ವಿಶಾಖಪಟ್ಟಣಂ: 35 ವರ್ಷದ ಮಹಿಳೆಯನ್ನು ಕೊಂದು(Woman Murdered), ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿ ಮನೆಯಲ್ಲಿ ಅಡಗಿಸಿಟ್ಟ ಘಟನೆಯು ಆಲ್ಮೋಸ್ಟ್ ಎರಡು ವರ್ಷದ ಬಳಿಕ ಬೆಳಕಿಗೆ ಬಂದಿದೆ. ಈ ಘಟನೆ 18 ತಿಂಗಳ ಹಿಂದೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಮಧುರವಾಡಾ ನಗರದ ವಿಕಲಂಗುಲಾ ಎಂಬ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ ಈ ಕೊಲೆ 2021ರ ಮೇ ತಿಂಗಳಲ್ಲಿ ನಡೆದಿದೆ. ಆದರೆ, ಕಳೆದ ಭಾನುವಾರ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೊಲೆಯಾದ ಮಹಿಳೆ ಸುಮಾರು 4.5 ಅಡಿ ಎತ್ತರ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಲ್ಲದೆ, ಆಕೆ ವೇಶ್ಯಯಾಗಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಹಾಗಿದ್ದೂ ಕೊಲೆಯಾದ ಮಹಿಳೆಯ ಪತ್ತೆ ಇನ್ನೂ ಆಗಿಲ್ಲ. ಅಲ್ಲದೇ, ಕೊಲೆಯ ಹಿಂದಿನ ಕಾರಣವೂ ಗೊತ್ತಾಗಿಲ್ಲ.
ಪೊಲೀಸರಿಗೆ ಈವರೆಗೆ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಕೊಲೆ ಮಾಡಿದ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ತುಂಡುಗಳನ್ನು ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿ, ಗಮ್ಟೇಪಿನಿಂದ ಬಿಗಿಯಲಾಗಿತ್ತು. ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡುವ 22 ವರ್ಷದ ರಿಷಿ ಮೇಲೆ ಅನುಮಾನಗಳಿದ್ದು, ಆತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Shraddha Murder Case| ಶ್ರದ್ಧಾಳ ದೇಹ ತುಂಡು ಮಾಡಲು ಅಫ್ತಾಬ್ ಪೂನಾವಾಲ ಚೀನಿ ಕ್ಲೀವರ್ ಬಳಸಿದ್ದ!