Site icon Vistara News

ಮೊಮ್ಮಗನ ಶವದೊಂದಿಗೆ 10 ದಿನ ಜೀವಿಸಿದ ವೃದ್ಧೆ; ಹೆಣ ಕೊಳೆಯುತ್ತಿದ್ದರೂ ಮೌನವಾಗಿ ಕುಳಿತಿದ್ದರು!

Two sisters from varanasi living with their mother dead body Says UP Police

#image_title

65ವರ್ಷದ ವೃದ್ಧೆಯೊಬ್ಬರು ಸುಮಾರು 10 ದಿನ ತಮ್ಮ ಮೊಮ್ಮಗನ ಶವದೊಂದಿಗೆ ಜೀವಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh News) ಬಾರಾಬಂಕಿ ಜಿಲ್ಲೆಯ ಮೋಹ್ರಿಪುರ ಎಂಬಲ್ಲಿಂದ ಈ ಮನಮಿಡಿಯುವ ಘಟನೆ ವರದಿಯಾಗಿದೆ. ಆಕೆ ವೃದ್ಧೆ, ಹರೆಯಕ್ಕೆ ಕಾಲಿಡುತ್ತಿದ್ದ, 17 ವರ್ಷದ ಮೊಮ್ಮಗ ಸತ್ತು ಹೋಗಿದ್ದಾನೆ. ಆದರೆ ಈ ಮಹಿಳೆ (UP Woman) ಅವನ ಹೆಣದ ಪಕ್ಕವೇ ಕುಳಿತು ಕಾಲಕಳೆದಿದ್ದಾರೆ. ಯಾರಿಗೂ ತಿಳಿಸಲೂ ಇಲ್ಲ, ಆಕೆಗೆ ಏನು ಮಾಡಬೇಕು ಎಂಬುದು ಅರ್ಥವೂ ಆದಂತಿಲ್ಲ..!

ಮಹಿಳೆ ಹೆಸರು ಮಿಥಿಲೇಶ್​. ಮೊಮ್ಮಗ ಪ್ರಿಯಾಂಶು. ಭಾನುವಾರ ಇವರ ಪಕ್ಕದ ಮನೆಯವರು ಪೊಲೀಸರನ್ನು ಕರೆಸಿದ್ದಾರೆ. ಮಿಥಿಲೇಶ್ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳಿದ್ದಾರೆ. ಅದೇನೆಂದು ನೋಡಲು ಪೊಲೀಸರು ಒಳಗೆ ಹೋದಾಗ ಅಲ್ಲಿ, ಪ್ರಿಯಾಂಶು ಮೃತದೇಹದ ಪಕ್ಕದಲ್ಲಿ ಮಿಥಿಲೇಶ್​ ಕುಳಿತಿದ್ದರು. ಆ ಹೆಣವಂತೂ ಭಾಗಶಃ ಕೊಳೆತು ಹೋಗಿತ್ತು. ಬಳಿಕ ಪೊಲೀಸರು ಶವವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಿದ್ದಾರೆ. ವೃದ್ಧೆ ಸ್ವಲ್ಪ ಮಾನಸಿಕ ಅಸ್ವಸ್ಥರಂತೆ ಕಂಡು ಬಂದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ‘ಪ್ರಿಯಾಂಶು ಸಾವಿಗೆ ಕಾರಣವೇನು ಎಂಬುದು ಪೋಸ್ಟ್​ಮಾರ್ಟಮ್​ ವರದಿ ಬಂದ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ಪೊಲೀಸ್ ಅಧಿಕಾರಿ ಬಿನು ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ

ಪ್ರಿಯಾಂಶು ಕಳೆದ ಕೆಲವು ವರ್ಷಗಳಿಂದ ಈ ಮನೆಯಲ್ಲಿ ತನ್ನ ಅಜ್ಜಿ ಜತೆ ವಾಸಿಸುತ್ತಿದ್ದ. ವೃದ್ಧೆ ಮಿಥಿಲೇಶ್​ ಪರಿ ಸರ್ಕಾರಿ ನೌಕರನಾಗಿದ್ದ. ಅವರು ಮೃತಪಟ್ಟ ಬಳಿಕ ಒಬ್ಬರೇ ಇರುತ್ತಿದ್ದರು. ಈಕೆಗೆ ಇಬ್ಬರು ಹೆಣ್ಣುಮಕ್ಕಳು. ಅದರಲ್ಲಿ ಹಿರಿಯ ಮಗಳು ಮತ್ತು ಅಳಿಯ ಕೂಡ ಆರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಅವರ ಮಗ ಇಲ್ಲಿಗೆ ಬಂದು ಅಜ್ಜಿಯ ಜತೆ ವಾಸವಾಗಿದ್ದ. ಇನ್ನೊಬ್ಬಳು ಕಿರಿಯ ಮಗಳು ಲಖಿಂಪುರ ಖೇರಿಯಲ್ಲಿ ವಾಸವಾಗಿದ್ದಾಳೆ. ಅವಳಿಗೆ ವಿಷಯ ತಿಳಿಸಿದ್ದೇವೆ. ವೃದ್ಧೆ ಮನೆಯಿಂದ ಕಳೆದ ಮೂರ್ನಾಲ್ಕು ದಿನಗಳಿಂದಲೂ ವಾಸನೆ ಬರುತ್ತಿತ್ತು. ಅನುಮಾನ ಬಂದು ನಿಮಗೆ ಫೋನ್ ಮಾಡಿದೆವು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Exit mobile version