Site icon Vistara News

CBSE Board Exam: ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

exam

Karnataka Government Should Resolve The Board Exams Issue In State

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು(CBSE) 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಸೀನಿಯರ್ ಸ್ಕೂಲ್‌ ಸರ್ಟಿಫಿಕೇಟ್ ಪರೀಕ್ಷೆ (CBSE Board Exam Date Sheet 2024) ಅಂದರೆ 12ನೇ ತರಗತಿಯ ಪರೀಕ್ಷೆಯು (Classes CBSE 12th class) ಫೆಬ್ರವರಿ 15ರಿಂದ ಆರಂಭವಾಗಲಿದೆ. ಉದ್ಯಮಶೀಲತೆಯಿಂದ ಹಿಡಿದು ಕ್ಯಾಪಿಟಲ್ ಮಾರ್ಕೆಟ್ ಕಾರ್ಯಾಚರಣೆ, ಜೈವಿಕ ತಂತ್ರಜ್ಞಾನ, ನೃತ್ಯ ಪ್ರಕಾರಗಳು, ಹಿಂದಿ, ಇಂಗ್ಲಿಷ್ ಮತ್ತು ಹೆಚ್ಚಿನವುಗಳಂತಹ ವಿವಿಧ ವಿಷಯಗಳನ್ನುಈ ಪರೀಕ್ಷೆ ಒಳಗೊಂಡಿದೆ. ಇನ್ನು ಸಿಬಿಎಸ್‌ಇ 10ನೇ (Classes CBSE 10th class) ತರಗತಿ ಪರೀಕ್ಷೆಯ ಫೆಬ್ರವರಿ 19ರಿಂದ ಆರಂಭವಾಗಲಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಶುರುವಾಗಲಿವೆ(CBSE Board Exam). ವೇಳಾ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸಿಬಿಎಸ್ಇ 10ನೇ ತರಗತಿ ಎಕ್ಸಾಮ್ ವೇಳಾ ಪಟ್ಟಿ

ಸಿಬಿಎಸ್‌ಇ 10 ನೇ ತರಗತಿಗೆ ಮುಖ್ಯ ಪರೀಕ್ಷೆಗಳು 2024 ಫೆಬ್ರವರಿ 19 ರಂದು ಸಂಸ್ಕೃತ ವಿಷಯದೊಂದಿಗೆ ಪ್ರಾರಂಭವಾಗುತ್ತದೆ. ನಂತರ ಫೆಬ್ರವರಿ 21 ರಂದು ಹಿಂದಿ, ಫೆ.26ಕ್ಕೆ ಇಂಗ್ಲಿಷ್, ಮಾರ್ಚ್ 2ಕ್ಕೆ ವಿಜ್ಞಾನ, ಮಾ.4 ಹೋಮ್ ಸೈನ್ಸ್, ಮಾರ್ಚ್ 7ಕ್ಕೆ ಸಮಾಜ ವಿಜ್ಞಾನ ಹಾಗೂ ಮಾರ್ಚ್ 11 ಮತ್ತು 13ರಂದು ಕ್ರಮವಾಗಿ ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಪರೀಕ್ಷೆಗಳು ನಡೆಯಲಿವೆ.

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯು 2024ರ ಫೆಬ್ರವರಿ 22ರಂದು ಇಂಗ್ಲಿಷ್ ವಿಷಯ ಪರೀಕ್ಷೆಯೊಂದಿಗೆ ಆರಂಭವಾಗುತ್ತದೆ. ನಂತರ, ಫೆ.27ಕ್ಕೆ ಕೆಮಿಸ್ಟ್ರಿ, ಮಾರ್ಚ್ 4ಕ್ಕೆ ಫಿಜಿಕ್ಸ್, ಮಾರ್ಚ್ 9ಕ್ಕೆ ಗಣಿತ, ಮಾ.12 ಫಿಜಿಕಲ್ ಎಜುಕೇಷನ್, ಮಾ.19ಕ್ಕೆ ಜೀವಶಾಸ್ತ್ರ ಮತ್ತು ಕೊನೆಯ ಪರೀಕ್ಷೆ ಕಂಪ್ಯೂಟರ್ ಸೈನ್ಸ್ ಏಪ್ರಿಲ್ 2ರಂದು ನಡೆಯಲಿದೆ.

ಸಿಬಿಎಸ್‌ಇ 12ನೇ ತರಗತಿ ಮಾನವಿಕ ವಿಷಯಗಳ ಪರೀಕ್ಷೆ

2024ರ ಫೆಬ್ರವರಿ 19ರಂದು ಹಿಂದಿ ಆಯ್ಕೆ ಮತ್ತು ಹಿಂದಿ ಕೋರ್‌ ಪತ್ರಿಕೆಗಳೊಂದಿಗೆ ಶುರುವಾಗುತ್ತವೆ. ಫೆ.22ಕ್ಕೆ ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಮಾನವಿಕ ವಿಷಯಗಳಾದ ಭೂಗೋಳ ಶಾಸ್ತ್ರ(ಫೆ.29), ರಾಜ್ಯ ಶಾಸ್ತ್ರ(ಮಾ.22), ಅರ್ಥಶಾಸ್ತ್ರ(ಮಾ.18), ಇತಿಹಾಸ (ಮಾ.28) ಪರೀಕ್ಷೆಗಳು ಮಾರ್ಚ್ ತಿಂಗಳಲ್ಲಿ ನಡೆಯಲಿವೆ. ಸಮಾಜ ಶಾಸ್ತ್ರ ವಿಷಯ ಪರೀಕ್ಷೆಯು ಏಪ್ರಿಲ್ 1ರಂದು ನಡೆಯಲಿದೆ.

ವೇಳಾಪಟ್ಟಿಯನ್ನು ರೂಪಿಸುವಾಗ ಎರಡೂ ತರಗತಿಗಳಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ನೀಡುವ ವಿಷಯಗಳ ನಡುವೆ ಸಾಕಷ್ಟು ಸಮಯದ ಅಂತರವನ್ನು ನೀಡಲಾಗಿದೆ. 12ನೇ ತರಗತಿಯ ಪರೀಕ್ಷಾ ವೇಳಾ ಪಟ್ಟಿಯನ್ನು ಸಿದ್ಧಪಡಿಸುವಾಗ ಮಂಡಳಿಯು ಜೆಇಇ ಮುಖ್ಯನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Exit mobile version