ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಧರಿಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನವಾಗಿದೆ. ಮತ್ತೊಂದೆಡೆ ಅಂತಹ ಪೆಂಡೆಂಟ್ (Tiger Claw Pendant) ಧರಿಸಿದ ಕೆಲವು ಪ್ರಮುಖ ವ್ಯಕ್ತಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈಗ ಜಗ್ಗೇಶ್ (Actor Jaggesh) ಕತ್ತಲ್ಲೂ ಹುಲಿ ಉಗುರು ಇದೆಯಂತೆ. ಸ್ವತಃ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದರು. 20 ವರ್ಷಗಳಿಂದ ಹುಲಿ ಉಗುರು ಧರಿಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವಿಡಿಯೊ ಇದೀಗ ವೈರಲ್ ಆಗುತ್ತಿದೆ.
ಇದೀಗ ಅರಣ್ಯಾಧಿಕಾರಿಗಳು ಇಂದು (ಅ.15) ನಟ ಜಗ್ಗೇಶ್ ಮನೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ಮಲ್ಲೇಶ್ವರಲ್ಲಿರುವ ಜಗ್ಗೇಶ್ ಅವರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಲಿದ್ದಾರೆ. ʻʻನನಗೆ 20 ವರ್ಷ ತುಂಬಿದಾಗ ಅಮ್ಮ ಈ ಲಾಕೆಟ್ ನೀಡಿದ್ದರು. ಮಗ ಹುಲಿ ಇದ್ದಾಂಗೆ ಇರಬೇಕು ಎಂದು ಅಮ್ಮ ಈ ಲಾಕೆಟ್ನ ಹಾಕಿದ್ದರು’ ಎಂದು ಸಂದರ್ಶನದಲ್ಲಿ ಜಗ್ಗೇಶ್ ಹೇಳಿದ್ದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಹಲವರು ರವಾನೆ ಮಾಡಿದ್ದಾರೆ. ಮಾಜಿ ಎಂಎಎಲ್‌ಸಿ ಪಿ ಆರ್ ರಮೇಶ್ ರಿಂದ ದೂರು ದಾಖಲಾಗಿದೆ ಎನ್ನಲಾಗಿದೆ. ಅಡಿಷನಲ್ ಚೀಫ್ ಸೆಕ್ರೆಟರಿ ಜಾವೇದ್ ಅಖ್ತರ್‌ಗೆ ಪಿ ಆರ್ ರಮೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Tiger Claw Pendant: ಹುಲಿ ಉಗುರು ಪೆಂಡೆಂಟ್ ಧರಿಸಿದ ಮತ್ತಿಬ್ಬರ ಬಂಧನ
ವೈರಲ್ ವಿಡಿಯೊ
ವರ್ತೂರು ಸಂತೋಷ್ ಗೆ ಒಂದು ನ್ಯಾಯ ಜಗ್ಗೇಶ್ ಗೆ ಒಂದು ನ್ಯಾಯ ನ? @eshwar_khandre @GParameshwara1 pic.twitter.com/CeTIwpxILF
— ಕೋಮುವಾದಿಗಳ ವಿರುದ್ಧ🇮🇳 (@KomuvadiVirudda) October 24, 2023
ಜನಸಾಮಾನ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ನಟ ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ. ನಟ ದರ್ಶನ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹುಲಿಯ ಉಗುರು, ಚರ್ಮ ಅಥವಾ ಮೂಳೆ ಧರಿಸುವುದು ಅಪರಾಧ. ಪ್ರಕರಣದಲ್ಲಿ ಹುಲಿ ಉಗುರು ಧರಿಸಿರುವುದು ಸಾಬೀತಾದರೆ 3 ವರ್ಷದಿಂದ 7 ವರ್ಷದವರಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಹುಲಿಯ ಉಗುರನ್ನು ಧರಿಸಿದ ವ್ಯಕ್ತಿಗೆ ಅದು ಎಲ್ಲಿಂದ ಸಿಕ್ಕಿದೆ? ಅದು ಯಾವುದಾದರೂ ಹುಲಿಯನ್ನು ತಾವೇ ಕೊಂದು ಸಂಗ್ರಹಿಸಿದರಾ ? ಅಥವಾ ಕೊಲೆ ಮಾಡಿದವರು ಯಾರು ಎನ್ನುವುದನ್ನು ಗಮನಿಸಲಾಗುತ್ತದೆ.
ಜಗ್ಗೇಶ್ ಅರೆಸ್ಟ್ ಯಾವಾಗ 😂😂 #BBK10 https://t.co/oOoNXv6qBq
— Sri Nidhiᴿᵃᵏᵉˢʰ ᵀʳᶦᵇᵉ (@SriNidh08326181) October 24, 2023
ಆರೋಪ ಹೊಂದಿರುವ ವ್ಯಕ್ತಿಗೆ ಬೇಟೆಯ ಹಿನ್ನೆಲೆ ಇದೆಯಾ? ಬೇಟೆಗಾರರ ಜತೆ ಸಂಬಂಧವಿದೆಯೇ ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ. ಹಿಂದೆ ಸತ್ತು ಸಿಕ್ಕಿದ ಹುಲಿಗಳಲ್ಲಿ ಚರ್ಮ ಅಥವಾ ಹಲ್ಲು, ಉಗುರುಗಳು ನಾಪತ್ತೆಯಾದ ಬಗ್ಗೆ ಹಿನ್ನೆಲೆ ಇದ್ದರೆ ಅದಕ್ಕೂ ಇದಕ್ಕೂ ಸಂಬಂಧವಿದೆಯಾ ಎಂದು ಪೊಲೀಸರು ಪರಿಶೀಲಿಸುತ್ತಾರೆ. ನಂತರ ಆರೋಪ ಸಾಬೀತಾದರೆ ಕೋರ್ಟ್ ಶಿಕ್ಷೆ ವಿಧಿಸಲಿದೆ.