Site icon Vistara News

Video | ಗರ್ಭಿಣಿ ಶ್ವಾನವನ್ನು ಹೊಡೆದು, ನೆಲದ ಮೇಲೆ ಎಳೆದಾಡಿ ಕೊಂದ ವಿದ್ಯಾರ್ಥಿಗಳು; ಇವರೆಂಥಾ ಕ್ರೂರಿಗಳಿರಬೇಕು

Students kill pregnant dog In Delhi

ಕೆಲವರಿಗೆ ಮೂಕ ಪ್ರಾಣಿಗಳನ್ನು ಹಿಂಸೆ ಮಾಡುವುದು ಎಂದರೆ ಮಹಾನ್​ ಖುಷಿ. ದಾರಿಯಲ್ಲಿ ಅದರ ಪಾಡಿಗೆ ಹೋಗುತ್ತಿರುವ ನಾಯಿಗೆ ಕಲ್ಲೆಸೆದು ಹಿಂಸಿಸುವುದು, ಹಸುವಿನ ಬಾಲ ಎಳೆದು ನೋವು ಕೊಡುವುದು, ಬೆಕ್ಕನ್ನು ಎತ್ತಿ ನೆಲದ ಮೇಲೆ ಬಿಸಾಕುವುದು..ಇಂಥ ಕೃತ್ಯಗಳನ್ನು ಮಾಡುವವರು ನಮ್ಮೂರು-ನಿಮ್ಮೂರಲ್ಲೂ ಒಬ್ಬಿಬ್ಬರು ಇದ್ದೇ ಇರುತ್ತಾರೆ. ಆದರೆ ದೆಹಲಿಯಲ್ಲಿ ಒಂದಷ್ಟು ಹುಡುಗರು ಅತಿರೇಕದ ಕ್ರೌರ್ಯ ತೋರಿದ್ದಾರೆ. ಒಂದು ಗರ್ಭಿಣಿ ನಾಯಿಯನ್ನು ರಸ್ತೆಯ ಮೇಲೆಲ್ಲ ಎಳೆದಾಡಿ, ಹಿಂಸೆ ಕೊಟ್ಟು ಅಮಾನುಷವಾಗಿ ಕೊಂದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಅವರೆಲ್ಲ ಆಗ್ನೇಯ ದೆಹಲಿಯಲ್ಲಿರುವ ಒಂದು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಅಂದಾಜಿಸಲಾಗಿದೆ.

