Site icon Vistara News

ದೆಹಲಿಯ ಸಾಕೇತ್​ ಕೋರ್ಟ್​​ನೊಳಗೆ ಮಹಿಳೆಗೆ ಗುಂಡೇಟು; ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸ್ ಅಧಿಕಾರಿ

Woman Shot At In Delhi Saket Court

#image_title

ನವ ದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಕೋರ್ಟ್ (Delhi Saket Court)​​ನ ಒಳಗೇ ಮಹಿಳೆಯೊಬ್ಬರಿಗೆ ಶೂಟ್​ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಅಲ್ಲಿಯೇ ಕೋರ್ಟ್ ಆವರಣದಲ್ಲಿ ಇದ್ದ ಪೊಲೀಸ್​ ಅಧಿಕಾರಿ, ಮತ್ತಿತರರು ಸೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ. ಹಣಕಾಸಿಗೆ ಸಂಬಂಧಪಟ್ಟ ಯಾವುದೋ ಕೇಸ್​ನ ವಿಚಾರಣೆಗಾಗಿ ಈ ಮಹಿಳೆ ಕೋರ್ಟ್​ಗೆ ಬಂದಿದ್ದರು. ಆರೋಪಿ ಹಿಸ್ಟರಿ ಶೀಟರ್​ ಆಗಿದ್ದು, ಆತ ಲಾಯರ್​ ವೇಷದಲ್ಲಿಯೇ ಬಂದು ಗುಂಡಿಕ್ಕಿದ್ದಾನೆ.

2021ರ ಸೆಪ್ಟೆಂಬರ್​ 24ರಂದು ದೆಹಲಿಯ ರೋಹಿಣಿ ಕೋರ್ಟ್​​ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಇಬ್ಬರು ಶೂಟರ್​​ಗಳು, ಲಾಯರ್​ಗಳಂತೆ ಡ್ರೆಸ್​ ಧರಿಸಿಕೊಂಡು ಬಂದು ಕೋರ್ಟ್​ ಒಳಗೆ ಗುಂಡು ಹಾರಿಸಿದ್ದರು. ಅಂದು ಗ್ಯಾಂಗ್​ಸ್ಟರ್​ ಜಿತೇಂದರ್ ಮಾನ್​ ಅಲಿಯಾಸ್ ಗೋಗಿ ಎಂಬಾತನ ವಿಚಾರಣೆ ನಡೆಯುತ್ತಿತ್ತು. ಅದೇ ವೇಳೆ ಆಗಮಿಸಿದ್ದ ಶೂಟರ್​ಗಳಾದ ರಾಹುಲ್ ತ್ಯಾಗಿ ಮತ್ತು ಜಗದೀಪ್​ ಜಗ್ಗಾ ಎಂಬುವರು ಗೋಗಿ ಮೇಲೆ ಒಂದೇ ಸಮನೆ ಗುಂಡು ಹಾರಿಸಿ ಕೊಂದಿದ್ದರು. ಬಳಿಕ ಇವರಿಬ್ಬರನ್ನೂ ಪೊಲಿಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ: ಭಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ: ಒಬ್ಬ ಯೋಧನನ್ನು ಬಂಧಿಸಿದ ಪಂಜಾಬ್ ಪೊಲೀಸರು, ಆತ ಗುಂಡು ಹಾರಿಸಿದ್ದೇಕೆ?

Exit mobile version