Site icon Vistara News

Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

theft Case

ಬೆಂಗಳೂರು/ಕಲಬುರಗಿ: ಚಾಲಾಕಿ ಕಳ್ಳರು (Theft Case) ಹೇಗೆಲ್ಲ ಯಮಾರಿಸುತ್ತಾರೆ ಎಂಬುದಕ್ಕೆ ಈ ಪ್ರಕರಣಗಳೇ ಸಾಕ್ಷಿ.. ಬೆಂಗಳೂರಿನ ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್‌ನಲ್ಲಿ ಚಾಲಾಕಿ ಕಳ್ಳನೊಬ್ಬ ಕೈಚಳಕ ತೋರಿದ್ದಾನೆ. ಪೇಡ ಖರೀದಿ ನೆಪದಲ್ಲಿ ಬಂದು 15 ಕೆ.ಜಿ ತುಪ್ಪವನ್ನು ಕದ್ದೊಯ್ದಿದ್ದಾನೆ.

ನಂದಿನಿ ಪಾರ್ಲರ್‌ಗೆ ಬಂದ ಕಳ್ಳನೊಬ್ಬ ಮನೆಯಲ್ಲಿ ಫಂಕ್ಷನ್ ಇದೆ. ಹದಿನೈದು ಕೆ.ಜಿ ತುಪ್ಪ ಕೊಡಿ ಎಂದಿದ್ದ. ಖರೀದಿಸಿದ 15 ಕೆಜಿ ತುಪ್ಪವನ್ನು ಬ್ಯಾಗ್‌ಗೆ ಹಾಕಿಕೊಂಡು. ನಂತರ ಅಂಗಡಿ ಮಾಲೀಕನಿಗೆ ಪೇಡ ಕೊಡಿ ಎಂದಿದ್ದ. ಅಷ್ಟೇ ಅಂಗಡಿ ಮಾಲೀಕ ಪೇಡ ಕೊಡಲು ತಿರುಗಿದಾಗ 15 ಕೆಜಿ ತುಪ್ಪದ ಬ್ಯಾಗ್‌ ಜತೆ ಎಸ್ಕೇಪ್ ಆಗಿದ್ದಾನೆ. ಪೇಡದೊಂದಿಗೆ ಬಂದ ಮಾಲೀಕ ಗ್ರಾಹಕ ಇಲ್ಲದೆ ಇರುವುದನ್ನು ಗಮನಿಸಿ ಓಡಿದ್ದಾನೆ. ಆದರೆ ಕಳ್ಳನ ಪತ್ತೆಯಾಗಿಲ್ಲ. ಚಾಲಾಕಿ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಅಂಗಡಿ ಮಾಲೀಕ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲಬುರಗಿಯಲ್ಲಿ ಸಿಎಆರ್ ಪೊಲೀಸರ ಬಸ್ ಕಳ್ಳತನಕ್ಕೆ ಯತ್ನ

ಪೊಲೀಸ್ ಕಮಿಷನರ್ ಕಛೇರಿಯಲ್ಲಿ ನಿಲ್ಲಿಸಿದ್ದ ಸಿಎಆರ್‌ ಪೊಲೀಸರ ಬಸ್ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕಲಬುರಗಿ ನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದಿದೆ. ಸೋಮವಾರ ಮಧ್ಯರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಛತ್ತಿಸ್‌ಘಡ ಮೂಲದ ಸೋನು ಭಗಿರಥ ಎಂಬಾತ ಕಲಬುರಗಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ. ಸೋಮವಾರ ಮಧ್ಯರಾತ್ರಿ ಕುಡಿದ ನಶೆಯಲ್ಲಿ ಕಮಿಷನರ್ ಕಚೇರಿಗೆ ಬಂದಿದ್ದಾನೆ. ಬಸ್‌ನ ಕಿಟಕಿಯಲ್ಲಿ ನೇತು ಹಾಕಿದ್ದ ಪೊಲೀಸ್ ಕಾನ್ಸಟೇಬಲ್ ಜೇಬಿಗೆ ಕೈ ಹಾಕಿ ಬಸ್‌ ಕೀ ತೆಗೆದುಕೊಂಡಿದ್ದ.

