ಪಿಯುಸಿ ಬಳಿಕ ಕಾರಣಾಂತರಗಳಿಂದ ಎಂಜಿನಿಯರಿಂಗ್ ಪದವಿ ಪ್ರವೇಶ ಸಿಗದಿದ್ದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ. ಈಗ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಯೋಚಿಸಬೇಕಾಗಿಲ್ಲ. ಡಿಪ್ಲೊಮಾ ಇನ್ ಎಂಜಿನಿಯರಿಂಗ್ (diploma in engineering) ಮಾಡಿದರಾಯಿತು. ಆ ನಂತರ ಎರಡೇ ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಸಾಧ್ಯವಿದೆ.
ಎಂಜಿನಿಯರಿಂಗ್ ಪದವಿ (education news) ಬೇಡವೇ ಬೇಡ ಎಂದರೆ ಉದ್ಯೋಗವನ್ನಂತೂ ಪಡೆಯಬಹುದು. ಇಂದು ಡಿಪ್ಲೊಮಾ ಮಾಡಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೇಮಕ ಮಾಡಿಕೊಳ್ಳುತ್ತಲೇ ಇರುತ್ತವೆ. ಜೂನಿಯರ್ ಎಂಜಿನಿಯರ್ ಹಂತದ ಹುದ್ದೆಗಳನ್ನು ಡಿಪ್ಲೊಮಾ ಮಾಡಿದವರು ಪಡೆದುಕೊಳ್ಳಬಹುದು. ಖಾಸಗಿ ಕಂಪನಿಗಳಲ್ಲಿ ಸೂಪರ್‌ವೈಸರ್ ಹಂತದ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಉದ್ಯೋಗ ಬೇಡವೆಂದರೆ, ಸ್ವ ಉದ್ಯೋಗ ಮಾಡಬಹುದು. ಇದಕ್ಕೆ ಬೇಕಾದ ಕೌಶಲ್ಯ ಮತ್ತು ನಿಪುಣತೆಯನ್ನು ಡಿಪ್ಲೊಮಾ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ.
ವಿದ್ಯಾಭ್ಯಾಸಕ್ಕೆ ಹೆಚ್ಚು ಹಣ ಮತ್ತು ಸಮಯ ವಿನಿಯೋಗಿಸಲು ಸಾಧ್ಯವಾಗದೇ ಇರುವವರಿಗೆ ಡಿಪ್ಲೊಮಾ ಕೋರ್ಸ್ ಆಸರೆಯಾಗಿದೆ. ಈ ಡಿಪ್ಲೊಮಾ ಕೋರ್ಸ್‌ಗಳನ್ನು ಎರಡು ರೀತಿಯಲ್ಲಿ ವಿಭಾಗಿಸಲಾಗಿದೆ. ಒಂದು ತಾಂತ್ರಿಕ ಡಿಪ್ಲೊಮಾ (technical diploma), ಮತ್ತೊಂದು ತಾಂತ್ರಿಕೇತರ ಡಿಪ್ಲೊಮಾ ಕೋರ್ಸ್ (non technical diploma). ಯಾವುದನ್ನು ಮಾಡಿದರೂ ನೀವು ನಿರ್ದಿಷ್ಟ ಉದ್ಯೋಗ ಮಾಡಲು ಬೇಕಾದಷ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದು, ಪ್ರಾಕ್ಟಿಕಲ್‌ನಲ್ಲಿ ಕೆಲಸವನ್ನೂ ಕಲಿಯ ಬಹುದು!
ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ರಾಜ್ಯದಲ್ಲಿ ಡಿಪ್ಲೊಮಾ ಕೋರ್ಸುಗಳ ದಾಖಲಾತಿಯ ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸದ್ಯ 102 ಪಾಲಿಟೆಕ್ನಕ್ ಕಾಲೇಜುಗಳಿವೆ. ಇಲ್ಲಿ 22,928 ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಮಾಡುವ ಅವಕಾಶವಿದೆ. 50ಕ್ಕೂ ಹೆಚ್ಚು ಅನುದಾನಿತ, 170ಖಾಸಗಿ ಪಾಲಿಟೆಕ್ನಿಕ್‌ಗಳಿವೆ. ಸಾಮಾನ್ಯವಾಗಿ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ, (ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ) ಈ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ.
