Site icon Vistara News

7 ವ್ಯಕ್ತಿಗಳಿಂದ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾದ ವಿಧವೆ; 8 ವರ್ಷಗಳಿಂದ ನರಕದಂತಿತ್ತು ಜೀವನ

Widow raped by 7 men In Maharashtra now lodge Complaint Against them

#image_title

ಬೀಡ್​: ಸತತ 8ವರ್ಷಗಳಿಂದ ಏಳು ಮಂದಿಯಿಂದ ಅತ್ಯಾಚಾರ/ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ವಿಧವೆಯೊಬ್ಬರು (Maharashtra Widow) ಅಂತೂ ಈಗ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಂಥದ್ದೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು ಮಹಾರಾಷ್ಟ್ರದ ಬೀಡ್​​ನಿಂದ. ಕೇಸ್ ದಾಖಲಿಸಿಕೊಂಡಿರುವ ಬೀಡ್​ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ. ಆ ಏಳು ಮಂದಿಯ ಹೆಸರನ್ನೂ ಮಹಿಳೆ ಪೊಲೀಸರ ಎದುರು ಬಹಿರಂಗಪಡಿಸಿದ್ದಾರೆ. ಇವರೆಲ್ಲ ಕಳೆದ ಎಂಟುವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಎಷ್ಟೋ ಸಲ್ಲ ಒಬ್ಬೊಬ್ಬರೇ ಬಂದು ರೇಪ್​ ಮಾಡಿದ್ದಾರೆ. ಇನ್ನೂ ಹಲವು ಬಾರಿ ಗುಂಪಾಗಿಯೇ ಬಂದು ರೇಪ್ ಮಾಡಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಚಿಕ್ಕವಯಸ್ಸಿನಲ್ಲೇ ವಿಧವೆಯಾದ ಈ ಮಹಿಳೆ ಮೊದಲ ಬಾರಿಗೆ ರೇಪ್​ಗೆ ಒಳಗಾಗಿದ್ದು 2014ರಲ್ಲಿ. ಆಗಿನ್ನೂ 24ವರ್ಷದ ಅವರು ಒಂದು ದಿನ ರಾತ್ರಿ ತಡವಾಗಿ ಆಟೋದಲ್ಲಿ ತಮ್ಮ ಮನೆಗೆ ಬಂದರು. ಅಂದು ಮನೆಗೇನೋ ಬಂದರು. ಆಟೋ ಚಾಲಕ ಸಂದೀಪ್​ ಪಿಂಗ್ಳೆ, ಮಹಿಳೆಗೆ ಸ್ವಲ್ಪ ಪರಿಚಯದವನೇ ಆಗಿದ್ದರಿಂದ ಫೋನ್​ ನಂಬರ್​ ಕೂಡ ಇತ್ತು. ರಾತ್ರಿ ಮತ್ತೆ ಆ ಮಹಿಳೆಗೆ ಕರೆ ಮಾಡಿ, ನೀವು ಆಟೋದಲ್ಲಿ ನಿಮ್ಮ ಪರ್ಸ್​ ಮರೆತುಹೋಗಿದ್ದೀರಿ. ಅದು ಇಲ್ಲಿ ಬಿದ್ದಿತ್ತು. ಮನೆಗೆ ಬಂದು ನೋಡಿದೆ. ನೀವೀಗ ಬಂದು ತೆಗೆದುಕೊಂಡು ಹೋಗಬಹುದಾ ಎಂದಿದ್ದಾನೆ. ಪರ್ಸ್​​ನಲ್ಲಿ ಹಣವಿದ್ದಿದ್ದು ನೆನಪಾಗಿ ಕೂಡಲೇ ಅವರು ಅಲ್ಲಿಗೆ ಹೋಗಿದ್ದಾರೆ. ಆದರೆ ಆ ಆಟೋ ಚಾಲಕ ಮಹಿಳೆ ಮೇಲೆ ಎರಗಿ, ಅತ್ಯಾಚಾರ ಮಾಡಿದ್ದಾನೆ. ಅಷ್ಟಲ್ಲದೆ, ಅದನ್ನು ವಿಡಿಯೊ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್​ ಮಾಡಿದ್ದಾನೆ. ಇದನ್ನು ಯಾರಿಗಾದರೂ ಹೇಳಿದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದು ಆತ ಹೇಳಿದ್ದರಿಂದ ಭಯಗೊಂಡ ವಿಧವೆ ಬಾಯಿಮುಚ್ಚಿಕೊಂಡು ಅವನ ದೌರ್ಜನ್ಯವನ್ನು ಸಹಿಸಿಕೊಂಡಿದ್ದಾಳೆ. ಅಲ್ಲಿಂದ ಈಚೆಗೆ ಅವನು ಪದೇಪದೆ ಆಕೆಯನ್ನು ಮನಸಿಗೆ ಬಂದಲ್ಲಿ ಕರೆದು ಅತ್ಯಾಚಾರ ಎಸಗಿದ್ದಾನೆ. ಅವಳು ಮನವಿ ಮಾಡಿದರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಆದರೆ ಪಿಂಗ್ಳೆ ಈ ವಿಡಿಯೊವನ್ನು ತನ್ನ ಸಂಬಂಧಿಕರಾದ ಗೋರಖ್ ಇಂಗೋಲೆ ಮತ್ತು ಅವನ ಸಹೋದರ ಬಾಲಾಜಿ ಇಂಗೋಲೆಗೆ ಫಾರ್ವರ್ಡ್ ಮಾಡಿದ್ದಾನೆ. ಇವರಿಬ್ಬರೂ ಕೂಡ ಆ ವಿಡಿಯೊ ಇಟ್ಟುಕೊಂಡು 2015ರಿಂದ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿ ತಮ್ಮ ಕಾಮ ತೀರಿಸಿಕೊಳ್ಳಲು ಪ್ರಾರಂಭಿಸಿದರು. ಅದಾದ ಮೇಲೆ 2020ರಲ್ಲಿ ಈ ಗೋರಖ್ ಇಂಗೋಲೆ ಆಕೆಯನ್ನು ಹಿವರಾ ಬೆಟ್ಟದ ದುರ್ಗಮ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ತನ್ನ ನಾಲ್ವರು ಸ್ನೇಹಿತರೊಟ್ಟಿಗೆ ಸೇರಿ ಗ್ಯಾಂಗ್​ ರೇಪ್ ಮಾಡಿದ್ದಾನೆ. ಅಂದು ಸುಮಾರು 6 ತಾಸುಗಳ ಕಾಲ ಅವರೆಲ್ಲ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಂದು ಆಕೆಯ ಖಾಸಗಿ ಅಂಗದಿಂದ ರಕ್ತ ಸುರಿಯುತ್ತಿದ್ದರೂ ಆರೋಪಿಗಳು ಕರುಣೆ ತೋರಿಸಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಾದ ಬಳಿಕವೂ ಅವರು ಮಹಿಳೆ ಮೇಲೆ ಗುಂಪಾಗಿ ಅತ್ಯಾಚಾರ ಮಾಡಿದ್ದಾರೆ.

