Site icon Vistara News

ಗುಪ್ತ ಸಂಬಂಧ ಶಂಕಿಸಿ ಗಂಡನ ಗುಪ್ತಾಂಗಕ್ಕೆ ಕುದಿಯುವ ನೀರು ಸುರಿದ ಪತ್ನಿ

affair

ರಾಣಿಪೇಟ್:‌ ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಹೆಂಡತಿಯೊಬ್ಬಳು ಆತನ ಗುಪ್ತಾಂಗದ ಮೇಲೆ ಕುದಿಯುವ ನೀರು ಎರಚಿ ಸುಟ್ಟುಹಾಕಿದ ಘಟನೆ ನಡೆದಿದೆ.

ಪುದುಪಟ್ಟು ಎಂಬಲ್ಲಿನ ತಂಗರಾಜ್‌ (32) ಎಂಬಾತನೇ ಪತ್ನಿಯಿಂದಾಗಿ ವೃಷಣ ಸುಟ್ಟುಕೊಂಡ ಗಂಡ. ಈತನನ್ನು ನೆರೆಕೆರೆಯವರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಂಗರಾಜ್‌ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಒಬ್ಬಾಕೆ ಸಹೋದ್ಯೋಗಿಯ ಜತೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಆತನ ಪತ್ನಿ ಪ್ರಿಯಾ (29) ಶಂಕಿಸಿದ್ದಳು. ಇದೇ ಕಾರಣಕ್ಕಾಗಿ ಗಂಡ- ಹೆಂಡತಿ ನಡುವೆ ನಿತ್ಯ ಕಲಹವಾಗುತ್ತಿತ್ತು.

ಮಂಗಳವಾರ ರಾತ್ರಿ ಹೀಗೆ ಜಗಳ ಮುಗಿಸಿ ತಂಗರಾಜ್‌ ಮಲಗಿದ್ದಾಗ ಕಿಚನ್‌ಗೆ ಹೋಗಿ ನೀರು ಕುದಿಸಿ ತಂದ ಪ್ರಿಯಾ, ಆತನ ವೃಷಣಗಳ ಮೇಲೆ ಸುರಿದಿದ್ದಾಳೆ. ನೋವಿನಿಂದ ಕೂಗಾಡುತ್ತಿದ್ದ ತಂಗರಾಜ್‌ನನ್ನು ಸುತ್ತಮುತ್ತಲಿನವರು ಸೇರಿ ವಲಾಜಪೇಟ್ ಆಸ್ಪತ್ರೆಗೆ ತಂದಿದ್ದಾರೆ. ತಂಗರಾಜ್‌ನ ಗುಪ್ತಾಂಗಗಳು ಶೇ.50ರಷ್ಟು ಸುಟ್ಟುಹೋಗಿವೆ. ದೇಹದ ಇತರ ಭಾಗಗಳಿಗೂ ಬಿಸಿನೀರು ಬಿದ್ದಿದ್ದು, ಮೈ ಅಲ್ಲಲ್ಲಿ ಸುಟ್ಟಿದೆ.

ಕಾವೇರಿಪಾಕ್ಕಂ ಪೊಲೀಸರು ಪತ್ನಿಯ ಮೇಲೆ ಸೆಕ್ಷನ್‌ 294, 324, 506 506(2) ಗಳಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಿಗರೇಟು ಹೊಗೆ ಮುಖಕ್ಕೆ ಬಿಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ರಾಡ್‌ನಿಂದ ಹಲ್ಲೆ ಮಾಡಿದ ಯುವಕ

Exit mobile version