Site icon Vistara News

Sexually Assault | ಲೈಂಗಿಕ ದೌರ್ಜನ್ಯ ವಿರೋಧಿಸಿದ ಮಹಿಳೆಯನ್ನು ಚಲಿಸುವ ರೈಲಿನಿಂದ ತಳ್ಳಿದ!

Assault

ಚಂಡೀಗಢ: ಚಲಿಸುವ ರೈಲಿನಲ್ಲಿ ಕಾಮದಾಸೆ ತೀರಿಸಿಕೊಳ್ಳಲು (Sexually Assault) ಮುಂದಾದವನಿಗೆ ಪ್ರತಿರೋಧ ಒಡ್ಡಿದ ಕಾರಣ ಮಹಿಳೆಯನ್ನು ರೈಲಿನಿಂದ ತಳ್ಳಿದ್ದು, ಆಕೆ ಮೃತ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಹರಿಯಾಣದ ಫೆತೇಹಾಬಾದ್‌ನಲ್ಲಿ ಕೃತ್ಯ ನಡೆದಿದೆ.

ತೊಹಾನದಲ್ಲಿರುವ ತಮ್ಮ ಮನೆಗೆ ೩೦ ವರ್ಷದ ಮಹಿಳೆಯು ಮಗನ ಜತೆ ಹಿಂತಿರುಗುತ್ತಿದ್ದರು. ನರ್ವಾನದಲ್ಲಿ ರೈಲು ಹತ್ತಿದ ವ್ಯಕ್ತಿಯು ಮಹಿಳೆ ಮೇಲೆ ಎರಗಿದ್ದಾನೆ. ಏಕಾಏಕಿ ವ್ಯಕ್ತಿಯು ಲೈಂಗಿಕ ದೌರ್ಜನ್ಯ ಎಸಗಲು ಮುಂದಾದಾಗ ಮಹಿಳೆಯು ಪ್ರತಿರೋಧ ಒಡ್ಡಿದ್ದಾರೆ. ಇದರಿಂದ ಕುಪಿತಗೊಂಡ ಆತ ಮಹಿಳೆಯನ್ನು ಚಲಿಸುವ ರೈಲಿನಿಂದ ತಳ್ಳಿದ್ದಾನೆ. ಬಳಿಕ ಆತನೂ ಜಿಗಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ತೊಹಾನ ರೈಲು ನಿಲ್ದಾಣದಲ್ಲಿ ಪತ್ನಿ ಹಾಗೂ ಮಗನಿಗಾಗಿ ಪತಿ ಕಾಣುತ್ತಿದ್ದರು. ಆದರೆ, ಬೋಗಿಯಲ್ಲಿ ಮಗನ ಒಬ್ಬನೇ ಇದ್ದು, ಪತ್ನಿ ಕಾಣದ ಕಾರಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ರೈಲು ಹಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಕೃತ್ಯ ಎಸಗಿದವನನ್ನು ಸಂದೀಪ್‌ ಕುಮಾರ್‌ ಎಂದು ಗುರುತಿಸಲಾಗಿದ್ದು, ಬಂಧಿಸಲಾಗಿದೆ.

ಇದನ್ನೂ ಓದಿ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಜೈಲು, ₹50 ಸಾವಿರ ದಂಡ

Exit mobile version