Site icon Vistara News

2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ವೆಬ್‌ಸೈಟ್‌ ಮಾಹಿತಿ ಇಲ್ಲಿದೆ

2nd PUC Result 2023 Release on 21 april

#image_title

ಬೆಂಗಳೂರು: ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result 2023) ಏ. 21ರ ಶುಕ್ರವಾರ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಫಲಿತಾಂಶವನ್ನು ಬೆಳಗ್ಗೆ 10 ಗಂಟೆಗೆ ಘೋಷಣೆ ಮಾಡಲಿದೆ.

ಮಾರ್ಚ್‌ 9ರಿಂದ 29 ರವರೆಗೆ ಪರೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಫಲಿತಾಂಶ ನೋಡಬಹುದಾಗಿದೆ. ಜತೆಗೆ SATs ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಸಂದೇಶ ಬರಲಿದೆ.

ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ ( Click Here ) ಮಾಡಿ.

ರಾಜ್ಯ 5,716 ಕಾಲೇಜುಗಳಿಂದ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದಲ್ಲಿ 1,109 ಪರೀಕ್ಷಾ ಕೇಂದ್ರಗಳನ್ನು ತೆರೆದು, ಗೊಂದಲವಿಲ್ಲದಂತೆ ಪರೀಕ್ಷೆ ನಡೆಸಲಾಗಿತ್ತು. ಕೂಡಲೇ ಮೌಲ್ಯಮಾಪನ ನಡೆಸಿದ್ದರಿಂದ ನಿರೀಕ್ಷೆಗೂ ಮೊದಲೇ ಫಲಿತಾಂಶ ಪ್ರಕಟವಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್‌ ವಿಳಾಸ: https://kseab.karnataka.gov.in

ಇದನ್ನೂ ಓದಿ: What Next After PUC | ಪಿಯುಸಿ ನಂತರ ಮುಂದಿರುವ ಆಯ್ಕೆಗಳೇನು?; ಇಲ್ಲಿದೆ ಮಾಹಿತಿ

Exit mobile version