ಬೆಂಗಳೂರು: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ರಹಸ್ಯವಾಗಿ ಕ್ಯಾಮೆರಾ ಫಿಕ್ಸ್ ಮಾಡಿ ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿಯನ್ನು (Crime news ) ಪೊಲೀಸರು ಬಂಧಿಸಿದ್ದಾರೆ.
ಶುಭಂ ಎಂ ಆಜಾದ್ ಬಂಧಿತ ಆರೋಪಿ. ಈತ ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನಲ್ಲಿ ಬಿಬಿಎಎಲ್ಎಲ್ಬಿ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ ಈ ಕೃತ್ಯವೆಸಗಿದ್ದ.
1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳನ್ನು ಈತ ತೆಗೆದಿದ್ದ. ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ ಯುವತಿಯರು ಚೀರಾಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದ.
ಸಿಸಿಟಿವಿ ಪರಿಶೀಲನೆ ವೇಳೆ ಶುಭಂ ಕೃತ್ಯ ಬೆಳಕಿಗೆ ಬಂದಿದೆ. ಈ ಹಿಂದೆಯೂ ಇದೇ ರೀತಿ ಮಾಡಿ ಕ್ಷಮೆ ಯಾಚಿಸಿದ್ದ.
ಮತ್ತೆ ತನ್ನ ಚಾಳಿ ಮುಂದುವರಿಸಿ ಸಿಕ್ಕಿಬಿದ್ದಿದ್ದಾನೆ. ಬಂಧಿತನ ಮೊಬೈಲ್ ನಲ್ಲಿ 1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳು ಪತ್ತೆಯಾಗಿದೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವಿಡಿಯೋಗಳು ಪತ್ರೆಯಾಗುವ ಸಾಧ್ಯತೆ ಇದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.