ಪಣಜಿ: ಗೋವಾ ಪ್ರವಾಸಕ್ಕೆಂದು ಬಂದಿದ್ದ ಕುಟುಂಬದ ಮೇಲೆ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿರುವ ಘಟನೆ ಗೋವಾದಲ್ಲಿ ಭಾನುವಾರ ನಡೆದಿದೆ. ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ (Viral Video) ನಡೆಸುತ್ತಿದ್ದಾರೆ.
ಇದನ್ನೂ ಓದಿ: Viral Video: ʼಭಾಗ್ಯದ ಲಕ್ಷ್ಮೀ ಬಾರಮ್ಮʼ; ಅಮೆರಿಕದಲ್ಲಿ ತಮಿಳು ಹುಡುಗ ಕನ್ನಡದಲ್ಲಿ ಹಾಡಿದ ಹಾಡು ವೈರಲ್
ಜತಿನ್ ಶರ್ಮಾ ಮತ್ತು ಅವರ ಕುಟುಂಬ ಗೋವಾದ ಅಂಜುನಾದಲ್ಲಿರುವ ಸ್ಪೇಜಿಯೊ ಲೀಸರ್ ರೆಸಾರ್ಟ್‌ಗೆ ಭಾನುವಾರ ಬಂದಿದ್ದರು. ರೆಸಾರ್ಟ್ ಸಿಬ್ಬಂದಿಯೊಬ್ಬರಿಂದ ಕುಟುಂಬಕ್ಕೆ ತೊಂದರೆಯುಂಟಾಗಿದ್ದು, ಈ ಬಗ್ಗೆ ಅವರು ರೆಸಾರ್ಟ್‌ನ ನಿರ್ವಾಹಕರಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಸಿಟ್ಟಿಗೆದ್ದ ಸಿಬ್ಬಂದಿ ತನ್ನ ಸ್ನೇಹಿತರನ್ನು ಕರೆಸಿದ್ದು, ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಅದರ ವಿಡಿಯೊವನ್ನು ಜತಿನ್ ಅವರು ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ವೈರಲ್ ಆಗಿದೆ. ಪೊಲೀಸರು ರೆಸಾರ್ಟ್‌ನ ಸಿಬ್ಬಂದಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿಯೂ ವರದಿಯಾಗಿದೆ.
ಈ ಪ್ರಕರಣದ ಕುರಿತಾಗಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಮಾತನಾಡಿದ್ದಾರೆ. “ಅಂಜುನಾದಲ್ಲಿ ನಡೆದ ಹಿಂಸಾತ್ಮಕ ಘಟನೆ ಆಘಾತಕಾರಿ ಮತ್ತು ಅಸಹನೀಯವಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಇಂತಹ ಸಮಾಜ ವಿರೋಧಿ ಶಕ್ತಿಗಳು ರಾಜ್ಯದ ಜನರ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ತಂದಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.