Site icon Vistara News

ರೇಪ್​ ಮಾಡಲು ಬಂದವನ ಜನನಾಂಗ ಕತ್ತರಿಸಿದ ಮಹಿಳೆ; ಕಾಮದಾಹ ತಂದಿಟ್ಟ ಸಂಕಷ್ಟ

Woman cuts off genitals of Man After he tries rape her in Assam

#image_title

ಗುವಾಹಟಿ: ಅತ್ಯಾಚಾರ ಎಂಬ ಪೆಡಂಭೂತಕ್ಕೆಂದೂ ಮುಕ್ತಿಯಿಲ್ಲ. ಕಾಮುಕರ ಕಾಮದಾಹಕ್ಕೆ ಅದೆಷ್ಟೋ ಯುವತಿಯರು/ಮಹಿಳೆಯರು/ಪುಟ್ಟಪುಟ್ಟ ಬಾಲಕಿಯರು/ವೃದ್ಧೆಯರು ತುತ್ತಾಗುತ್ತಿದ್ದಾರೆ. ಅದೆಲ್ಲ ಬಿಡಿ, ಆ ದುರುಳರು ಪ್ರಾಣಿಗಳನ್ನೂ ಬಿಡುವುದಿಲ್ಲ. ಇಂಥ ವರದಿಗಳು ನಿತ್ಯವೂ ವರದಿಯಾಗುತ್ತವೆ. ಅಂಥ ಕಾಮುಕನೊಬ್ಬನಿಗೆ ಅಸ್ಸಾಂನ ಮಹಿಳೆ (Assam Woman)ಯೊಬ್ಬರು ತಕ್ಕ ಪಾಠ ಕಲಿಸಿದ್ದಾರೆ. ಮೈಮೇಲೆ ಎರಗಿದ ಅವನ ಜನನಾಂಗವನ್ನೇ ಕತ್ತರಿಸಿ ಬಿಸಾಕಿದ್ದಾಳೆ.

ಅಸ್ಸಾಂನ ಮೊರಿಗಾಂವ್​ ಜಿಲ್ಲೆಯ ಬರಲಿಮರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಹೆಸರು ಒಸ್ಮಾನ್ ಅಲಿ. ಮೂಲತಃ ಡರಾಂಗ್​ ಜಿಲ್ಲೆಯ ಧುಲಾ ಎಂಬ ಗ್ರಾಮದವನು. ಬರಲಿಮರಿ ಗ್ರಾಮದಲ್ಲಿದ್ದ ಒಂದು ಅನಾಥ ವೃದ್ಧ ದಂಪತಿಯನ್ನು ಆರೈಕೆ ಮಾಡುವ ಸಲುವಾಗಿ ಈತ ಬಂದಿದ್ದ. ಆದರೆ ಸೋಮವಾರ ಈತ ಮಹಿಳೆಯ ಮನೆಗೆ ನುಗ್ಗಿ ಆಕೆ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಮನೆಯಲ್ಲಿದ್ದ ಒಂದು ಹರಿತವಾದ ಅಸ್ತ್ರ ತೆಗೆದುಕೊಂಡು, ಆತನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ. ಒಸ್ಮಾನ್ ಅಲಿಯ ಕೂಗಾಟ-ಅರಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಅವನನ್ನು ಮೋರಿಗಾಂವ್​ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಸಾಕಾಗದೆ, ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: 3ವರ್ಷದ ಬಾಲಕಿಯನ್ನು ಶಾಲೆಯಲ್ಲೇ ಅತ್ಯಾಚಾರ ಮಾಡಿದ 1ನೇ ತರಗತಿ ಹುಡುಗ; ಪಾಲಕರಿಂದ ದೂರು

ಈ ಹಿಂದೆ ಮಾರ್ಚ್​ 2ರಂದು ಇಂಥದ್ದೇ ಒಂದು ಘಟನೆ ನಾಗಾಂವ್​​ನ ಭಟಡ್ರವಾ ಏರಿಯಾದಲ್ಲಿ ನಡೆದಿತ್ತು. ಮಹಿಳೆಯೊಬ್ಬರು ತಮ್ಮ ಮೇಲೆ ರೇಪ್​ ಮಾಡಲು ಬಂದವನ ಜನನಾಂಗ ಕತ್ತರಿಸಿದ್ದರು. ಆರೋಪಿ ಆ ಮಹಿಳೆಯ ಪಕ್ಕದ ಮನೆಯವನೇ ಆಗಿದ್ದ. ಅವನ ಜನನಾಂಗ ಕತ್ತರಿಸಿದ ಬಳಿಕ ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದರು. ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದರು.

Exit mobile version