Site icon Vistara News

ಶಾಲೆಯ ಕೊಠಡಿಯಲ್ಲೇ ಟವೆಲ್​​ನಿಂದ ನೇಣು ಬಿಗಿದುಕೊಂಡ ವಿದ್ಯಾರ್ಥಿ; ಸೂಸೈಡ್​ ನೋಟ್​​ನಲ್ಲಿ ಏನಿದೆ?

hanging

ಭೋಪಾಲ್​: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ 15 ವರ್ಷದ ಹುಡುಗನೊಬ್ಬ ಶಾಲೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣುಬಿಗಿದುಕೊಂಡು ಮೃತಪಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಹುಡುಗನನ್ನು ಓಂ ಸಪ್ತ (15) ಎಂದು ಗುರುತಿಸಲಾಗಿದ್ದು, ಆತನ ಆತ್ಮಹತ್ಯೆಗೆ ಕಾರಣವೇನೆಂಬ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಹುಡುಗ ಬರ್ವಾನಿ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಅದೇ ಶಾಲೆಯ ಹಾಸ್ಟೆಲ್​​ನಲ್ಲಿಯೇ ಉಳಿದುಕೊಂಡಿದ್ದ. ಇಂದು ಬೆಳಗ್ಗೆ ಹಾಸ್ಟೆಲ್​​ನಲ್ಲಿ ತಿಂಡಿ ತಿಂದು ಶಾಲೆಗೆ ಬಂದಿದ್ದಾನೆ. ಖಾಲಿ ಇರುವ ತರಗತಿ ಕೋಣೆಗೆ ಹೋಗಿ, ಸೀಲಿಂಗ್​​ಗೆ ಟವೆಲ್​​ನಿಂದ ನೇಣುಬಿಗಿದುಕೊಂಡಿದ್ದಾನೆ. ಆತ ಸೂಸೈಡ್​ ನೋಟ್​ ಕೂಡ ಬರೆದಿಟ್ಟಿದ್ದು, ಅದರಲ್ಲಿ ‘ನನಗೆ ಗುಂಪಿನಲ್ಲಿ ಅಧ್ಯಯನ ಮಾಡಲು ಇಷ್ಟವಿಲ್ಲ. ಏಕಾಂಗಿಯಾಗಿಯೇ ಓದಲು ಇಷ್ಟ’ ಎಂದು ಬರೆದಿದ್ದಾನೆ. ಆದರೂ ಹುಡುಗನ ಸಾವಿಗೆ ಬೇರೆನೋ ಕಾರಣ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬರ್ವಾನಿ ಠಾಣೆ ಪೊಲೀಸ್ ಅಧಿಕಾರಿ ವಿಜಯ್​ ರಾವತ್​ ತಿಳಿಸಿದ್ದಾರೆ.

ಇದನ್ನೂ ಓದಿ: Combing Operation | ಮಧ್ಯಪ್ರದೇಶ ಪೊಲೀಸರು ರಾತ್ರೋರಾತ್ರಿ 9000 ಕ್ರಿಮಿನಲ್ಸ್ ಬಂಧಿಸಿದ್ದು ಯಾಕೆ?

Exit mobile version