Site icon Vistara News

Valentine’s Day: ಪ್ರೇಮಿಗಳ ದಿನಕ್ಕೂ ಮೊದಲೇ ಪ್ರೇಯಸಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ರಾಡ್‌ ತುರುಕಿ ಹತ್ಯೆಗೈದ ಕೀಚಕ

Valentines Day Shocker

#image_title

ರಾಂಚಿ: ಪ್ರೀತಿಸುವ ಜೋಡಿಗಳು ಪ್ರೇಮಿಗಳ ದಿನಕ್ಕಾಗಿ (Valentine’s Day) ಕಾಯುತ್ತಾರೆ. ಆ ದಿನ ಬಂದಾಕ್ಷಣ ಅವನು ಆಕೆಗೆ ಉಡುಗೊರೆ ನೀಡುವುದು, ಇವಳು ಅವನಿಗೆ ಹೂಮುತ್ತು ನೀಡುವುದು, ಇಬ್ಬರೂ ಕೈ ಹಿಡಿದು ಸುತ್ತಾಡುವುದು, ಒಂದೊಳ್ಳೆ ಹೋಟೆಲ್‌ಗೆ ಹೋಗಿ ಊಟ ಮಾಡುವುದು, ಲಾಂಗ್‌ ರೈಡ್‌ ಹೋಗುವುದು ಸೇರಿ ಹಲವು ಚಟುವಟಿಕೆಗಳ ಮೂಲಕ ಇಡೀ ದಿನವನ್ನು ಖುಷಿಯಿಂದ ಕಳೆಯುತ್ತಾರೆ. ಆದರೆ, ಜಾರ್ಖಂಡ್‌ನಲ್ಲಿ ಯುವಕನೊಬ್ಬ ವ್ಯಾಲೆಂಟೈನ್ಸ್‌ ಡೇಗೆ ಒಂದು ದಿನ ಬಾಕಿ ಇರುವ ಮೊದಲೇ ಪ್ರಿಯತಮೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಗುಪ್ತಾಂಗಕ್ಕೆ ರಾಡ್‌ ತುರುಕಿ ಹತ್ಯೆ ಮಾಡಿದ್ದಾನೆ.

ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯ ಅಜ್ನಿ ಗ್ರಾಮದಲ್ಲಿರುವ ಯುವಕನ ಮನೆಯ ಬಳಿಯೇ ೧೭ ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯು ಭಾನುವಾರ ರಾತ್ರಿಯೇ ಪೋಷಕರಿಗೆ ತಿಳಿಸದೆ ಪ್ರಿಯತಮನನ್ನು ಭೇಟಿಯಾಗಲು ತೆರಳಿದ್ದಾರೆ. ಆದರೆ, ಸೋಮವಾರ ಬೆಳಗ್ಗೆ ಆತನ ಮನೆಯ ಪಕ್ಕವೇ ಶವ ಪತ್ತೆಯಾಗಿದೆ. ಬಳಿಕ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಲಕಿಯ ಪೋಷಕರು ಯುವಕನ ಮೇಲೆ ಆರೋಪ ಮಾಡಿದ್ದಾರೆ. ಹಾಗೆಯೇ, ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ ನಜಾಫ್‌ಗಢದಲ್ಲಿ ಪ್ರೇಮಿಗಳ ದಿನದಂದೇ ಯುವತಿಯ ಶವವು ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. ಆಕೆಯನ್ನು ಕೂಡ ಪ್ರಿಯತಮನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Nikki Yadav Case: ಹತ್ಯೆಗೀಡಾಗುವ ಕೆಲವೇ ಗಂಟೆ ಮೊದಲು ಗೆಳೆಯನ ಮನೆಗೆ ಹೋಗಿದ್ದ ನಿಕ್ಕಿ, ಸಿಸಿಟಿವಿ ದೃಶ್ಯ ಲಭ್ಯ

Exit mobile version