Site icon Vistara News

Student Death : ಅಮ್ಮನ ಎದುರೇ ಅವಮಾನ; ಕಾಲೇಜು ಡೀನ್‌ ಕಿರುಕುಳಕ್ಕೆ ಸ್ಟೂಡೆಂಟ್‌ ಸೂಸೈಡ್‌ ‌

AMC college dean harassment student commits suicide

ಬೆಂಗಳೂರು: ಕಾಲೇಜಿನಲ್ಲಿ ಡೀನ್‌ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಯೊಬ್ಬ ಕೈಗೆ ಸಿಕ್ಕ ಮಾತ್ರೆಗಳನ್ನು (Student death) ನುಂಗಿ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ನಿಖಿಲ್‌ ಮೃತ ದುರ್ದೈವಿ.

ನಿಖಿಲ್‌ ಎಎಂಸಿ ಕಾಲೇಜಿನಲ್ಲಿ ಪ್ರಥಮ‌ ವರ್ಷದ ಹೊಟೇಲ್‌ ಮ್ಯಾನೇಜ್ಮೆಂಟ್‌ ವಿಭಾಗದಲ್ಲಿ ಓದುತ್ತಿದ್ದ. ಕಳೆದ ಒಂದು ತಿಂಗಳಿಂದ ಕಾಲೇಜು ಆಡಳಿತ ಮಂಡಳಿ ಹಾಗೂ ಕಾಲೇಜು‌ ಡೀನ್ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ.

ಇತ್ತೀಚೆಗೆ ಕಾಲೇಜಿಗೆ ನಿಖಿಲ್‌ ತಾಯಿಯನ್ನು ಕರೆಸಿಕೊಂಡು ಅವರ ಎದುರೇ ಅವಾಚ್ಯ ಶಬ್ಧಗಳಿಂದ ಡೀನ್ ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ನಿಖಿಲ್‌, ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ನಿಖಿಲ್‌ನನ್ನು ಕೂಡಲೇ ನಾಗರಬಾವಿಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಸದ್ಯ ಪೋಷಕರು ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಬೇಗ ಮುಗಿಯಲ್ಲ; ಸರ್‌ಪ್ರೈಸ್‌ ವೀಕ್ಷಕರಿಗೆ ಸಿಕ್ಕೇ ಬಿಡ್ತು!

ವಿವಾಹಿತೆಯೊಂದಿಗೆ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡ ಯುವಕ

ಕೋಲಾರ : ಒಂದೇ ಮರಕ್ಕೆ ನೇಣು ಬಿಗಿದುಕೊಂಡು (Lovers Death) ಗೃಹಿಣಿ ಹಾಗೂ ಯುವಕ ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎಸ್ ಜಿಡಿಮಾಕಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನುಸೂಯ (35), ವಿಜಯ್ ಕುಮಾರ್ (27) ಮೃತರು.

ಇವರಿಬ್ಬರು ಗ್ರಾಮದ ಹೊರವಲಯದ ಕೆರೆ ಅಂಗಳದಲ್ಲಿದ್ದ ಹೊಂಗೆ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಸೂಯ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ, ವಯಸ್ಸಿನಲ್ಲಿ ತನಗಿಂತ 8 ವರ್ಷ ಚಿಕ್ಕವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹಿಂದೊಮ್ಮೆ ಇವರಿಬ್ಬರು ಮನೆ ಬಿಟ್ಟು ಓಡಿ ಹೋದಾಗ ಕುಟುಂಬಸ್ಥರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇವರಿಬ್ಬರನ್ನು ಹುಡುಕಿ ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದರು.

ಈ ವೇಳೆ ಇಬ್ಬರಿಬ್ಬರ ಪ್ರೀತಿಯಾಟ ಬಯಲಾಗಿತ್ತು. ಹಲವು ಬಾರಿ ರಾಜಿ ಪಂಚಾಯತಿಯನ್ನು ಕುಟುಂಬಸ್ಥರು ಮಾಡಿದ್ದರು. ಆದರೆ ಯುವಕನ ಮೋಹಪಾಶಕ್ಕೆ ಬಿದ್ದ ಅನುಸೂಯ ಮತ್ತೆ ತನ್ನ ಗಂಡ- ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಓಡಿ ಹೋಗಿದ್ದಳು. ಬಳಿಕ ಮತ್ತೆ ರಾಜಿ ಪಂಚಾಯತಿ ನಂತರ ಅನುಸೂಯ ತವರು ಮನೆ ಸೇರಿದ್ದಳು. ಇತ್ತ ವಿಜಯ್‌ ಕುಮಾರ್‌ ಮದನಪಲ್ಲಿಯಲ್ಲಿ ಇರುವ ಮಾವನ ಮನೆ ಸೇರಿದ್ದ.

ಇದನ್ನೂ ಓದಿ: Toilet Cleaning: ಶಿಕ್ಷಣ ಸಚಿವರ ತವರೂರಲ್ಲೇ ಶಾಲಾ ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್‌!

ಕಳೆದ ಎರಡು ದಿನಗಳ ಹಿಂದೆ ವಿಜಯ್‌ಕುಮಾರ್‌ ತನ್ನ ತಾಯಿಗೆ ಹಾವು ಕಚ್ಚಿದೆಯೆಂದು ಮದನಪಲ್ಲಿಯಿಂದ ಬಂದಿದ್ದ. ಆದರೆ ತಾಯಿ ನೋಡಲು ಬಂದವನು ಪ್ರೇಯಸಿಯ ಜತೆಗೆ ಒಟ್ಟಿಗೆ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳೀಯರು ಇಬ್ಬರ ಮೃತದೇಹವನ್ನು ಕಂಡು ರಾಯಲ್ಪಾಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮರದಿಂದ ಮೃತದೇಹಗಳನ್ನು ಇಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ತಾಯಿ ಪ್ರೀತಿಗೆ ಪುಟ್ಟ ಮಕ್ಕಳಿಬ್ಬರು ಅನಾಥರಾದರೆ, ಮಗನನ್ನು ಕಳೆದುಕೊಂಡ ವೃದ್ಧ ತಂದೆ-ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ರಾಯಲ್ಪಾಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version