ಡಿಪ್ಲೊಮಾ ಮಾಡಲು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು. ಕೆಲವು ಡಿಪ್ಲೊಮಾ ಕೋರ್ಸ್‌ಗಳಿಗೆ (ಲೈಬ್ರರಿ ಸೈನ್ಸ್ & ಇನ್ ಫರ್ಮೇಷನ್ ಮ್ಯಾನೇಜ್ ಮೆಂಟ್ ಇತ್ಯಾದಿ) ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಐಟಿಐಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ 3ನೇ ಸೆಮಿಸ್ಟರ್ /2ನೇ ವರ್ಷ ಡಿಪ್ಲೊಮಾ ಪ್ರವೇಶ ಪಡೆಯಲು ಅವಕಾಶವಿದೆ.
ತರಹವೇರಿ ಕೋರ್ಸ್‌ಗಳು!
ಸಾಂಪ್ರದಾಯಿಕವಾಗಿ ಡಿಪ್ಲೊಮಾ ಎಂದ ಕೂಡಲೇ ಮೆಕ್ಯಾನಿಕಲ್, ಕೆಮಿಕಲ್, ಎಲೆಕ್ಟ್ರಿಕಲ್, ಸಿವಿಲ್ ಮೊದಲಾದ ವಿಭಾಗಗಳು ಕಣ್ಣ ಮುಂದೆ ಬರುತ್ತವೆ. ಅದನ್ನು ಹೊರತು ಪಡಿಸಿಯೂ ಸಾಕಷ್ಟು ಉದ್ಯೋಗಾವಕಾಶ ನೀಡುವ ಡಿಪ್ಲೊಮಾ ಕೋರ್ಸ್‌ಗಳಿವೆ. ಇವುಗಳೆಂದರೆ ಡಿಪ್ಲೊಮಾ ಇನ್ ಪ್ರಿಂಟ್ ಮೀಡಿಯಾ ಜರ್ನಲಿಸಂ, ಡಿಪ್ಲೊಮಾ ಇನ್ ಅನಿಮೇಷನ್ ಆ್ಯಂಡ್ ಮಲ್ಟಿಮೀಡಿಯಾ, ಡಿಪ್ಲೊಮಾ ಇನ್ ಫಿಲ್ಮ್ ಮೇಕಿಂಗ್, ಡಿಪ್ಲೊಮಾ ಇನ್ ಬಯೋ ಟೆಕ್ನಾಲಜಿ, ಡಿಪ್ಲೊಮಾ ಇನ್ ಇಂಟೀರಿಯರ್ ಡಿಸೈನ್, ಡಿಪ್ಲೊಮಾ ಇನ್ ಎಜುಕೇಶನ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಜ್ಯುವೆಲ್ಲರಿ ಡಿಸೈನಿಂಗ್, ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನಿಂಗ್, ಡಿಪ್ಲೊಮಾ ಇನ್ ಇಂಗ್ಲೀಷ್ ಟೀಚಿಂಗ್, ಡಿಪ್ಲೊಮಾ ಇನ್ ಬ್ಯಾಕಿಂಗ್ ಆ್ಯಂಡ್ ಫೈನಾನ್ಸ್ , ಡಿಪ್ಲೊಮಾ ಇನ್ ಯೋಗ ಎಜುಕೇಷನ್, ಡಿಪ್ಲೊಮಾ ಇನ್ ಈವೆಂಟ್ ಮ್ಯಾನೇಜ್‌ಮೆಂಟ್ ಮೊದಲಾದವು ಇವುಗಳಲ್ಲಿ ಪ್ರಮುಖವಾದವು.
ಎಂಜಿನಿಯರಿಂಗ್ ಮಾಡುವುದು ಹೇಗೆ?
