Site icon Vistara News

Jio Institute: ಎಐ, ಡೇಟಾ ಸೈನ್ಸ್‌‌ನಲ್ಲಿ ಬೋಧಕರಿಗೆ ಕಾರ್ಯಕ್ರಮ; ಜಿಯೋ ಸಂಸ್ಥೆ ಜತೆ ಕೈಜೋಡಿಸಿದ ಎಐಸಿಟಿಇ

Jio Institute

ಮುಂಬೈ, ಮಹಾರಾಷ್ಟ್ರ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ಸೈನ್ಸ್ ಕುರಿತು ಬೋಧಕ ವೃಂದದವರಿಗೆ ಬೆಳವಣಿಗೆ ಕಾರ್ಯಕ್ರಮಗಳಿಗಾಗಿ ಜಿಯೋ ಇನ್‌ಸ್ಟಿಟ್ಯೂಟ್ (Jio Institute) ಜತೆಗೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (All India Council for Technical Education – AICTE) ಪಾಲುದಾರಿಕೆ ಮಾಡಿಕೊಂಡಿದೆ. ಎಐಸಿಟಿಇಯ ಅಟಲ್- ATAL (ಎಐಸಿಟಿಇ ತರಬೇತಿ ಮತ್ತು ಕಲಿಕೆ) ಕಾರ್ಯಕ್ರಮದ ಅಡಿಯಲ್ಲಿ ಈ ಸಹಯೋಗದ ಪ್ರಯತ್ನ ಪ್ರಾರಂಭಿಸಲಾಗಿದೆ. ಎಐಸಿಟಿಇ ಅನುಮೋದಿತ ಸಂಸ್ಥೆಗಳಿಂದ ಅಧ್ಯಾಪಕರ ಕೌಶಲವನ್ನು ಹೆಚ್ಚಿಸುವ ಮತ್ತು ಪುನರ್ ಕೌಶಲ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿಶ್ವದರ್ಜೆಯ ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಡೇಟಾ ಸೈನ್ಸ್ (Data Science)ಕಾರ್ಯಕ್ರಮಕ್ಕೆ ಖ್ಯಾತಿ ಪಡೆದಿರುವ ಜಿಯೋ ಇನ್‌ಸ್ಟಿಟ್ಯೂಟ್ ಈ 5-ದಿನಗಳ ವಸತಿ ಸಹಿತ ಬೋಧಕ ವೃಂದದ ಬೆಳವಣಿಗೆ ಕಾರ್ಯಕ್ರಮಕ್ಕೆ ಆಯೋಜಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಎಐಸಿಟಿಇ ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಮ್ (Prof T G Sitharam) ಅವರು ಖುದ್ದಾಗಿ ಇದೇ ಆಗಸ್ಟ್ 21ರಂದು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್‌ನ ಆಳವಾದ ತಿಳಿವಳಿಕೆಯೊಂದಿಗೆ ಶೈಕ್ಷಣಿಕ ನಾಯಕರು ಮತ್ತು ಹಿರಿಯ ಅಧ್ಯಾಪಕ ಸದಸ್ಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಈ ಸಹಯೋಗದ ಉಪಕ್ರಮ ಹೊಂದಿದೆ ಮತ್ತು ತೀವ್ರ ಕಲಿಕೆಗಾಗಿ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಿಕೊಳ್ಳುವ ನೈತಿಕ ಪರಿಗಣನೆಗಳಿಗೆ ಒತ್ತು ನೀಡುತ್ತದೆ. ಈ ಕಾರ್ಯಕ್ರಮವು ಅಧ್ಯಾಪಕರು ಸೇರಿದಂತೆ ಆಯ್ದ ಎಐಸಿಟಿಇಯ 40 ಸದಸ್ಯರಿಗೆ ತೀವ್ರ ತರಬೇತಿಯನ್ನು ನೀಡುತ್ತದೆ.

“ಜಿಯೋ ಇನ್‌ಸ್ಟಿಟ್ಯೂಟ್ ಜತೆಗಿನ ಈ ಸಹಭಾಗಿತ್ವವು ನಮ್ಮ ಅಧ್ಯಾಪಕ ವೃಂದದವರನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ಅತ್ಯಾಧುನಿಕ ಶಿಕ್ಷಣಕ್ಕೆ ಉತ್ತೇಜಿಸುವ ನಮ್ಮ ಬದ್ಧತೆಗೆ ಉದಾಹರಣೆ ಆಗಿದೆ. ಇದು ಸಂಕೀರ್ಣವಾದ ಶೈಕ್ಷಣಿಕ ವ್ಯಾಪ್ತಿಯನ್ನು ಪೂರ್ತಿಯಾಗಿ ಅನ್ವೇಷಿಸುವುದಕ್ಕೆ ಅಗತ್ಯವಾದ ಕೌಶಲಗಳ ಜತೆಗೆ ಶಿಕ್ಷಕರಿಗೆ ನೆರವು ಒದಗಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಶೈಕ್ಷಣಿಕ ಉತ್ಕೃಷ್ಟತೆಯತ್ತ ಸಾಗುವ ನಮ್ಮ ಸಂಕಲ್ಪವನ್ನು ಒತ್ತಿಹೇಳುತ್ತದೆ,” ಎಂದು ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮನ್ ಹೇಳಿದ್ದಾರೆ.

ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಯ ಪರಿಸರವನ್ನು ರೂಪಿಸುವುದರ ಸಲುವಾಗಿ ಒಳನೋಟಗಳೊಂದಿಗೆ ಭಾಗವಹಿಸುವವರನ್ನು ಸಜ್ಜುಗೊಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇದು ಕೃತಕ ಬುದ್ಧಿಮತ್ತೆ- ಚಾಲಿತ ಮಾಹಿತಿ ಮತ್ತು ಸಂಶೋಧನೆಯ ಹೆಚ್ಚುತ್ತಿರುವ ಪಾರಮ್ಯವನ್ನು ತಿಳಿಸುತ್ತದೆ. ಡೇಟಾ ವಿಶುಯಲೈಸೇಷನ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಟೈಮ್ ಸೀರೀಸ್ ಮತ್ತು ಆಪ್ಟಿಮೈಸೇಶನ್, ಅಪ್ಲಿಕೇಶನ್ಸ್‌, ಜನರೇಟಿವ್ ಎಐ ಮತ್ತು ದೊಡ್ಡ ಭಾಷಾ ಮಾದರಿಗಳು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುವ ಪಠ್ಯಕ್ರಮವು ವಿಜ್ಞಾನ, ಎಂಜಿನಿಯರಿಂಗ್, ಆರೋಗ್ಯ ಮತ್ತು ಉದಾರ ಕಲೆಗಳಂಥ ಕ್ಷೇತ್ರಗಳಾದ್ಯಂತ ಎಐ ಮತ್ತು ಡೇಟಾ ಸೈನ್ಸ್ ನ ದೂರಗಾಮಿ ಪರಿಣಾಮಗಳನ್ನು ಪರಿಶೀಲಿಸುತ್ತದೆ.

ಇದರ ಜತೆಗೆ ಈ ಕಾರ್ಯಕ್ರಮವು ತಾಂತ್ರಿಕ ವ್ಯಾಪ್ತಿಯ ಒಳಗೆ ಉದಯೋನ್ಮುಖ ಅವಕಾಶಗಳನ್ನು ಅನ್ವೇಷಿಸುತ್ತದೆ. ಜಾಗತಿಕ ತಜ್ಞರು ಮತ್ತು ಶಿಕ್ಷಣತಜ್ಞರ ವಿಶಿಷ್ಟ ವ್ಯಾಪ್ರಿಯಲ್ಲಿ ಕಾರ್ಯಕ್ರಮವನ್ನು ನೀಡಲಾಗುವುದು. ಜಿಯೋ ಇನ್‌ಸ್ಟಿಟ್ಯೂಟ್‌ನ ಡಾ.ಜಿ ರವಿಚಂದ್ರನ್, ಡಾ. ರವೀ ಚಿತ್ತೂರು ಮತ್ತು ಡಾ. ನಿಲಯ್ ಯಾಜ್ಞಿಕ್, ಹಾಗೆಯೇ ಡಾ. ಶೈಲೇಶ್ ಕುಮಾರ್ (ಎಐ ಸಿಒಇ, ಜಿಯೋ), ಪ್ರೊ. ವಿಷ್ಣುಪ್ರಸಾದ್ ನಾಗದೇವರ (ಮಾಜಿ ಡೀನ್, ಐಐಎಂ ಬೆಂಗಳೂರು), ಡಾ. ಲ್ಯಾರಿ ಬಿರ್ನ್‌ಬಾಮ್ (ನಾರ್ತ್-ವೆಸ್ಟರ್ನ್ ಯೂನಿವರ್ಸಿಟಿ ಅಮೆರಿಕ), ಜಾಯೆನ್ ಠಾಕ್ಕರ್ (ಮಾಜಿ-ಟ್ಯಾಬ್ಲೋ ಮತ್ತು ಐಬಿಎಂ), ಪ್ರಸಾದ್ ಜೋಶಿ (ಎಐ ಸಿಒಇ, ಜಿಯೋ) ವಿವಿಧ ಸೆಷನ್ ಗಳನ್ನು ಮುನ್ನಡೆಸುತ್ತಾರೆ.

ಈ ಸುದ್ದಿಯನ್ನೂ ಓದಿ: Education Guide : ಎಲ್ಲರ ಶಿಕ್ಷಣಕ್ಕಾಗಿ ದೂರ ಶಿಕ್ಷಣ!

ಪಾಲುದಾರಿಕೆಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ ಜಿಯೋ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ. ಪಾಲಕ್ ಶೇಠ್, “ಜಿಯೋ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಣದ ಗಡಿಗಳನ್ನು ಸತತವಾಗಿ ದಾಟುವ ಮೂಲಕ ಶೈಕ್ಷಣಿಕ ಉತ್ಕೃಷ್ಟತೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ಕಾರ್ಯಕ್ರಮವು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್‌ನ ಜ್ಞಾನವನ್ನು ನೀಡುವುದನ್ನು ಮೀರಿ ವಿಸ್ತರಿಸುತ್ತದೆ. ಇದು ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳಲ್ಲಿ ಆಳವಾದ ನೈತಿಕ ಜವಾಬ್ದಾರಿಯನ್ನು ಬೆಳೆಸಲು ಸಬಲಗೊಳಿಸುತ್ತದೆ. ಭಾರತದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಕೊಡುಗೆ ನೀಡಲು ನಾವು ಬಹಳ ಉತ್ಸುಕರಾಗಿದ್ದೇವೆ,” ಎಂದಿದ್ದಾರೆ.

ಈ ಕಾರ್ಯಕ್ರಮವು ಆಗಸ್ಟ್ 25 ರಂದು ಕಲೆ ಮತ್ತು ಪರಂಪರೆಯಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯದ ಕುರಿತು ಪ್ರಬುದ್ಧ ಚರ್ಚೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಆ ನಂತರ ದಕ್ಷಿಣ ಮುಂಬೈನ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಮತ್ತು ಇತರ ಮಹತ್ವದ ಪರಂಪರೆಯ ತಾಣಗಳಿಗೆ ಭೇಟಿ ನೀಡಲಾಗುವುದು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version