ಚೆನ್ನೈ: ಇತ್ತೀಚೆಗೆ ಚಂಡೀಗಢ ವಿವಿಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡಿದ ವಿಡಿಯೊಗಳನ್ನು ಜಾಲತಾಣದಲ್ಲಿ ಲೀಕ್ ಮಾಡಿದ ಪ್ರಕರಣ (MMS Scandal) ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಇಂತಹದ್ದೇ ಪ್ರಕರಣ ಸುದ್ದಿಯಾಗಿದೆ. ಹಾಸ್ಟೆಲ್‌ನಲ್ಲಿ ಮಹಿಳೆಯೊಬ್ಬರು ಬೇರೆ ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೊ ಮಾಡಿ, ಅವುಗಳನ್ನು ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಪ್ರಕರಣ ಬಹಿರಂಗವಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಜನನಿ ಎಂಬ ಮಹಿಳೆಯು ತಾನಿರುವ ಹಾಸ್ಟೆಲ್‌ನಲ್ಲಿ ಬೇರೆ ಹೆಣ್ಣುಮಕ್ಕಳು ಸ್ನಾನ ಮಾಡುವ ಹಾಗೂ ಬಟ್ಟೆ ಬದಲಾಯಿಸುವುದನ್ನು ಕದ್ದು ವಿಡಿಯೊ ಮಾಡಿದ್ದಾರೆ. ಬಳಿಕ ಅವುಗಳನ್ನು ವೃತ್ತಿಯಲ್ಲಿ ವೈದ್ಯನಾಗಿರುವ ತನ್ನ ಬಾಯ್‌ಫ್ರೆಂಡ್ ಆಶಿಕ್ ಎಂಬುವವನಿಗೆ ಕಳುಹಿಸಿದ್ದಾರೆ. ಹೀಗೆ ವಿಡಿಯೊ ಮಾಡಿ ಕಳುಹಿಸುವುದೇ ಮಹಿಳೆಯ ರೂಢಿಯಾಗಿತ್ತು ಎಂದು ತಿಳಿದುಬಂದಿದೆ. ಮಹಿಳೆಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಯಾವ ಕಾಲೇಜಿನ ಹಾಸ್ಟೆಲ್ ಎಂಬುದು ಸೇರಿ ಹಲವು ವಿಷಯಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ | Operation Meghchakra | ಮಕ್ಕಳ ಅಶ್ಲೀಲ ವಿಡಿಯೊ ಹಂಚಿಕೆ ಜಾಲ ಭೇದಿಸಿದ ಸಿಬಿಐ, 20 ರಾಜ್ಯದಲ್ಲಿ ದಾಳಿ