ʻʻನಾನು ದೇಶದಲ್ಲಿಯೇ ಅತ್ಯುನ್ನತ ಶಿಕ್ಷಣ ಸಂಸ್ಥೆಯಲ್ಲಿ (education news) ಓದಬೇಕೆಂದುಕೊಂಡಿದ್ದೇನೆ. ನಮ್ಮ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಯಾವುದು? ಅದನ್ನು ಗುರುತಿಸುವುದು ಹೇಗೆ?ʼʼ ಈ ಪ್ರಶ್ನೆಯನ್ನು ಅನೇಕ ವಿದ್ಯಾರ್ಥಿಗಳು ಕೇಳುತ್ತಿರುತ್ತಾರೆ. ವಿವಿಧ ರ‍್ಯಾಂಕಿಂಗ್ ಆಧಾರದಲ್ಲಿ ಬೆಸ್ಟ್ ಕಾಲೇಜನ್ನು ಗುರುತಿಸಬಹುದು. ಹೌದು, ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಗ್ (ಶ್ರೇಯಾಂಕ) ನೀಡುವ ಅನೇಕ ಏಜೆನ್ಸಿಗಳು ನಮ್ಮಲ್ಲಿವೆ. ವಿವಿಧ ಮಾನದಂಡಗಳನ್ನಿಟ್ಟುಕೊಂಡು ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸಿ ಈ ರ‍್ಯಾಂಕಿಂಗ್ ನೀಡಲಾಗುತ್ತದೆ.
ಇದರಲ್ಲಿ ಬಹಳ ಪ್ರಮುಖವಾದದು ಎಂದರೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು (MHRD) ನೀಡುವ ʻರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ಶ್ರೇಯಾಂಕʼ (NIRF Ranking 2023). ಪ್ರತಿವರ್ಷ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಪರಿಶೀಲಿಸಿ ಈ ರ‍್ಯಾಂಕಿಂಗ್ ನೀಡಲಾಗುತ್ತಿದ್ದು, ಇದು 2016 ರ ಏಪ್ರಿಲ್‌ನಿಂದ ಜಾರಿಗೆ ಬಂದಿದೆ.
ರ‍್ಯಾಂಕಿಂಗ್ ನೀಡುವಾಗ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೇಗೆ ಅಳೆಯಲಾಗುತ್ತದೆ ಎಂದರೆ;
ಹೆಚ್ಚಿನ ಮಾಹಿತಿಗೆ ಇಲ್ಲಿ (Click Here) ಕ್ಲಿಕ್ ಮಾಡಿ.
ಈ ವರ್ಷ ಯಾವ ಶಿಕ್ಷಣ ಸಂಸ್ಥೆ ಬೆಸ್ಟ್?
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಾಜ್‌ಕುಮಾರ್ ರಾಜನ್ ಸಿಂಗ್ ಇತ್ತೀಚೆಗೆ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‍್ಯಾಂಕಿಂಗ್ (NIRF Ranking 2023) ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) (ಭಾರತೀಯ ವಿಜ್ಞಾನ ಸಂಸ್ಥೆ) ದೇಶದ ಎರಡನೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ. ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ದೆಹಲಿಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ) ಪಡೆದುಕೊಂಡಿದೆ.
ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಬಾಂಬೆ ಮತ್ತು ಕಾನ್‌ಪುರದ ಐಐಟಿಗಳಿವೆ. 6ನೇ ಸ್ಥಾನದಲ್ಲಿ ದೆಹಲಿಯ ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್), ಏಳನೇ ರಿಂದ ಒಂಬತ್ತನೇ ಸ್ಥಾನದವರೆಗೆ ಕ್ರಮವಾಗಿ ಖರಗ್‌ಪುರ್, ರೂರ್ಕಿ, ಗುವಾಹಟಿ ಐಐಟಿಗಳಿವೆ. ದೆಹಲಿಯ ಪ್ರಸಿದ್ಧ ಜವಹಾರ್‌ಲಾಲ್ ನೆಹರು ವಿವಿಯು ಹತ್ತನೇ ಸ್ಥಾನ ಪಡೆದುಕೊಂಡಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ನಮ್ಮ ದೇಶದ ಟಾಪ್ 20 ಶಿಕ್ಷಣ ಸಂಸ್ಥೆಗಳಿವು;
ಕ್ರಮ ಸಂಖ್ಯೆ | ಶಿಕ್ಷಣ ಸಂಸ್ಥೆಯ ಹೆಸರು | ರ್ಯಾಂಕ್ |
1 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ), ಮದ್ರಾಸ್ | 1 |
2 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc), ಬೆಂಗಳೂರು | 2 |
3 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ) ,ದೆಹಲಿ | 3 |
4 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ), ಮುಂಬಯಿ | 4 |
5 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ). ಕಾನ್‌ಪುರ್ | 5 |