ಅದು ಆಗ್ನೇಯ ದೆಹಲಿಯಲ್ಲಿರುವ ಡಾನ್​ ಬಾಸ್ಕೋ ಶಿಕ್ಷಣ ಸಂಸ್ಥೆ ಎಂದು ವಿಡಿಯೊ ಶೇರ್​ ಮಾಡಿಕೊಂಡ ಟ್ವಿಟರ್​ ಬಳಕೆದಾರರೊಬ್ಬರು ಹೇಳಿದ್ದಾರೆ. ಅಲ್ಲೊಂದು ಚಿಕ್ಕ ಶೆಡ್​ ಇದೆ. ಅದರ ಮೂಲೆಯಲ್ಲಿ ಗರ್ಭಿಣಿ ನಾಯಿ ಅಡಗಿಕೊಂಡಿದ್ದರೆ, ಹೊರಗೊಬ್ಬ ಹುಡುಗ ಕೋಲು ಹಿಡಿದು, ಹೊರಬಂದರೆ ಹೊಡೆಯುವ ಭಂಗಿಯಲ್ಲಿ ನಿಂತಿದ್ದಾನೆ. ಇನ್ನೊಬ್ಬ ಆ ನಾಯಿಯನ್ನು ಹೊರಗೆ ಎಳೆಯುವ ಸಾಹಸಕ್ಕೆ ಮುಂದಾಗಿದ್ದನ್ನು ಒಂದು ವಿಡಿಯೊದಲ್ಲಿ ನೋಡಬಹುದು. ’ಕಿಲ್​ (Kill)’ ಎಂದು ಅವರು ಹೇಳುವುದು ವಿಡಿಯೊದಲ್ಲಿ ಕೇಳುತ್ತದೆ. ಹಾಗೇ ಇನ್ನೊಂದು ವಿಡಿಯೊ ಕೂಡ ಭಯಾನಕವಾಗಿದ್ದು, ಅದರಲ್ಲಿ ಹುಡುಗ ಶ್ವಾನದ ಹಿಂಬದಿಯ ಎರಡೂ ಕಾಲು ಹಿಡಿದು ದರದರನೇ ಎಳೆಯುವ ದೃಶ್ಯ ನೋಡಬಹುದು. ಅದನ್ನು ನೋಡಿದರೆ ಕರುಳು ಚುರ್​ ಎನ್ನುತ್ತದೆ, ಮೂಕಪ್ರಾಣಿಯ ವೇದನೆ-ಅಸಹಾಯಕತೆ ನೋಡಿದರೆ ನಮಗೂ ಕಣ್ಣಲ್ಲಿ ನೀರು ಜಿನುಗುತ್ತದೆ. ಹಾಗೇ ಆ ಹುಡುಗರ ಮೇಲೆ ಕ್ರೋಧ ಉಕ್ಕುತ್ತದೆ. ಅಂತೂ ಕೊನೆಗೂ ಆ ಶ್ವಾನವನ್ನು ಅವರು ಕೊಂದೇ ತೀರಿದ್ದಾರೆ.

ಅದೊಂದು ಮುಗ್ಧ ಪ್ರಾಣಿಯನ್ನು ಹಿಂಸಿಸುವುದರಿಂದ ಏನು ಸಿಗುತ್ತದೆ? ಎಂದು ವಿಡಿಯೊ ನೋಡಿದ ಅನೇಕರು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಹುಡುಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆ ವಿದ್ಯಾರ್ಥಿಗಳ ಕ್ರೌರ್ಯ ನೋಡಿ, ಶಾಕ್​ ಆಯಿತು ಎಂದೂ ಹಲವರು ಕಮೆಂಟ್ ಮಾಡಿದ್ದಾರೆ. ಶ್ವಾನಕ್ಕಾಗಿ ಮರುಗಿದ್ದಾರೆ.
ಈ ವಿಡಿಯೊ ನೋಡಿದ ಪೀಪಲ್ಸ್ ಫಾರ್​ ಎನಿಮಲ್ಸ್ (PFA) ಸಂಸ್ಥೆಯ ಟ್ರಸ್ಟೀ ಅಂಬಿಕಾ ಶುಕ್ಲಾ ‘ಆ ಗರ್ಭಿಣಿ ಶ್ವಾನಕ್ಕೆ ಹೊಡೆಯುವಾಗ, ಅದನ್ನು ಹಿಂಸಿಸುವಾಗ ಹುಡುಗರು ನಗುತ್ತಿದ್ದಾರೆ. ಅಂದರೆ ಅವರಲ್ಲಿ ಅದೆಷ್ಟರ ಮಟ್ಟಿಗಿನ ಕ್ರೌರ್ಯ ಅಡಗಿರಬೇಕು. ಈಗ ಹೀಗೆ ಪ್ರಾಣಿ ಹಿಂಸೆ ಮಾಡುವವರೇ ಮುಂದೆ ಮಹಿಳೆಯರು ಮಕ್ಕಳ ಮೇಲೆ ದೌರ್ಜನ್ಯ ಎಸಗಲು ಶುರು ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral video | ಚಿಕಾಗೋನಲ್ಲಿ ಭಾರತೀಯನ ಮದುವೆಗೆ ಸೀರೆಯುಟ್ಟು ಬಿಂದಿಯಿಟ್ಟು ಬಂದ ಗೆಳೆಯರು!

Exit mobile version