Site icon Vistara News

Cyber Crime: ಇವಳೇ ನನ್ನ ಹೆಂಡತಿ ಎಂದು ನಂಬಿ 91 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

online fraud

ಆನ್​ಲೈನ್​ ವಂಚನೆ ಜಾಲ ದೊಡ್ಡದಾಗುತ್ತಿದೆ (Online Scams). ವಾಟ್ಸ್​ಆ್ಯಪ್​, ಫೇಸ್​ಬುಕ್ ಮೆಸೆಂಜರ್​, ಇನ್​ಸ್ಟಾಗ್ರಾಂ, ಮ್ಯಾಟ್ರಿಮೋನಿ ವೆಬ್​ಸೈಟ್​ಗಳೆಲ್ಲ ‘ವಂಚಕರ ತಾಣ’ವಾಗುತ್ತಿವೆ (Matrimonial Scams). ಆನ್​ಲೈನ್​ ಮೂಲಕ ವಂಚನೆಗೆ ಇಳಿಯುವವರು (Cyber Crime) ಅದೆಷ್ಟು ನವಿರಾಗಿ ಬಲೆ ಹೆಣೆಯುತ್ತಾರೆಂದರೆ, ಚೆನ್ನಾಗಿ ಓದಿಕೊಂಡವರು, ಒಳ್ಳೆ ಉದ್ಯೋಗ, ಹುದ್ದೆಯಲ್ಲಿ ಇರುವವರೇ ಸುಲಭಕ್ಕೆ ಈ ಜಾಲಕ್ಕೆ ಬಿದ್ದುಬಿಡುತ್ತಾರೆ. ಅದ್ಯಾವುದೋ ಅಪರಿಚಿತರಿಂದ ಕರೆ, ಮೆಸೇಜ್​ ಬಂದರೆ ಅವರನ್ನು ನಂಬಿಬಿಡುತ್ತಾರೆ. ಇಂಥ ಆನ್​ಲೈನ್​ ವಂಚನೆ ಬಗ್ಗೆ ನಾವು ಈಗಾಗಲೇ ಹತ್ತು ಹಲವು ಸುದ್ದಿಗಳನ್ನು ಓದಿದ್ದೇವೆ. ಅದರ ಸಾಲಿಗೆ ಈಗೊಂದು ವರದಿ ಸೇರ್ಪಡೆಯಾಗಿದೆ. ಈ ಸಲ ಆನ್​ಲೈನ್​ ಮೋಸಕ್ಕೆ ಒಳಗಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದು ಮಹಾರಾಷ್ಟ್ರ ಪುಣೆಯ ಆದರ್ಶ ನಗರ ನಿವಾಸಿಯಾಗಿರುವ ಟೆಕ್ಕಿ.

ಪುಣೆಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಎಂಜಿನಿಯರ್​​​ಗೆ ಫೆಬ್ರವರಿಯಲ್ಲಿ ಮ್ಯಾಟ್ರಿಮೋನಿಯಲ್ ಸೈಟ್​ (ವಧು-ವರರ ಹುಡುಕಾಟದ ತಾಣ)ನಲ್ಲಿ ಯುವತಿಯೊಬ್ಬಳ ಪರಿಚಯ ಆಗುತ್ತದೆ. ಆಕೆ ತಾನು ಮಲೇಷಿಯಾದಲ್ಲಿ ನೆಲೆಸಿದ್ದೇನೆ. ಆದರೆ ಭಾರತಕ್ಕೆ ಬರುತ್ತೇನೆ. ನಿಮ್ಮನ್ನೇ ಮದುವೆಯಾಗುವುದು ಎಂದು ಟೆಕ್ಕಿಯನ್ನು ನಂಬಿಸಿದ್ದರು. ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ ಆಕೆ ಕೊಟ್ಟಿದ್ದ ಫೋಟೋ, ವಿವರ ನೋಡಿದ್ದ ಟೆಕ್ಕಿ ಹುಡುಗಿಯನ್ನು ಸಂಪೂರ್ಣವಾಗಿ ನಂಬಿದ್ದ. ಇಬ್ಬರೂ ಫೋನ್​​ನಲ್ಲಿ ಮಾತನಾಡುತ್ತಿದ್ದರು. ಅವಳು ಹೇಳಿದಂತೆ ಕೇಳಲು ಈತ ಶುರು ಮಾಡಿದ್ದ. ಈ ನಂಬಿಕೆಯೇ ದುಬಾರಿಯಾಗಿ 91.75 ಲಕ್ಷ ರೂ.ಕಳೆದುಕೊಂಡ

