Site icon Vistara News

ಪ್ರೀತಿಸುತ್ತೇನೆಂದು ಹೇಳಿ ಜತೆಗಿದ್ದು, ನಿಶ್ಚಿತಾರ್ಥ ಆಗುತ್ತಿದ್ದಂತೆ ಬಿಟ್ಟು ಹೋದ ಶಿಕ್ಷಕಿ; 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Student Dies By Suicide After Teacher Cut her Relationship with him in Chennai

ಚೆನ್ನೈ: ಪ್ರೀತಿಸುತ್ತೇನೆ ಎಂದು ಹೇಳಿ, ಜತೆಗಿದ್ದ ಶಿಕ್ಷಕಿ ‘ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ’ ಎಂದು ಹೇಳಿದ್ದಕ್ಕೆ ಮನನೊಂದ 17ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳು ನಾಡಿನ ಚೆನ್ನೈನಿಂದ 20 ಕಿಮೀ ದೂರದಲ್ಲಿರುವ ಅಂಬತ್ತೂರ್​ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದರು. ಅವರು ಈ ಹುಡುಗನಿಗೆ ಮೂರು ವರ್ಷಗಳಿಂದ, ಅಂದರೆ ಆತ 10ನೇ ಕ್ಲಾಸ್​​ನಲ್ಲಿ ಇದ್ದಾಗಿನಿಂದಲೂ ಪಾಠ ಮಾಡುತ್ತಿದ್ದರು. ಹುಡುಗ ಎಷ್ಟೋ ಸಲ ಶಿಕ್ಷಕಿಯ ಮನೆಗೂ ಭೇಟಿ ನೀಡಿದ್ದ. ಅವರು ಬೋಧಿಸಿದ ವಿಷಯದಲ್ಲಿ ಅನುಮಾನ, ಗೊಂದಲವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು, ತನ್ನ ಉಳಿದ ಸ್ನೇಹಿತರೊಂದಿಗೆ ಶಿಕ್ಷಕಿ ಮನೆಗೆ ಹೋಗುತ್ತಿದ್ದ ಎನ್ನಲಾಗಿದೆ.

ಶಿಕ್ಷಕಿ ಇನ್ನೂ ಚಿಕ್ಕವಯಸ್ಸಿನವರೇ ಆಗಿದ್ದರು. ಮದುವೆಯಾಗಿರಲಿಲ್ಲ. ಈ ಹುಡುಗನೊಂದಿಗೆ ಪ್ರೀತಿಯಾಗಿತ್ತು. ಇವರಿಬ್ಬರ ಮಧ್ಯೆ ಸಂಬಂಧ ಏರ್ಪಟ್ಟಿತ್ತು. ಆದರೆ ಇತ್ತೀಚೆಗೆ ಶಿಕ್ಷಕಿಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು. ಹೀಗಾಗಿ ಆಕೆ ಈ ಹುಡುಗನೊಂದಿಗೆ ಸಂಬಂಧ ಕೊನೆಗೊಳಿಸಿಕೊಳ್ಳಲು ನಿರ್ಧರಿಸಿದ್ದರು ಎಂದು ಅಂಬತ್ತೂರ್​ ಮಹಿಳಾ ಪೊಲೀಸ್​ ಅಧಿಕಾರಿ ಜ್ಯೋತಿಲಕ್ಷ್ಮೀ ಹೇಳಿದ್ದಾರೆ.

ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಂಗಳ ಹಿಂದೆ. ಆದರೆ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದ್ದು ಈಗ. ಅವನು ಮೃತಪಟ್ಟಾಗ ಕುಟುಂಬದವರು ಗೋಳಾಡಿದ್ದರು. ಆದರೆ ಅವನ ತಾಯಿಗೆ ಏನೋ ಅನುಮಾನ, ನನ್ನ ಮಗ ಸುಮ್ಮನೆ ಸತ್ತಿಲ್ಲ, ಬೇರೆನೋ ಬಲವಾದ ಕಾರಣವೇ ಇರಬೇಕು ಎಂದು ಆಕೆ ಪೊಲೀಸರ ಎದುರು ಹೇಳಿದ್ದರು. ಹೀಗಾಗಿ ತನಿಖೆ ಮುಂದುವರಿಸಿದ ಪೊಲೀಸರು ಆತನ ಫೋನ್​​ಗಳನ್ನೆಲ್ಲ ಪರಿಶೀಲನೆ ಮಾಡಿದರು. ಆ ಹುಡುಗ ಮತ್ತು ಶಿಕ್ಷಕಿ ಒಟ್ಟಾಗಿರುವ ಫೋಟೋಗಳೆಲ್ಲ ಫೋನ್​​ನಲ್ಲಿ ಸಿಕ್ಕಿವೆ. ಹೀಗಾಗಿ ಶಿಕ್ಷಕಿಯನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೇ, ಇದೂ ಕೂಡ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೇ ಆಗಿದೆ. ಇದೊಂದು ಅಪರೂಪದ ಪ್ರಕರಣ ಎಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿ ಎನ್​​ಜಿಒವೊಂದರ ಸಂಸ್ಥಾಪಕಿ ವಿದ್ಯಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನೀರು ಚೆಲ್ಲಿದ್ದರಿಂದ ಬಾಲಕನ ಮೇಲೆ ಶಿಕ್ಷಕಿ ಹಲ್ಲೆ, ತಲೆಗೆ ತೀವ್ರ ಗಾಯ

Exit mobile version