ತುಮಕೂರು: ರೈಲಿನಿಂದ ಬಿದ್ದು ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ (Suspicious Death) ಮೃತಪಟ್ಟಿದ್ದಾರೆ. ತುಮಕೂರು ಸಮೀಪದ ಹಿರೇಹಳ್ಳಿ ಸಮೀಪ ಘಟನೆ (Dead Body Found) ನಡೆದಿದೆ. ಅನ್ನಪೂರ್ಣ (50) ಮೃತ ದುರ್ದೈವಿ.
ಶಿವಮೊಗ್ಗದ ಭದ್ರಾವತಿ ಮೂಲದ ಅನ್ನಪೂರ್ಣ ಬೆಂಗಳೂರಿನ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ಸ್ಟೆನೋಗ್ರಾಫರ್ ಆಗಿದ್ದರು. ಬೆಂಗಳೂರಿನ ಮಲ್ಲೇಶ್ವರಂನಲ್ಲೇ ವಾಸವಾಗಿದ್ದರು. ಪರೀಕ್ಷಾ ಕೊಠಡಿ ಮೇಲ್ವಿಚಾರಕಿ ಕಾರ್ಯನಿರ್ವಹಣೆ ನಿಮಿತ್ತ ಅನ್ನಪೂರ್ಣ ಮೊನ್ನೆ ಶಿವಮೊಗ್ಗ ತೆರಳಿದ್ದರು.
ಕೆಲಸ ಮುಗಿಸಿ ವಾಪಸ್ ಅನ್ನಪೂರ್ಣ ಅವರು ಸಹೋದರ ಬ್ರಹ್ಮಾನಂದ್‌ನೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಹೊರಟಿದ್ದರು. ಬ್ರಹ್ಮಾನಂದ್ ರಿಸರ್ವೇಷನ್ ಬೋಗಿಯಲ್ಲಿ ಹಾಗೂ ಅನ್ನಪೂರ್ಣ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಜನವರಿ 30ರಂದು ರಾತ್ರಿ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣ ಅವರ ಮೃತದೇಹವು ತುಮಕೂರಿನ ಹಿರೇಹಳ್ಳಿ ಬಳಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಜತೆಗೆ 20 ಕಿ. ಮೀ ದೂರದಲ್ಲಿ ಅನ್ನಪೂರ್ಣ ಅವರ ಬ್ಯಾಗ್ ಸಿಕ್ಕಿದೆ.
ಸದ್ಯ ಕುಟುಂಬಸ್ಥರು ಅನ್ನಪೂರ್ಣ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ಬೋಗಿಯಲ್ಲಿ ಇದ್ದವರೇ ಯಾರೋ ರೈಲಿನಿಂದ ತಳ್ಳಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅನ್ನಪೂರ್ಣರ ಮಾಂಗಲ್ಯ ಸರ, ಕಿವಿ ಓಲೆ, ಕೈಬಳೆ ಕಳ್ಳತನ ಮಾಡಲಾಗಿದೆ. ಒಡವೆ ದೋಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Accident Case : ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ನೀರುಪಾಲು; ಟ್ಯಾಕ್ಟರ್‌ಗೆ ಸಿಲುಕಿ ವಿದ್ಯಾರ್ಥಿ ಸಾವು
ರೈಲಿನಲ್ಲಿ ಬರುವಾಗ ಕತ್ತಲಲ್ಲಿ ಅಕ್ಕನ ಒಡವೆ ಕದ್ದ ತಂಗಿ
ರೈಲಿನಲ್ಲಿ ಪ್ರಯಾಣ ಮಾಡುವಾಗ ಅಕ್ಕನ ಆಭರಣದ ಮೇಲೆ ಹಾಕಿದ ತಂಗಿ, ಕತ್ತಲಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಕದ್ದಿದ್ದಾಳೆ. ಬೆಂಗಳೂರಿನ ದಂಡು ರೈಲು ನಿಲ್ದಾಣ ಬರುತ್ತಿದ್ದಂತೆ ಸದ್ದಿಲ್ಲದೇ ಚಿನ್ನಾಭರಣ ದೋಚಿ ಪರಾರಿ ಆಗಿರುವ ಘಟನೆ ನಡೆದಿದೆ.
ಲಲಿತಾ ಎಂಬುವವರು ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆಭರಣ ನಾಪತ್ತೆ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಲಲಿತಾ ದೂರಿನ್ವಯ ತನಿಖೆ ನಡೆಸಿದ ರೈಲ್ವೆ ಪೊಲೀಸರಿಗೆ, ಲಲಿತಾ ಸಹೋದರಿ ಚಂದ್ರ ಶರ್ಮಾಳೇ ಕಳ್ಳಿ ಎಂದು ತಿಳಿದುಬಂದಿದೆ. ಬಂಧಿತಳಿಂದ 8.50 ಲಕ್ಷ ಮೌಲ್ಯದ 152 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