ಅವಕಾಶವನ್ನು ಯುವತಿ ಸರಿಯಾಗಿ ಬಳಸಿಕೊಂಡಿದ್ದಳು. ವಂಚಕಿಯಾಗಿದ್ದ ಹುಡುಗಿ ನಿಧಾನವಾಗಿ ಟೆಕ್ಕಿಯ ಅಕೌಂಟ್​ನಿಂದ ಹಣ ಸುಲಿಗೆ ಮಾಡಲು ಪ್ರಾರಂಭಿಸಿದ್ದಳು. ಮದುವೆ ನಂತರ ಜೀವನ ಚೆನ್ನಾಗಿರಬೇಕು ಎಂದರೆ ನಾವೂ ಏನಾದರೂ ವ್ಯವಹಾರ ಮಾಡೋಣ ಎಂದು ಟೆಕ್ಕಿಗೆ ಹೇಳಿದ್ದಳು. ಹಾಗೇ Blescoin Trading ( ಡಿಜಿಟಲ್​ ಆಗಿ ಸಂಪತ್ತು ಮಾರಾಟ, ಹೆಚ್ಚಳ, ನಿರ್ವಹಣೆ ಮಾಡುವ ವ್ಯವಹಾರ) ಐಡಿಯಾವನ್ನೂ ಕೊಟ್ಟಿದ್ದಳು. ಇದರಲ್ಲಿ ಹೂಡಿಕೆ ಮಾಡಲು ಹಣ ಕಳಿಸುವಂತೆ ಆಕೆ ಟೆಕ್ಕಿಗೆ ಹೇಳಿದಳು. ಆತ ಹಂತಹಂತವಾಗಿ ಹಣ ಕಳಿಸಲು ಶುರು ಮಾಡಿದ್ದ. ಎಚ್​ಡಿಎಫ್​ಸಿ, ಐಡಿಎಫ್​ಸಿ, ಬಜಾಜ್​ ಫೈನಾನ್ಸ್​, ಆ್ಯಕ್ಸಿಸ್​ ಬ್ಯಾಂಕ್​ಗಳಿಂದ ಸಾಲವಾಗಿ ಪಡೆದ ಒಟ್ಟು 71 ಲಕ್ಷ ರೂಪಾಯಿ, ತನ್ನ ಉಳಿತಾಯದ 15 ಲಕ್ಷ ರೂ. ಸೇರಿ 86 ಲಕ್ಷ ರೂ.ಗಳನ್ನು ಯುವತಿಗೆ ಕಳಿಸಿದ್ದ.

ಇದನ್ನೂ ಓದಿ: Pramod Mutalik : ಆನ್‌ಲೈನ್‌ ಮದುವೆ ನೋಂದಣಿಯಿಂದ ಲವ್‌ ಜಿಹಾದ್‌ ಹೆಚ್ಚಳ; ಮುತಾಲಿಕ್‌ ತೀವ್ರ ವಿರೋಧ

ಹಣ ವಾಪಸ್ ಬರುತ್ತದೆ ಎಂದು ಯುವತಿ ಹೇಳಿದ್ದಳು. ಆದರೆ ಎಷ್ಟೇ ದಿನಗಳಾದೂ ಹಣ ವಾಪಸ್ ತನ್ನ ಅಕೌಂಟ್​ಗೆ ಬಾರದಾಗ ಟೆಕ್ಕಿ ಮತ್ತೆ ಆಕೆಯ ಬಳಿಯೇ ಕೇಳಿದ್ದ. ಅದಕ್ಕೆ ಅವಳು, ಹೂಡಿಕೆ ಮಾಡಿದ ಹಣ ಎರಡರಷ್ಟು ವಾಪಸ್ ಬರಬೇಕು ಎಂದರೆ ನೀನಿನ್ನೂ 10 ಲಕ್ಷ ರೂಪಾಯಿ ಕೊಡಬೇಕಾಗುತ್ತದೆ ಎಂದಿದ್ದಳು. ಅದನ್ನೂ ನಂಬಿ ಆತ ಮೊದಲ ಹಂತದಲ್ಲಿ 3.95 ಲಕ್ಷ ರೂ., ಎರಡನೇ ಹಂತದಲ್ಲಿ 1.85 ಲಕ್ಷ ರೂ.ನ್ನು ತನ್ನ ಬ್ಯಾಂಕ್​ ಅಕೌಂಟ್​ನಿಂದ ಟ್ರಾನ್ಸ್​ಫರ್ ಮಾಡಿದ್ದ. ಆದರೆ ಹಣ ವಾಪಸ್ ಬರುವ ಲಕ್ಷಣವೇ ಇಲ್ಲದಾಗ ಅವನಿಗೆ ತಾನು ಮೋಸ ಹೋಗಿದ್ದು ಗೊತ್ತಾಗಿದೆ. ಕೂಡಲೇ ದೇಹು ಠಾಣೆಗೆ ಹೋಗಿ ದೂರು ಕೊಟ್ಟಿದ್ದಾನೆ. ಪೊಲೀಸರು ಇದೀಗ ಅಪರಿಚಿತ ಯುವತಿ ಮತ್ತು ಆಕೆಯ ಸಹಚರರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಅವಳು ಇಷ್ಟು ದಿನ ಟೆಕ್ಕಿಗೆ ಫೋನ್ ಮಾಡುತ್ತಿದ್ದ ನಂಬರ್ ಸ್ವಿಚ್​ಆಪ್​ ಆಗಿದೆ.

Exit mobile version