ಎಂಜಿನಿಯರಿಂಗ್ ಮಾಡಬೇಕೆಂದ ಕೂಡಲೇ ನಮ್ಮಲ್ಲಿ ಬಹುತೇಕ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಅಥವಾ ಇದಕ್ಕೆ ಸಂಬಂಧಿಸಿದ ಅಥವಾ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಆಟೋಮೊಬೈಲ್ ಹೀಗೆ ಬೆರಳೆಣಿಕೆಯಷ್ಟು ಎಂಜಿನಿಯರಿಂಗ್ ವಿಷಯಗಳ (engineer course) ಕಡೆಗೆ ಗಮನ ನೀಡುತ್ತಾರೆ.
ನಮ್ಮ ರಾಜ್ಯದಲ್ಲಿ 300 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಇಲ್ಲಿ 32ಕ್ಕೂ ಹೆಚ್ಚು ವಿಷಯಗಳ ಕೋರ್ಸ್‌ಗಳಿವೆ. (education news)ಆದರೆ ಹೆಚ್ಚಿನ ಕೋರ್ಸ್‌ಗಳ ಬಗ್ಗೆ ಬಹುತೇಕರಿಗೆ ಮಾಹಿತಿಯೇ ಇರುವುದಿಲ್ಲ. ಇವುಗಳಲ್ಲಿ ಶೇ.99 ರಷ್ಟು ಉದ್ಯೋಗ ಭರವಸೆಯನ್ನು ನೀಡುವ ಕೆಲವು ಕೋರ್ಸ್‌ಗಳಿವೆ. ಅವುಗಳಲ್ಲಿ ವಿಶಿಷ್ಟವಾದ ಐದು ಕೋರ್ಸ್‌ಗಳ (engineer course) ಪರಿಚಯ (Education Guide) ಮಾಡಿಕೊಳ್ಳೋಣ.
1. ಮೆಟೀರಿಯಲ್ ಎಂಜಿನಿಯರಿಂಗ್
ತಂತ್ರಜ್ಞಾನ ವೇಗದ ಪ್ರಗತಿ ಕಾಣುತ್ತಿದ್ದಂತೆಯೇ ಔದ್ಯಮಿಕ ವಲಯದ ಆದ್ಯತೆಗಳೂ ಬದಲಾಗಿವೆ. ಎಂಜಿನಿಯರಿಂಗ್‌ನಲ್ಲಿ ಹೊಸ ಹೊಸ ಶಾಖೆಗಳು ಸೃಷ್ಟಿಯಾಗಿವೆ. ಇವುಗಳಲ್ಲಿ ಮುಖ್ಯವಾದುದ್ದೆಂದರೆ ಮೆಟೀರಿಯಲ್ ಎಂಜನಿಯರಿಂಗ್. ಮೆಟೀರಿಯಲ್ ಎಂಜಿನಿಯರಿಂಗ್‌ನಲ್ಲಿ ಮೊದಲಿಗೆ ವಸ್ತುಗಳ ರಚನೆಯ ಕುರಿತು ಕಲಿಸಲಾಗುತ್ತದೆ. ಬಳಿಕ ಅದರ ಗುಣ ಧರ್ಮ ಮತ್ತು ಸಂಸ್ಕರಣೆಯ ಬಗ್ಗೆ ಶಿಕ್ಷಣ ನೀಡಲಾಗುತ್ತದೆ.
ಮೆಟೀರಿಯಲ್‌ಗಳ ಮೂಲಭೂತ ಪ್ರಯೋಜನ, ರಚನೆ, ಸಂಸ್ಕರಣೆ, ಗುಣ ಮತ್ತದರ ಕಾರ್ಯದ ಬಗ್ಗೆ ಉದಾಹರಣೆ ಸಹಿತ ಎಲ್ಲಾ ವಿವರಿಸಲಾಗುತ್ತದೆ. ಇದು ಸೆರಾಮಿಕ್, ಲೋಹ, ಪಾಲಿಮರ್ ಸೇರಿದಂತೆ ಎಲ್ಲಾ ಮೆಟೀರಿಯಲ್‌ನ ಕುರಿತು ಅರಿತುಕೊಳ್ಳಲು ಪ್ರಬಲ ಅಡಿಪಾಯ ಹಾಕಿಕೊಡುತ್ತದೆ. ಉತ್ಪಾದನಾ ಕ್ಷೇತ್ರದಲ್ಲಿ ಈ ಎಂಜಿನಿಯರಿಂಗ್ ಮಾಡಿದವರಿಗೆ ಸಾಕಷ್ಟು ಅವಕಾಶಗಳಿರುತ್ತವೆ.