ಇದನ್ನೂ ಓದಿ: ರೇಪ್​ ಮಾಡಲು ಬಂದವನ ಜನನಾಂಗ ಕತ್ತರಿಸಿದ ಮಹಿಳೆ; ಕಾಮದಾಹ ತಂದಿಟ್ಟ ಸಂಕಷ್ಟ

2021ರಲ್ಲಿ ಈಕೆ ಒಮ್ಮೆ ಗರ್ಭಿಣಿಯೂ ಆಗಿದ್ದಳು. ಅದನ್ನವಳು ಗೋರಖ್ ಇಂಗೋಲೆಗೆ ಹೇಳಿ, ಇನ್ನಾದರೂ ನನ್ನ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದರು. ಆದರೆ ಆ ದುರುಳ ಆಕೆಗೆ ಗರ್ಭಪಾತ ಮಾಡಿಸಿದ್ದ. ಹೀಗೆ ನಿತ್ಯ ನರಕ ತಡೆಯಲಾರದ ಅವಳು ಬೀಡ್​ ನಗರವನ್ನೇ ತೊರೆದಿದ್ದರು. ಮಜಲ್​ಗಾಂವ್ ಎಂಬಲ್ಲಿಗೆ ಹೋಗಿ, ರೆಸ್ಟೋರೆಂಟ್​ವೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಆ ದುಷ್ಕರ್ಮಿಗಳು ಅಲ್ಲಿಗೂ ಬಂದು ಆಕೆಯನ್ನು ಬಳಸಿಕೊಂಡಿದ್ದಾರೆ. ಇಷ್ಟೆಲ್ಲ ಆಗಿ ಎರಡು ವರ್ಷಗಳ ಬಳಿಕ ಈಗ ಧೈರ್ಯತಂದುಕೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಗಳ ವಿರುದ್ಧ ಪೊಲೀಸರು ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Exit mobile version