ತುಮಕೂರು: ಅಳಿಯಮತ್ತು ಮಗಳ ಜಗಳ ಬಿಡಿಸಲು ಹೋದ ಮಹಿಳೆಯೊಬ್ಬರು ಕೊಲೆಯಾದ (Murder Case ) ಘಟನೆ ತುಮಕೂರು ಜಿಲ್ಲೆಯ ಮಧುಗಿರಿ (Madhugiri) ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಅಶ್ವಿತ್ ಉನ್ನಿಸಾ (58) ಕೊಲೆಯಾದವರು. ಅವರು ತಾಲೂಕಿನ ಬೆಳಗುಂಬ ನಿವಾಸಿಯಾಗಿದ್ದಾರೆ. ಸೈಯದ್ ಸುಹೈಲ್ ಕೊಲೆ ಆರೋಪಿ.
ತನ್ನ ಮಗಳನ್ನು ಕೊಡಿಗೇನಹಳ್ಳಿ ನಿವಾಸಿ ಸೈಯದ್ ಸುಹೇಲ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು. ಕೌಟುಂಬಿ ಕಲಹದ ಹಿನ್ನೆಲೆಯಲ್ಲಿ ಪ್ರತಿದಿನ ದಂಪತಿ ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ತಿರುಗಿದ ಕಾರಣ ತವರು ಮನೆಯಲ್ಲಿದ್ದ ತಾಯಿಯನ್ನ ಪೋನ್ ಮಾಡಿ ಮಗಳು ಕರೆಸಿಕೊಂಡಿದ್ದಳು. ಅಂತೆಯೇ ಮನಗೆ ಬಂದ ಅಶ್ಚಿತ್ ಉನ್ನಿಸಾ ಜಗಳ ಬಿಡಿಸಲು ಹೋದ ವೇಳೆ ಸುಹೈಲ್ ದೊಣ್ಣೆಯಿಂದ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಶ್ವಿತ್ ಉನ್ನಿಸಾ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮಾರುತಿ ಇಕೋ -ಬೈಕ್ ಮುಖಾಮುಖಿ ಡಿಕ್ಕಿ; ಮೂವರ ದುರ್ಮರಣ
ರಾಮನಗರ: ಮಾರುತಿ ಸುಜುಕಿ ಇಕೋ ಮತ್ತು ಬೈಕ್ ಡಿಕ್ಕಿಯಾಗಿ ಮೂವರು ದುರ್ಮರಣ ಹೊಂದಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ತಾಮಸಂದ್ರ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.
ಇದನ್ನೂ ಓದಿ :Missing Case : ನಾಪತ್ತೆಯಾದ ಬಾಲಕನ ಹಿಂದೆ ಭಾರಿ ನಿಗೂಢತೆ; ಬಾಂಬ್ ತಯಾರಿಕರ ಕೈಗೆ ಸಿಲುಕಿದ್ದನಾ?
ಕನಕಪುರ ಕಡೆಯಿಂದ ಬರುತ್ತಿದ್ದ ಬೈಕ್, ಎದುರಿಗೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಉತ್ತರ ಭಾರತ ಮೂಲದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರು, ಕೆಲಸ ಮುಗಿಸಿ ವಾಪಸ್ ಬರುವಾಗ ಅಪಘಾತ ನಡೆದಿದೆ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಯಾನಂದ್ ಸಾಗರ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ.
ಅಪಘಾತಕ್ಕೆ ಇಬ್ಬರು ಬಲಿ; ಪಲ್ಟಿ ಹೊಡೆದ ಬೊಲೆರೋ, ಸವಾರನ ಮೇಲೆ ಬಿದ್ದ ಕಂಬ
ರಾಯಚೂರು/ದಾವಣಗೆರೆ: ಬೊಲೆರೋ ವಾಹನವು ಪಲ್ಟಿಯಾಗಿ ಯುವಕನೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾಯಚೂರಿನ ಯಾಪಲದಿನ್ನಿ ಬಳಿಯ ಎನ್‌ಎಚ್ 150 (C) ಮಾರ್ಗದಲ್ಲಿ ಅಪಘಾತ (Road Accident ) ಸಂಭವಿಸಿದೆ. ಆಂಜನೇಯ (23) ಮೃತ ದುರ್ದೈವಿ.
ಚಂದ್ರಬಂಡಾ ಗ್ರಾಮದ ಆಂಜನೇಯ ಸೇರಿ ಮೂವರು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದಾಗ ಒಮ್ಮೆಲೆ ಪಲ್ಟಿ ಹೊಡೆದಿದೆ. ಬೊಲೆರೋ ಅಡಿ ಸಿಲುಕಿದ್ದ ಆಂಜನೇಯನಿಗೆ ತೀವ್ರ ರಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ನಾಗರಾಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಲಕ ವಿರೇಶ್ ಎಂಬಾತ ನಿರ್ಲಕ್ಷಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಬೊಲೆರೋ ವಾಹನದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕಬ್ಬಿಣದ ವಸ್ತುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ. ಹೀಗಾಗಿ ಭರಕ್ಕೆ ನಿಯಂತ್ರಣ ತಪ್ಪಿ ವಾಹನವು ಪಲ್ಟಿ ಹೊಡೆದಿದೆ ಎನ್ನಲಾಗಿದೆ ಸ್ಥಳಕ್ಕೆ ರಾಯಚೂರು ಎಸ್‌ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿದ್ದ ಕಬ್ಬಿಣದ ಕಂಬಗಳನ್ನು , ವಾಹನವನ್ನು ತೆರವು ಮಾಡಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.