Site icon Vistara News

“ಅಂಥವರ ಪಠ್ಯವನ್ನೇ ತೆಗೆದ ಮೇಲೆ ನನ್ನದು ಏತಕ್ಕೆ?”: ತಮ್ಮ ಬರಹದ ಪಾಠ ಮಾಡದಂತೆ ದೇವನೂರು ಆಗ್ರಹ

ಮೈಸೂರು: ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಪಾಠವನ್ನು ಪಠ್ಯದಲ್ಲಿ ಸೇರಿಸಿದ್ದಕ್ಕೆ ಸ್ವತಃ ಅವರೇ ವಿರೋಧ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಲ್. ಬಸವರರಾಜು, ಪಿ.ಲಂಕೇಶ್, ಸಾರಾ ಅಬೂಬಕರ್, ಎ.ಎನ್. ಮೂರ್ತಿರಾವ್ ಅವರ ಪಾಠವನ್ನು ತೆಗೆದಿದ್ದಾರೆ. ಅವರ ಪಠ್ಯವನ್ನೇ ತೆಗೆದ ಮೇಲೆ ನನ್ನ ಪಠ್ಯ ಸೇರಿಸವ ಅಗತ್ಯವಿಲ್ಲ ಎಂದು ದೇವನೂರು ಮಹಾದೇವ ವಿರೋಧ ವ್ಯಕ್ತ ಪಡಿಸಿದ್ದಾರೆ.

ಪಠ್ಯ ಮುದ್ರಣವಾಗಿದೆ. ಪಠ್ಯದಲ್ಲಿ ದೇವನೂರು ಕಥನವನ್ನು ಕೈಬಿಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದರು. ಗಣ್ಯಾತಿಗಣ್ಯರ ಸಾಹಿತ್ಯವನ್ನು ಸೇರಿಸದೆ, ಸ್ವಾತಂತ್ರ್ಯ ಹೋರಾಟದಿಂದ ವಿಮುಖರಾದ ಹಡ್ಗೆವಾರ್‌ ಪಠ್ಯ ಸೇರಿಸಲಾಗಿದೆ. ಸಮಾಜದಲ್ಲಿ ದ್ವೇಷ ಹುಟ್ಟುಹಾಕುತ್ತಿರುವ ಸೂಲಿಬೆಲೆ ಪಾಠ ಅಳವಡಿಸಿದ್ದಾರೆ. ಇಂತಹ ಅನಾರೋಗ್ಯರ ಪರಿಸ್ಥಿತಿಯಲ್ಲಿ ನನ್ನ ಪಠ್ಯ ಬೇಡ ಎಂದು ಮಹಾದೇವ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಪಠ್ಯ ಪುಸ್ತಕ ಪ್ರಿಂಟ್ ಆಗಿದೆ ಎಂದರೆ ಆ ಪಾಠವನ್ನು ಮಾಡದಿರುವಂತೆ ಸರ್ಕಾರ ಸೂಚನೆ ನೀಡಲಿ. ಅಲ್ಲದೆ, ಸಚಿವರು ಹೇಳುವಂತೆ ನಾನು ಯಾರ ಪ್ರಚೋದನೆಗೂ ಒಳಗಾಗಿಲ್ಲ. ಅದು ಅವರ ಭ್ರಮೆ. ಮಕ್ಕಳಿಗೆ ಮೌಢ್ಯಕ್ಕೆ ಒಳಗಾಗದ, ವೈಜ್ಞಾನಿಕ ಚಿಂತನೆಯ ಪಾಠ ಕೊಡಬೇಕುನ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ.

ಸರ್ಕಾರಕ್ಕೆ ಸಮಾನಾಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ವಿಷಯ ತಿಳಿಸುವುದಾಗಿ ಮಹಾದೇವ ಹೇಳಿದ್ದಾರೆ. “ಮಕ್ಕಳಿಗೆ ಶೈಕ್ಷಣಿಕ ಕೊರತೆ ಉಂಟಾಗಬಾರದು. ಮೌಢ್ಯಕ್ಕೆ ಒಳಗಾಗಬಾರದು. ಅದಕ್ಕೆ ಪರ್ಯಾಯವಾಗಿ ವಾಟ್ಸಪ್, ಫೇಸ್‌ಬುಕ್, ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳ ಬಗ್ಗೆ ಕಮ್ಮಟ, ಕಾರ್ಯಾಗಾರಗಳನ್ನು ಆಯೋಜಿಸಿ ಮನವರಿಕೆ ಮಾಡುತ್ತೇವೆ. ಈ ಮೂಲಕ ಪ್ರಜಾಸತ್ತಾತ್ಮಕವಾಗಿ ಮಕ್ಕಳನ್ನು ಗಟ್ಟಿಗೊಳಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ | ನಾಡಗೀತೆಯನ್ನು ಅಪಮಾನಿಸಿದರೆ ಸುಮ್ಮನಿರುವುದಿಲ್ಲ: HDK

Exit mobile version