ್ಲದ ನಿನಗೆ ನಾನು ಹಣ ಕೊಡುವುದಿಲ್ಲ. ಹಣವನ್ನೆಲ್ಲ ನೀನು ಕುಡಿದು ಹಾಳು ಮಾಡುತ್ತಿದ್ದೀಯ ಎಂದು ರೇಗಿದ್ದಾಳೆ. ತಾಯಿ ಕುಡಿಯಲು ಹಣ ನೀಡುವುದಿಲ್ಲ ಆಕ್ರೋಶಗೊಂಡು ಅಂಜಿನಮ್ಮ ಜತೆ ಜಗಳವಾಡಿದ ಶಿವ ರೆಡ್ಡಿ, ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ತಾಯಿಯ ಹೊಟ್ಟೆಯ ಬಲಭಾಗಕ್ಕೆ ತಿಳಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಅಂಜಿನಮ್ಮ ಮೃತಪಟ್ಟಿದ್ದಾಳೆ.
ಘಟನೆಗೆ ಸಂಬಂಧಪಟ್ಟಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ವಸಂತ ಅಸೋದೆ ಮತ್ತು ರಾಂಪುರ ಪಿಎಸ್ಐ ಮಹೇಶ್ ಹೊಸಪೇಟೆ, ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಿದ್ದೆಗೆ ಜಾರಿದ ಹೆಂಡ್ತಿಗೆ ದೊಣ್ಣೆಯಿಂದ ಹೊಡೆದು ಕೊಂದ ಗಂಡ!
ಆನೇಕಲ್: ನಿದ್ದೆಗೆ ಜಾರಿದ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಪತಿಯೊಬ್ಬ ಕೊಂದು (Murder case) ಹಾಕಿದ್ದಾನೆ. ಹತ್ಯೆಗೆ ಅಕ್ರಮ ಸಂಬಂಧವೇ (immoral relationship) ಕಾರಣ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಲಕ್ಷ್ಮಮ್ಮ (40) ಮೃತ ದುರ್ದೈವಿ. ಮಹದೇವಯ್ಯ (45) ಕೊಲೆಗೈದ ಪತಿಯಾಗಿದ್ದಾನೆ. ಈ ದಂಪತಿಗೆ ಆರು ಜನ ಮಕ್ಕಳಿದ್ದು, ಮಹದೇವಯ್ಯ ಆನೇಕಲ್ನ ಸ್ಟ್ರೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಪತ್ನಿ ಲಕ್ಷ್ಮಮ್ಮ ಗಾರೇ ಕೆಲಸ ಮಾಡಿಕೊಂಡಿದ್ದರು.
ಲಕ್ಷ್ಮಮ್ಮ ಕೆಲಸ ಸ್ಥಳದಲ್ಲಿ ಗಾರೆ ಕೆಲಸ ಮಾಡುವ ವ್ಯಕ್ತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆಯೂ ನಡೆದಿತ್ತು. ಪತ್ನಿಯ ವಿಚಾರ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು.
ಇತ್ತ ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಮಹದೇವಯ್ಯ ಮನೆಯಲ್ಲಿ ಮಲಗಿದ್ದ ಪತ್ನಿ ಲಕ್ಷ್ಮಮ್ಮ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾರೆ. ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಲಕ್ಷ್ಮಮ್ಮ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ.
ಇದನ್ನೂ ಓದಿ: BJP JDS Alliance : ಕಾಂಗ್ರೆಸ್ನಲ್ಲಿ ಏಕೈಕ ಸಂಸದನೂ ಇರಬಾರದು: ಡಿ.ಕೆ. ಬ್ರದರ್ಸ್ಸ್ಗೆ ಬಿ.ವೈ. ವಿಜಯೇಂದ್ರ ಟಾಂಗ್
ವಿಷಯ ತಿಳಿಯುತ್ತಿದ್ದಂತೆ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.