Site icon Vistara News

BJP Leader Suicide | ತೆಲಂಗಾಣದಲ್ಲಿ ಬಿಜೆಪಿ ಮುಖಂಡ ಆತ್ಮಹತ್ಯೆ

Suicide

ನವ ದೆಹಲಿ: ತೆಲಂಗಾಣ ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಮೃತಪಟ್ಟಿದ್ದಾರೆ. ಮಿಯಾಪುರ್​ ಪಿಎಸ್​ ಲಿಮಿಟ್​​ನಲ್ಲಿರುವ ಅವರ ನಿವಾಸದಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ (Telangana BJP Leader Committed Suicide) ಪತ್ತೆಯಾಗಿದೆ. ಸೀಲಿಂಗ್​ ಫ್ಯಾನ್​​ಗೆ ಅವರ ಶವ ಜೋತಾಡುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಿಯಾಪುರ್​ ಪಿಎಸ್​ ಲಿಮಿಟ್​​​ನಲ್ಲಿರುವ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಮಗೆ ಮಾಹಿತಿ ಬಂತು. ಹೀಗಾಗಿ ಅಲ್ಲಿಗೆ ಹೋದೆವು. ಅಲ್ಲಿ ಹೋಗಿ ಪರಿಶೀಲನೆ ಮಾಡಿದಾಗಲೇ ಅವರು ಜ್ಞಾನೇಂದ್ರ ಪ್ರಸಾದ್ ಎಂಬುದು ಗೊತ್ತಾಯಿತು. ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆಂದು ಇನ್ನೂ ಗೊತ್ತಾಗಲಿಲ್ಲ. ಕಳೆದ ಕೆಲವು ದಿನಗಳಿಂದಲೂ ಅವರು ತಮ್ಮ ಕುಟುಂಬದವರನ್ನೆಲ್ಲ ಬಿಟ್ಟು, ಒಬ್ಬಂಟಿಯಾಗಿ ಪೆಂಟ್​​ಹೌಸ್​​ನಲ್ಲಿ ವಾಸವಾಗಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಜ್ಞಾನೇಂದ್ರ ಪ್ರಸಾದ್​ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಪೋಸ್ಟ್​ಮಾರ್ಟಮ್​​ಗಾಗಿ ಕಳಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭ ಮಾಡಿದ್ದಾರೆ.

ಇದನ್ನೂ ಓದಿ: Bihar Politics | ಬಿಜೆಪಿ-ಜೆಡಿಯು ನಡುವೆ ಬಿರುಕು; ನಾಳೆ ಎರಡು ಮಹತ್ವದ ಸಭೆ

Exit mobile version