ಬಳಿಕ ಡ್ರೈವರ್‌ ಸೀಟ್‌ ಏರಿದ ಕುಡುಕ ಸೋನು ಬಸ್ ಸ್ಟಾರ್ಟ್ ಮಾಡಲು ಮುಂದಾಗಿದ್ದ. ಮಧ್ಯರಾತ್ರಿ ಬಸ್‌ ಸೌಂಡ್‌ ಕೇಳಿ ಎಚ್ಚೆತ್ತುಕೊಂಡ ಪೊಲೀಸ್ ಕಾನ್ಸಟೇಬಲ್ ತಕ್ಷಣ ಆರೋಪಿ ಸೋನು ಭಗಿರಥನನ್ನು ಬಂಧಿಸಿದ್ದಾರೆ. ಸದ್ಯ ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಹಾವೇರಿಯಲ್ಲಿ ಕಳ್ಳರ ಕೈಚಳಕ

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಹಾನಗಲ್ ಪಟ್ಟಣದ ಕೆಎಚ್‌ಬಿ ಕಾಲೋನಿಯ ವಿರೇಶ ಬಾಳಗೊಂಡರ ಹಾಗೂ ಕುಮಾರೇಶ್ವರ ನಗರದ ರವೀಂದ್ರ ಶಿರಗೋಡ ಎನ್ನುವರ ಮನೆಯಲ್ಲಿ ಕಳ್ಳತನವಾಗಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರವೀಂದ್ರ ಮನೆಯಲ್ಲಿ 8 ತೊಲೆ ಬಂಗಾರ, ನಗದು ಹಾಗೂ ವಿರೇಶ ಮನೆಯಲ್ಲಿ 12 ತೊಲೆ ಬಂಗಾರ 50 ಸಾವಿರ ರೂ. ಕಳ್ಳತನ ಮಾಡಿದ್ದಾರೆ.

ಬೆಂಗಳೂರಲ್ಲಿ ಸರಣಿ ಮೊಬೈಲ್‌ ಕಳ್ಳನ ಬಂಧನ

ಬೆಂಗಳೂರಿನ ವಿವಿಧೆಡೆ ಸರಣಿ ಮೊಬೈಲ್‌ ಕಳ್ಳತನ‌ ನಡೆಸುತ್ತಿದ್ದ ಕಳ್ಳನ‌ ಬಂಧನವಾಗಿದೆ. ಸೈಯದ್ ಪರ್ವೀಜ್@ಪರ್ವೀಜ್(25) ಬಂಧಿತ ಆರೋಪಿಯಾಗಿದ್ದಾನ. ರಸ್ತೆ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತಾನಾಡಿಕೊಂಡು ಹೋಗುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ಸೈಯದ್‌ ಬೈಕ್‌ನಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ.

ಆರೋಪಿಯಿಂದ ಒಟ್ಟು 5ಲಕ್ಷ ರೂ. ಬೆಲೆಬಾಳುವ 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಸುಜುಕಿ ಆಕ್ಸೆಸ್ ಮತ್ತು ಟಿವಿಎಸ್ ಎನ್ಟಾರ್ಕ್ ವಾಹನವನ್ನು ವಶಕ್ಕೆ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ನಗರ, ಜೆಪಿ ನಗರ, ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸುತ್ತಿದ್ದ. ಈ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯನಗರದಲ್ಲಿ ಮನೆ ಮೇಲೆ ಮಲಗಿದ್ದಾಗ ಕಳ್ಳತನ

ವಿಪರೀತ ಸೆಕೆ ಎಂದು ಮನೆ ಮಾಲೀಕರು ರಾತ್ರಿ ಮನೆಯ ಟೆರೇಸ್‌ ಮೇಲೆ ಮಲಗಿದ್ದಾಗ ಕಳ್ಳನೊಬ್ಬ ಮನೆಗೆ ಕಳ್ಳತನ ಮಾಡಿದ್ದಾನೆ. ವಿಜಯನಗರದ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರದೀಪ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಒಂದೂವರೇ ತೊಲೆ ಬಂಗಾರ, 1 ಲಕ್ಷ ರೂ. ಹಣ, 750 ಗ್ರಾಂ ಬೆಳ್ಳಿ ಕಳ್ಳತನವಾಗಿದೆ. ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲೂ ಪರಿಶೀಲನೆ ನಡೆಸಿ ಪೊಲೀಸರು ಸಿಸಿಟಿವಿ ಫುಟೇಜ್ ಪರಿಶೀಲನೆ ಮಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version