6 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್), ದೆಹಲಿ | 6 |
7 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ) | 7 |
8 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ) | 8 |
9 | ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ) | 9 |
10 | ಜವಹಾರ್‌ಲಾಲ್ ನೆಹರು ವಿವಿ, ದೆಹಲಿ | 10 |
11 | ಬನರಾಸ್ ಹಿಂದೂ ವಿವಿ, ವಾರಣಾಸಿ | 11 |
12 | ಜಾಮಿಯಾ ಮಿಲಿಯಾ ಇಸ್ಲಾಮಿಯಾ, ದೆಹಲಿ | 12 |
13 | ಜದ್ವಾಪುರ್ ಯೂನಿರ್ವಸಿಟಿ, ಕೋಲ್ಕತ್ತಾ | 13 |
14 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೈದರಾಬಾದ್ | 14 |
15 | ಅಮೃತ್ ವಿಶ್ವ ವಿದ್ಯಾಪೀಠಂ, ಕೊಯಮುತ್ತೂರು | 15 |
16 | ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ್ | 16 |
17 | ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವೆಲ್ಲೂರು | 17 |
18 | ಅಣ್ಣಾ ಯೂನಿರ್ವಸಿಟಿ, ಚೆನ್ನೈ | 18 |
19 | ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ, ಅಲಿಗಢ | 19 |
20 | ಯೂನಿರ್ವಸಿಟಿ ಆಫ್ ಹೈದರಾಬಾದ್, ಹೈದರಾಬಾದ್ | 20 |
ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ 16ನೇ ಸ್ಥಾನ ಪಡೆದುಕೊಂಡಿದ್ದರೆ, ಸುರತ್ಕಲ್‌ನ ಎನ್‌ಐಟಿ 38ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 33 ಸ್ಥಾನ ಪಡೆದುಕೊಂಡಿದ್ದ ಮೈಸೂರು ವಿಶ್ವವಿದ್ಯಾಲಯ ಈ ಬಾರಿ 71ನೇ ಸ್ಥಾನಕ್ಕೆ ಕುಸಿದಿದೆ. ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ 55ನೇ ಸ್ಥಾನ ಪಡೆದುಕೊಂಡಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 92 ಹಾಗೂ ಬೆಂಗಳೂರಿನ ಕ್ರೈಸ್ಟ್ ವಿವಿ 100ನೇ ಸ್ಥಾನ ಪಡೆದುಕೊಂಡಿದೆ.
ರಾಜ್ಯದ ಇನ್ನಿತರ ಟಾಪ್ ಶಿಕ್ಷಣ ಸಂಸ್ಥೆಗಳು
ಎನ್‌ಐಆರ್‌ಎಫ್ ಕಾನೂನು ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಶೋಧನಾ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ.
ಎನ್‌ಐಆರ್‌ಎಫ್ ಮ್ಯಾನೇಜ್‌ಮೆಂಟ್ (ಬಿಸ್ಕೂಲ್) ರ‍್ಯಾಂಕಿಂಗ್‌ನಲ್ಲಿ ಬೆಂಗಳೂರು ಐಐಎಂ ಎರಡನೇ ಸ್ಥಾನ ಪಡೆದುಕೊಂಡಿದೆ. ಅಲಹಾಬಾದ್ ಐಐಎಂ ಮೊದಲ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: NIRF Ranking 2023 : ರಾಜ್ಯದ ಬೆಸ್ಟ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್ 10 ಕಾಲೇಜುಗಳು!
ಇದನ್ನೂ ಓದಿ: NIRF Ranking 2023 : ದೇಶದ ಟಾಪ್ 40 ಡೆಂಟಲ್ ಕಾಲೇಜುಗಳ ಪೈಕಿ 10 ಕರ್ನಾಟಕದಲ್ಲಿವೆ!
ಇದನ್ನೂ ಓದಿ: Asia University Rankings 2023 : ಏಷ್ಯಾದ ಅತ್ಯುತ್ತಮ ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ, ಮೈಸೂರಿನ ಜೆಎಸ್‌ಎಸ್
ದೇಶದ ಅತ್ಯುತ್ತಮ ಡೆಂಟಲ್ ಕಾಲೇಜುಗಳ ಪಟ್ಟಿಯಲ್ಲಿ ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಐದನೇ ಸ್ಥಾನ ಪಡೆದುಕೊಂಡಿದೆ. ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ 8 ನೇ ಸ್ಥಾನದಲ್ಲಿವೆ. ಒಟ್ಟು ಮೂರು ಕಾಲೇಜುಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.