ಸಿಡ್ನಿ: ಆಸ್ಟ್ರೇಲಿಯಾ ಭಾರತದ ಉನ್ನತ ಶಿಕ್ಷಣದ ಪದವಿಗಳಿಗೆ ಮಾನ್ಯತೆ ನೀಡಲು ನಿರ್ಧರಿಸಿದೆ. ಉಭಯ ದೇಶಗಳು ಈ ಸಂಬಂಧ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ. (Australia -India) ಆದರೆ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಪದವಿಗಳು ಈ ಒಪ್ಪಂದದ ಅಡಿಯಲ್ಲಿ ಇಲ್ಲ.
ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜಾಸನ್ ಕ್ಲೇರ್ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜತೆ ಸಹಿ ಹಾಕಲಿದ್ದಾರೆ.
ಭಾರತ ಈಗಾಗಲೇ ಅಮೆರಿಕ ಮತ್ತು ಇತರ ದೇಶಗಳ ಜತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಆನ್‌ಲೈನ್ ತರಗತಿಗೂ ಅವಕಾಶ ನೀಡಿದೆ. ಆಸ್ಟ್ರೇಲಿಯಾ ಯುನಿವರ್ಸಿಟಿಗಳ ಕೋರ್ಸ್‌ಗಳೂ ಭಾರತದಲ್ಲಿ ವಿದ್ಯಾರ್ಥಿಗಳಿಗೆ ವ್ಯಾಪಕವಾಗಿ ದೊರೆಯಲಿದೆ.