ಡಿಪ್ಲೊಮಾ ಮಾಡಿದವರಿಗೆ ಲ್ಯಾಟರಲ್ ಪ್ರವೇಶ ಯೋಜನೆಯಡಿಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್‌ನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶ ಹಾಗೂ ಆರ್ಕಿಟೆಕ್ಚರ್ ಕೋರ್ಸಿಗೆ ಮೊದಲನೇ ವರ್ಷದ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯ ರ‍್ಯಾಂಕಿಂಗ್ ಆಧಾರದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಎಂಜಿನಿಯರಿಂಗ್ ಮಾಡಲು ಅವಕಾಶ ನೀಡುವ ಡಿಪ್ಲೊಮಾ ಕೋರ್ಸ್‌ಗಳೆಂದರೆ; ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಲೇಟರಲ್ ಎಂಟ್ರಿ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಕೆಮಿಕಲ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಮೈನಿಂಗ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಮೆರೈನ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಇಸಿ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಐಸಿ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಸೌಂಡ್ ಎಂಜಿನಿಯರಿಂಗ್ ಪ್ರಮುಖವಾದವು.
ಪ್ರಮುಖ ಡಿಪ್ಲೊಮಾ ಕೋರ್ಸ್‌ಗಳಿವು
ರಾಜ್ಯದ ಪಾಲಿಟೆಕ್ನಿಕ್‌ನಲ್ಲಿ ಮಾಡಬಹುದಾದ ಪ್ರಮುಖ ಡಿಪ್ಲೊಮಾ ಕೋರ್ಸ್‌ಗಳೆಂದರೆ; ಏರೋನ್ಯಾಟಿಕಲ್ ಎಂಜಿನಿಯರಿಂಗ್, ಅಗ್ರಿಕಲ್ಚರಲ್ ಎಂಜಿನಿಯರಿಂಗ್, ಅಪಾರೇಲ್ ಡಿಸೈನ್ & ಫ್ಯಾಬ್ರಿಕೇಶನ್ ಟೆಕ್ನಾಲಜಿ (ತಾಂತ್ರಿಕೇತರ), ಆರ್ಕಿಟೆಕ್ಚರ್, ಆಟೋಮೊಬೈಲ್ ಎಂಜಿನಿಯರಿಂಗ್, ಸೆರಾಮಿಕ್ಸ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಸಿನಿಮಟೋಗ್ರಫಿ, ಸಿವಿಲ್ ಎಂಜಿನಿಯರಿಂಗ್ (ಜನರಲ್), ಸಿವಿಲ್ ಎಂಜಿನಿಯರಿಂಗ್(ಡ್ರಾಫ್ಟ್ ಮನ್ ಶಿಪ್), ಸಿವಿಲ್ ಎಂಜಿನಿಯರಿಂಗ್ (ಎನ್ವಿರಾನ್ಮೆಂಟಲ್), ಸಿವಿಲ್ ಎಂಜಿನಿಯರಿಂಗ್ (ಪಬ್ಲಿಕ್ ಹೆಲ್ತ್),
ಕಮರ್ಷಿಯಲ್ ಪ್ರ್ಯಾಕ್ಟಿಸ್.
ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್, ಎಲೆಕ್ಟ್ರಿಕಲ್&ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್& ಕಮ್ಯೂನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಇನ್‌ಸ್ಟ್ರುಮೆಂಟೇಷನ್& ಕಂಟ್ರೋಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಎಂಜಿನಿಯರಿಂಗ್(ಕೋ-ಆಪ್), ಇನ್‌ಫಾರ್ಮೇಷನ್ ಸೈನ್ಸ್ & ಎಂಜಿನಿಯರಿಂಗ್, ಇಂಟೀರಿಯರ್ ಡೆಕೋರೇಷನ್, ಲೆದರ್ ಟೆಕ್ನಾಲಜಿ, ಲೈಬ್ರರೀ & ಇನ್ಫರ್ಮೇಷನ್ ಸೈನ್ಸ್ (ತಾಂತ್ರಿಕೇತರ), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಜನರಲ್), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಎಚ್ ಪಿಟಿ), ಮೆಕ್ಯಾನಿಕಲ್ಎಂ ಜಿನಿಯರಿಂಗ್(WSM), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಎಮ್‌ಟಿಟಿ), ಮೆಕ್ಯಾನಿಕಲ್ ಎಂಜಿನಿಯರಿಂಗ್, (ಇನ್ಸ್ಟ್ರುಮೆಂಟೇಷನ್), ಮೆಕ್ಯಾನಿಕಲ್ ಎಂಜಿನಿಯರಿಂಗ್(ಕೋ-ಅಪ್), ಮೆಕೆಟ್ರಾನಿಕ್ಸ್ ಎಂಜಿನಿಯರಿಂಗ್, ಮೆಕೆಟ್ರಾನಿಕ್ಸ್(ಕೋ-ಅಪ್), ಮೆಟಲರ್ಜಿ ಎಂಜಿನಿಯರಿಂಗ್, ಮೈನಿಂಗ್ ಎಂಜಿನಿಯರಿಂಗ್, ಮಾಡ್ರನ್ ಆಫೀಸ್ ಮ್ಯಾನೇಜ್ಮೆಂಟ್ (ತಾಂತ್ರಿಕೇತರ), ಪಾಲಿಮರ್ ಟೆಕ್ನಾಲಜಿ, ಪ್ರಿಂಟಿಂಗ್ ಟೆಕ್ನಾಲಜಿ, ಸೌಂಡ್ ರೆಕಾರ್ಡಿಂಗ್ ಎಂಜಿನಿಯರಿಂಗ್, ಟೆಕ್ಸ್ ಟೈಲ್ ಎಂಜಿನಿಯರಿಂಗ್.
ಇದನ್ನೂ ಓದಿ : Education Guide : ಜಾಬ್ ಗ್ಯಾರಂಟಿಯ ಎವರ್‌ಗ್ರೀನ್ ಎಂಜಿನಿಯರಿಂಗ್ ಬ್ರಾಂಚ್‌ಗಳಿವು!
ವಾಟರ್ ಟೆಕ್ನಾಲಜಿ & ಹೆಲ್ತ್ ಸೈನ್ಸ್, ಟೂಲ್ & ಡೈ ಮೇಕಿಂಗ್, ಬಯೋ ಟೆಕ್ನಾಲಜಿ, ಇಂಟೀರಿಯರ್ ಡಿಸೈನ್ (ತಾಂತ್ರಿಕೇತರ), ಎಜುಕೇಶನ್ ಟೆಕ್ನಾಲಜಿ, ಜ್ಯುವೆಲ್ಲರಿ ಡಿಸೈನಿಂಗ್, ಇಂಗ್ಲಿಷ್ ಟೀಚಿಂಗ್, ಬ್ಯಾಕಿಂಗ್ ಆಂಡ್ ಫೈನಾನ್ಸ್, ಯೋಗ ಎಜುಕೇಶನ್, ಈವೆಂಟ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್.
ಇವುಗಳಲ್ಲದೇ ಇತ್ತೀಚೆಗೆ, ಆಲ್ಟರ್‌ನೆಟಿವ್ ಎನರ್ಜಿ ಟೆಕ್ನಾಲಜೀಸ್, ಸೈಬರ್ ಸೆಕ್ಯುರಿಟಿ, ಫುಡ್ ಪ್ರೊಸೆಸಿಂಗ್ ಆ್ಯಂಡ್ ಪ್ರಿಸರ್ವೇಷನ್, ಟ್ರಾವೆಲ್ ಆ್ಯಂಡ್ ಟೂರಿಸಮ್ (ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್ ಸೇರಿ), ಕ್ಲೌಡ್ ಕಂಪ್ಯೂಟಿಂಗ್ ಆ್ಯಂಡ್ ಬಿಗ್ ಡೇಟಾ, ಆಟೋಮೇಷನ್ ಆ್ಯಂಡ್ ರೋಬಟಿಕ್ಸ್, ಸ್ಕ್ರೀನ್‌ಪ್ಲೇ ವ್ರೈಟಿಂಗ್ ಆ್ಯಂಡ್ ಟಿವಿ ಪ್ರೊಡಕ್ಷನ್, ಸೈಬರ್ ಪಿಜಿಕಲ್ ಸಿಸ್ಟಮ್ಸ್ ಆ್ಯಂಡ್ ಸೆಕ್ಯುರಿಟಿ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.
ವಿಶೇಷವೆಂದರೆ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯನ್ನು ನೋಡಿಕೊಂಡು ಅವಶ್ಯವೆನಿಸುವ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸುವಲ್ಲಿ ರಾಜ್ಯ ದೇಶದಲ್ಲಿಯೇ ಮುಂದಿದೆ. ಇಲ್ಲಿಯ ಸರ್ಕಾರಿ ಮತ್ತು ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಈಗ 50 ಕ್ಕೂ ಹೆಚ್ಚು ಕೋರ್ಸ್‌ಗಳು ಲಭ್ಯವಿವೆ. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಪಠ್ಯಕ್ರಮಗಳನ್ನು ಕೆಲ ಪಾಲಿಟೆಕ್ನಿಕ್‌ಗಳಲ್ಲಿ ಅಳವಡಿಸಕೊಳ್ಳಲಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಜಿಟಿಟಿಸಿಯಲ್ಲಿ ಡಿಪ್ಲೊಮಾ ಕೋರ್ಸ್
ಪೊಲಿಟೆಕ್ನಿಕ್ ಕಾಲೇಜುಗಳಲ್ಲಿ ಅಲ್ಲದೆ, ಹಲಾವಾರು ತಾಂತ್ರಿಕ ಸಂಸ್ಥೆಗಳ/ ಕಾಲೇಜುಗಳ ಮೂಲಕವು ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಮೂರು ವರ್ಷ ಅವಧಿಯ ತಾಂತ್ರಿಕ ಡಿಪ್ಲೊಮಾ ಕೋರ್ಸು ಮಾಡಬಹುದಾಗಿದೆ. ಉದಾಹರಣೆಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಗಳ ಮೂಲಕ ಮೂರು ವರ್ಷ ಅವಧಿಯ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಹೈಟೆಕ್ ಮ್ಯಾನುಫಾಕ್ಚರಿಂಗ್, ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ , ಡಿಪ್ಲೋಮ ಇನ್ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್, ಡಿಪ್ಲೊಮಾ ಇನ್ ಅಟೋಮೇಷನ್ & ರೋಬೊಟಿಕ್ಸ್ ಕೋರ್ಸುಗಳು ಲಭ್ಯವಿವೆ.
ಈ ಕೋರ್ಸುಗಳಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ರಾಜ್ಯಾದ್ಯಂತ 30 ಡಿಪ್ಲೊಮಾ ಕಾಲೇಜನ್ನು ಈ ಸಂಸ್ಥೆ ಹೊಂದಿದೆ. ಈ ಡಿಪ್ಲೊಮಾ ಕೋರ್ಸ್‌ಗಳ ಅವಧಿ ಮೂರು ವರ್ಷ. ಜತೆಗೆ ಒಂದು ವರ್ಷದ ಇಂಟರ್ನ್‌ಶಿಪ್ ಕಡ್ಡಾಯ.
GTTC ಯಲ್ಲಿ ಈಗ ಡಿಪ್ಲೊಮೊ ಪ್ರವೇಶಕ್ಕೆ ಈಗ ಅವಕಾಶ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ (Click Here) ಮಾಡಿ.
ಇದೇ ರೀತಿಯಾಗಿ ಗದಗದಲ್ಲಿರುವ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷ ಆವಧಿಯ ಡಿಪ್ಲೊಮಾ ಮಾಡಬಹುದಾಗಿದೆ. ಮೈಸೂರಿನ ಸಿಫೆಟ್‌ನಲ್ಲಿ ಕೂಡ ಮೂರು ವರ್ಷ ಆವಧಿಯ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಾಜಿ ಕೋರ್ಸು ಮಾಡಬಹುದು.