ರಾಮನಗರ: ರಾಮನಗರ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದ್ದು, ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವಿಗೀಡಾದ ದಾರುಣ ಘಟನೆ ಸಂಭವಿಸಿದೆ.
ದನದ ಕೊಟ್ಟಿಗೆಯ ಪಕ್ಕದಲ್ಲೇ ಇದ್ದ ಶೆಡ್‌ನಲ್ಲಿ ಮಕ್ಕಳು ಮಲಗಿದ್ದರು. ಶೆಡ್ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸಾವಿಗೀಡಾದರು. ಮತ್ತಿಬ್ಬರಿಗೆ ಗಾಯವಾಗಿದೆ. ಪರ್ಭಿನ್ (4), ಇಷಿಕಾ (3) ಮೃತ ಮಕ್ಕಳಾಗಿದ್ದಾರೆ. ರಾಮನಗರ ಜಿಲ್ಲೆಯ ಸೋಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಒಂದೇ ಶೆಡ್ ನಲ್ಲಿ ನೇಪಾಳ ಮೂಲದ ಎರಡು ಕುಟುಂಬ ವಾಸವಾಗಿತ್ತು. ಗಂಗರಂಗಮ್ಮ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯ ಗೋಡೆ ಕುಸಿದು ಅನಾಹುತ ಸಂಭವಿಸಿತು. ಮೀನಾ ಬಿತ್ತು, ಮೋನಿಷಾ ಎಂಬುವರಿಗೆ ಗಾಯವಾಗಿದೆ.
ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.