2. ಫೈನಾನ್ಶಿಯಲ್ ಎಂಜನಿಯರಿಂಗ್
ದುಡ್ಡೇ ದೊಡ್ಡಪ್ಪ ಎಂಬುದು ನಮಗೆಲ್ಲರಿಗೂ ಗೊತ್ತು. ಹಣದ ಮಹತ್ವ ಹೆಚ್ಚುತ್ತಿದ್ದಂತೆಯೇ ಹಣಕಾಸು ಸೇವಾ ಕ್ಷೇತ್ರವೂ ಬೃಹತ್ತಾಗಿ ಬೆಳೆಯುತ್ತಿದೆ. ಹಣಕಾಸು ಎಂಜಿನಿಯರಿಂಗ್‌ನಲ್ಲಿ ಆರ್ಥಿಕ ವಿಶ್ಲೇಷಣೆ ಮತ್ತು ಪ್ರಮಾಣಾತ್ಮಕ ವಿಧಾನಗಳ ಉಪಯೋಗಗಳ ಬಗ್ಗೆ ಕಲಿಸಲಾಗುತ್ತದೆ. ಬಹುವಿಷಯಗಳನ್ನು ಒಳಗೊಂಡಿರುವ ಆರ್ಥ ಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾಗಿರುವ ಎಂಜಿನಿಯರಿಂಗ್ ಮೆಥಡ್, ಟೂಲ್ಸ್ ಮತ್ತು ಪ್ರೋಗ್ರಾಮಿಂಗ್‌ಗಳ ಬಗ್ಗೆ ಇಲ್ಲಿ ಕಲಿಸಾಗುತ್ತದೆ.
ಇದರಲ್ಲಿ ಪದವಿ ಪಡೆದವರು ಬ್ಯಾಂಕಿಂಗ್, ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸಲ್ಟಿಂಗ್ ಇಂಡಸ್ಟ್ರೀಯಲ್ಲಿ, ಫೈನಾನ್ಶಿಯಲ್ ಸರ್ವೀಸ್ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ. ಇದನ್ನು ಅಧ್ಯಯನ ಮಾಡುವವರು ಕಂಪ್ಯೂಟರ್ ಪ್ರೋಗ್ರಾಮಿಂಗ್, ಲೈನೀರ್ ಅಲ್‌ಜೀಬ್ರಾ, ಮತ್ತು ಅಂಕ ಗಣಿತದಲ್ಲಿ ಉತ್ತಮ ಹಿಡಿತ ಹೊಂದಿರಬೇಕಾಗುತ್ತದೆ.
3. ಬಯೋ ಎಂಜಿನಿಯರಿಂಗ್
ಜೀವಶಾಸ್ತ್ರ ಮತ್ತು ಎಂಜಿನಿಯರಿಂಗ್ ಎರಡು ವಿಷಯಗಳನ್ನು ಒಳಗೊಂಡ ಎಂಜಿನಿಯರಿಂಗ್ ಪದವಿ ಎಂದರೆ ಬಯೋ ಎಂಜಿನಿಯರಿಂಗ್. ಮನುಕುಲಕ್ಕೆ ಪ್ರಯೋಜನ ನೀಡುವ ಉತ್ಪನ್ನಗಳನ್ನು ಸಿದ್ಧಪಡಿಸಲು ಈ ಎಂಜಿನಿಯರಿಂಗ್ ಪದವಿಯ ಅವಶ್ಯಕತೆ ಇದೆ. ಜೀವ ಜಗತ್ತಿನೊಂದಿಗೆ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಬೆಸೆಯುವ ಕೆಲಸವನ್ನು ಈ ಎಂಜಿನಿಯರಿಂಗ್ ಕೋರ್ಸ್ ಮಾಡುತ್ತದೆ. ಬಯೋಟೆಕ್ನಾಲಜಿ, ಬಯೋಮೆಡಿಕಲ್ ಎಂಜನಿಯರಿಂಗ್ ಮತ್ತು ಮೆಡಿಸಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿರುತ್ತವೆ. ಇಮೇಜಿಂಗ್ ಮೆಷಿನ್, ಡಯೋಗ್ನಾಸ್ಟಿಕ್ ಟೂಲ್ಸ್ (ಗ್ಲೂಕೋಸ್ ಮೀಟರ್, ಜೆನ್ ಜಿಪ್ಸ್) ಮತ್ತು ಇನೋವೇಟಿವ್ ಸರ್ಜರಿ ಟೂಲ್ಸ್ ಗಳನ್ನು ತಯಾರಿಸುವ ಕ್ಷೇತ್ರಗಲ್ಲಿ ಹೇರಳ ಅವಕಾಶಗಳಿರುತ್ತವೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
4. ನ್ಯೂಕ್ಲಿಯರ್ ಎಂಜಿನಿಯರಿಂಗ್
