ನವ ದೆಹಲಿ: ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಎಸ್ಯುವಿಯೊಂದು ಬೈಕ್ ಮತ್ತು ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಈ ಎಸ್ಯುವಿ ಚಾಲನೆ ಮಾಡುತ್ತಿದ್ದವನು ಕಾಂಗ್ರೆಸ್ ಶಾಸಕ (Congress MLA)ನೊಬ್ಬನ ಅಳಿಯನಾಗಿದ್ದು, ಆತನಿಗೂ ಗಾಯಗಳಾಗಿವೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆನಂದ್ ನಗರವನ್ನು ತಾರಾಪುರ್ನೊಂದಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ, ಸೋಜಿತ್ರಾ ಗ್ರಾಮದ ಬಳಿ ಗುರುವಾರ ಸಂಜೆ ಅಪಘಾತ ನಡೆದಿದೆ. ಎಸ್ಯುವಿ ಚಾಲಕ ಅಮಲೇರಿದ ಸ್ಥಿತಿಯಲ್ಲಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಈ ಎಸ್ಯುವಿ ವಾಹನ, ಸೋಜಿತ್ರಾ ವಿಧಾನಸಭಾ ಕ್ಷೇತ್ರದ ಶಾಸಕ ಪುನಂಭಾಯಿ ಮಾಧಭಾಯಿ ಪರ್ಮಾರ್ ಅಳಿಯ ಖೇತನ್ ಪಾದಿಯಾರ್ಗೆ ಸೇರಿದ್ದು ಎಂದು ಎಎಸ್ಪಿ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ. ಹಾಗೇ, ಕಾರು ಮಾಲೀಕ ಮತ್ತು ಚಾಲಕ ಖೇತನ್ ನಿರ್ಲಕ್ಷ್ಯದಿಂದಲೇ ಈ ಅಪಘಾತ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೃತಪಟ್ಟವರೆಲ್ಲ, ಸೋಜಿತ್ರಾ ಮತ್ತು ಬೋರಿಯಾವಿ ಗ್ರಾಮದವರು ಎಂದು ಸ್ಥಳೀಯ ಎಸ್ಪಿ ಅಜಿತ್ ರಜಿನ್ ತಿಳಿಸಿದ್ದಾರೆ. ಖೇತನ್ ವಿರುದ್ಧ ಭಾರತೀಯ ದಂಡ ಸಂಹಿತೆ 304ರಡಿ, ನರಹತ್ಯೆ ಪ್ರಕರಣ ದಾಖಲು ಮಾಡಲಾಗುವುದು. ಮೃತರಾದ ಆರೂ ಮಂದಿಯ ಸಂಪೂರ್ಣ ವಿವರವನ್ನೂ ಕಲೆಹಾಕಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಹೆಬ್ಬಾಳ ಬಳಿ ಸರಣಿ ಅಪಘಾತ, ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕರು