Site icon Vistara News

ಬ್ಯೂಟಿ ಪಾರ್ಲರ್​​ಗೆ ಹೋಗ್ಬೇಡ ಎಂದ ಗಂಡ; ಕೂಗಾಡಿ, ರಂಪಾಟ ಮಾಡಿ ನೇಣು ಬಿಗಿದುಕೊಂಡು ಮೃತಪಟ್ಟ ಹೆಂಡತಿ

Wife Committed Suicide After Husband stops her from going to beauty parlour In Madhya Pradesh

#image_title

ಭೋಪಾಲ್​: ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬಹುತೇಕರು ಒಂದಲ್ಲ ಒಂದು ಕಾರಣಕ್ಕಾಗಿ ಬ್ಯೂಟಿಪಾರ್ಲರ್ (Beauty Parlour)​ಗೆ ಹೋಗಿಯೇ ಹೋಗುತ್ತಾರೆ..ಹೇರ್​ಕಟ್​, ಐಬ್ರೋ, ಪೆಡಿಕ್ಯೂರ್​..ಹೀಗೆ ವಿವಿಧ ಕಾರಣಕ್ಕಾಗಿ ಬ್ಯೂಟಿಪಾರ್ಲರ್​ ಮೆಟ್ಟಿಲೇರುವುದು ಸಹಜವೆಂಬಂತೆ ಆಗಿದೆ. ಹಾಗೇ, ಮಧ್ಯಪ್ರದೇಶದಲ್ಲೂ ರೀನಾ ಯಾದವ್ ಎಂಬಾಕೆ (34) ಪದೇಪದೆ ಬ್ಯೂಟಿ ಪಾರ್ಲರ್​ಗೆ ಹೋಗುತ್ತಿದ್ದರು. ಆದರೆ ಅದು ಆಕೆಯ ಪತಿಗೆ ಇಷ್ಟವಾಗದೆ, ಇನ್ನು ಹೋಗಬೇಡ ಎಂದಿದ್ದಾನೆ. ಅಷ್ಟಕ್ಕೇ ಕೋಪಗೊಂಡ ರೀನಾ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ.

ಮಧ್ಯಪ್ರದೇಶದ ಸ್ಕೀಮ್​ ನಂಬರ್​ 51 ಏರಿಯಾದಲ್ಲಿ ದಂಪತಿ ವಾಸವಾಗಿದ್ದರು. ಪತಿಯ ಹೆಸರು ಬಲರಾಮ್​. ಇವರಿಬ್ಬರಿಗೆ ಮದುವೆಯಾಗಿ 15ವರ್ಷವಾಗಿತ್ತು. ಇತ್ತೀಚೆಗೆ ರೀನಾ ಆಗಾಗ ಬ್ಯೂಟಿಪಾರ್ಲರ್​ಗೆ ಹೋಗುತ್ತಿದ್ದಳು. ಇದು ಸರಿಕಾಣುತ್ತಿಲ್ಲ, ಬ್ಯೂಟಿಪಾರ್ಲರ್​ಗೆ ಹೋಗಬೇಡ ಎಂದು ಬಲರಾಮ್ ಹೇಳಿದ್ದ. ಅದಕ್ಕೇ ಕುಪಿತಗೊಂಡು ರೀನಾ ತಮ್ಮ ಮನೆಯ ಫ್ಯಾನ್​ಗೆ ನೇಣು ಹಾಕಿಕೊಂಡಿದ್ದಾರೆ. ಈಕೆ ಸಾಯುವುದಕ್ಕೂ ಮೊದಲು ದಂಪತಿ ಮಧ್ಯೆ ಜಗಳವಾಗಿದೆ. ರೀನಾ ತುಂಬ ಕೋಪಗೊಂಡು ಕೂಗಾಡಿದ್ದಳು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಬಲರಾಮ್​ ಅವರೇ ಕರೆ ಮಾಡಿ ನಮಗೆ ವಿಷಯ ತಿಳಿಸಿದರು ಎಂದು ಪೊಲೀಸ್​ ಅಧಿಕಾರಿ ಉಮಾಶಂಕರ್ ಯಾದವ್ ತಿಳಿಸಿದ್ದಾರೆ. ಶವವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬ್ಯೂಟಿ ಪಾರ್ಲರ್​​ನಲ್ಲಿ ಕೂದಲು ತೊಳೆಸುತ್ತಿದ್ದಾಗಲೇ ಮಹಿಳೆಗೆ ಪಾರ್ಶ್ವವಾಯು; ಇದೊಂದು ಅಪರೂಪದ ಸ್ಟ್ರೋಕ್!​

ಇವರಿಬ್ಬರ ಕುಟುಂಬದವರನ್ನೂ ವಿಚಾರಿಸಿದ್ದೇವೆ. ಬಲರಾಮ್​ ಮತ್ತು ರೀನಾ ಮದುವೆಯಾಗಿ ಒಂದಷ್ಟು ವರ್ಷ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಪದೇಪದೆ ಜಗಳ ಏಳುತ್ತಿತ್ತು ಎಂದು ಅವರು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಬಲರಾಮ್​ ಪೊಲೀಸರ ಎದುರು ಹೇಳಿಕೆ ನೀಡಿ ‘ನಾನು ಬ್ಯೂಟಿ ಪಾರ್ಲರ್​ಗೆ ಹೋಗಬೇಡ ಎಂದಷ್ಟೇ ಹೇಳಿದೆ, ಇನ್ನೇನೂ ಆಕೆಗೆ ಬೈದಿಲ್ಲ, ಹೊಡೆದಿಲ್ಲ’ ಎಂದಿದ್ದಾನೆ.

Exit mobile version