ಪರಮಾಣುವನ್ನು ಛೇದಿಸಿದಾಗ ಅಣು ಶಕ್ತಿ ಬಿಡುಗಡೆಯಾಗುತ್ತದೆ. ಈ ಶಕ್ತಿಯನ್ನು ಹಲವು ರೀತಿಯಲ್ಲಿ ನಾವಿಂದು ಬಳಸುತ್ತಿದ್ದೇವೆ. ಮುಖ್ಯವಾಗಿ ಅಣು ವಿದ್ಯುತ್ ಘಟಕ, ಪರಮಾಣು ಇಂಧನ ಚಾಲಿತ ಸಬ್‌ಮೆರಿನ್ ನಿರ್ವಹಣೆ, ವೈದ್ಯಕೀಯ ರೋಗ ಪತ್ತೆ ಉಪಕರಣ, ಆಹಾರ ಉತ್ಪಾದನೆ, ಅಣ್ವಸ್ತ್ರ, ವಿಕಿರಣಯುಕ್ತ ತ್ಯಾಜ್ಯ ನಿರ್ವಹಣೆ ಸೌಕರ್ಯ ಮೊದಲಾದ ವಿಭಾಗಗಳು ಈ ನ್ಯೂಕ್ಲಿಯರ್ ಎಂಜಿನಿಯರಿಂಗ್ ವ್ಯಾಪ್ತಿಗೆ ಬರುತ್ತವೆ. ಎಲೆಕ್ಟ್ರಿಕಲ್ ಮತ್ತು ಕೆಮಿಕಲ್ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬಹುಬೇಡಿಕೆಯ ಈ ಎಂಜಿನಿಯರಿಂಗ್ ಕೋರ್ಸ್ ಮಾಡಬಹುದು. ಪರಮಾಣು ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿರುವುದರಿಂದ ಈ ಎಂಜಿನಿಯರಿಂಗ್ ಮಾಡಿದವರಿಗೆ ಸದಾ ಬೇಡಿಕೆ ಇರುತ್ತದೆ.
5. ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್
ನಾವಿಂದು ಭೂತಾಪಮಾನ ಹೆಚ್ಚಳದ ಪರಿಣಾಮಗಳನ್ನು ನೇರವಾಗಿ ಎದುರಿಸುತ್ತಿದ್ದೇವೆ. ಹೀಗಾಗಿ ಪರಿಸರದ ಕುರಿತ ಜಾಗೃತಿ ಜಗತ್ತಿನಾದ್ಯಂತ ಹೆಚ್ಚಿದೆ. ಹೀಗಾಗಿ ಪರಿಸರದ ಕುರಿತು ಕಾಳಜಿವಹಿಸುವವರ ಸಂಖ್ಯೆ ವಿಸ್ತಾರಗೊಂಡಿದೆ. ಪರಿಸರದ ಸಂರಕ್ಷಣೆಗೆ ತಂತ್ರಜ್ಞಾನದ ಬೆಂಬಲ ದೊರೆಯುವಂತೆ ಮಾಡುವ ಎಂಜಿನಿಯರಿಂಗ್ ಕೋರ್ಸ್ ಎಂದರೆ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್.
ಇದನ್ನೂ ಓದಿ: SSLC Result 2023 : ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?; ಇಲ್ಲಿದೆ ಉಪಯುಕ್ತ ಟಿಪ್ಸ್
ಪರಿಸರದ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ರಸಾಯನಶಾಸ್ತ್ರ, ಜೀವಶಾಸ್ತ್ರ, ತಂತ್ರಜ್ಞಾನ ಹೀಗೆ ಎಲ್ಲವನ್ನೂ ಒಳಗೊಂಡ ವಿಷಯಗಳನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ. ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್‌ನಲ್ಲಿ ಹಲವು ವಿಭಾಗಗಳಿದ್ದು (ಉದಾ: ಹವಾಮಾನ ಶಾಸ್ತ್ರ, ಜಲ ಸಂಪನ್ಮೂಲ ಎಂಜಿನಿಯರಿಂಗ್, ಘನ ತ್ಯಾಜ್ಯ ಎಂಜಿನಿಯರಿಂಗ್), ವಿದ್ಯಾರ್ಥಿಗಳು ತಮ್ಮ ಇಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಜ್ಯದ ಹಲವಾರು ಕಾಲೇಜುಗಳಲ್ಲಿ ಈ ಕೋರ್ಸ್ ಇದೆ.