Site icon Vistara News

ಪುರಿ ಜಗನ್ನಾಥ ದೇಗುಲದ ಎದುರೇ, ಅರ್ಚಕರ ಪುತ್ರನ ಹತ್ಯೆ; ಪ್ರಮುಖ ಆರೋಪಿ ಬಂಧನ

Puri Priest Son Dead

ಪುರಿ: ಒಡಿಶಾ ಪುರಿ ಜಗನ್ನಾಥ ದೇಗುಲದ ಅರ್ಚಕರೊಬ್ಬರ ಪುತ್ರನನ್ನು ಗುಂಡಿಕ್ಕಿ (Son of Puri Priest Shot Dead) ಹತ್ಯೆಗೈಯ್ಯಲಾಗಿದೆ. ಮೃತನನ್ನು ಶಿವರಾಮ್‌ ಪಾತ್ರಾ ಎಂದು ಗುರುತಿಸಲಾಗಿದ್ದು, ಹರಚಂಡಿ ತಲುಚ್ಚಾದವರು ಎನ್ನಲಾಗಿದೆ. ಇವರು ಪುರಿಯ ಲೋಕನಾಥ ದೇವಸ್ಥಾನದ ಪರಿಚಾರಕರು. ಪುರಿಯಲ್ಲಿ ಜಗನ್ನಾಥ ದೇಗುಲದಿಂದ ಮೂರು ಕಿಲೋಮೀಟರ್‌ ದೂರದಲ್ಲಿ ಈ ಲೋಕನಾಥ ದೇವಸ್ಥಾನವಿದೆ. ಮಂಗಳವಾರ ರಾತ್ರಿ ಶಿವರಾಮ್‌ ಪಾತ್ರಾರಿಗೆ ಜಗನ್ನಾಥ ದೇಗುಲದ ಎದುರಿಗೇ ಗುಂಡು ಹೊಡೆದು ಕೊಲ್ಲಲಾಗಿದೆ. ಪ್ರಮುಖ ಆರೋಪಿ ಚಂದನ್‌ ಬಾರಿಕ್‌ನನ್ನು ವಶಕ್ಕೆ ಪಡೆದಿದ್ದೇವೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವೈಯಕ್ತಿಕ ದ್ವೇಷದ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಇನ್ನಷ್ಟು ತನಿಖೆ ಅಗತ್ಯ ಎಂದು ಪುರಿ ಪೊಲೀಸ್‌ ವರಿಷ್ಠಾಧಿಕಾರಿ ವಿಶಾಲ್‌ ಸಿಂಗ್‌ ತಿಳಿಸಿದ್ದಾರೆ.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಪುರಿ ಜಗನ್ನಾಥ ದೇವಾಲಯಕ್ಕೆ ಹೋಗುವ ಮುಖ್ಯ ದ್ವಾರದ ಬಳಿಯೇ ಶಿವರಾಮ್‌ ಪಾತ್ರಾರಿಗೆ ಇಬ್ಬರು ದುಷ್ಕರ್ಮಿಗಳು ಗುಂಡು ಹೊಡೆದಿದ್ದಾರೆ. ಇವರು ಬೈಕ್‌ನಲ್ಲಿ ಬಂದು, ಶಿವರಾಮ್‌ ಹತ್ತಿರವೇ ನಿಂತು ಗುಂಡು ಹಾರಿಸಿದ್ದಾರೆ. ಅಲ್ಲಿದ್ದವರು ಕೂಡಲೇ ಪೊಲೀಸರಿಗೆ ಮತ್ತು ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಶಿವರಾಮ್‌ ಪಾತ್ರಾ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಮೃತಪಟ್ಟಿದ್ದರು. ಈ ಮಧ್ಯೆ ಇದು ಪ್ರೀತಿ ವಿಷಯಕ್ಕೆ ನಡೆದ ಹತ್ಯೆ ಎಂಬ ಮಾತೂ ಕೇಳಿಬರುತ್ತಿದ್ದು, ಪೊಲೀಸರು ಇನ್ನೂ ದೃಢಪಡಿಸಿಲ್ಲ.

ಇದನ್ನೂ ಓದಿ: Bharat Bandh: ಮೇ 25ರಂದು ಭಾರತ್‌ ಬಂದ್‌ಗೆ ಕರೆ; ಯಾಕೆ?

Exit mobile version