Site icon Vistara News

Education Guide : ಕನ್ನಡದಲ್ಲಿಯೂ ಪಡೆಯಬಹುದು ಎಂಜಿನಿಯರಿಂಗ್‌ ಪದವಿ!

engineering courses

ನಿಮಗೆ ಗೊತ್ತೇ? ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯದಂತೆ ಸಂವಿಧಾನದ 8ನೇ ಪರಿಚ್ಛೇದದ ಅಡಿಯಲ್ಲಿ ಬರುವ ಕನ್ನಡದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯಲು ಅಖಿಲ ಭಾರತ ತಾಂತ್ರಿಕ ಪರಿಷತ್‌ ಅವಕಾಶ ನೀಡಿದೆ. ಹೀಗಾಗಿ ನೀವು ಕನ್ನಡ ಮಾಧ್ಯಮದಲ್ಲಿಯೇ ಬೇಕಾದರೆ ಈಗ ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಎಂಜಿನಿಯರಿಂಗ್‌ (ಬಿಇ) ಪದವಿಯನ್ನು ಪಡೆಯಬಹುದು.

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼ (KCET) ನಡೆಸಿರುವ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ಕನ್ನಡ ಮಾಧ್ಯಮದಲ್ಲಿಯೇ ಓದಲು ಬಯಸುವ ವಿದ್ಯಾರ್ಥಿಗಳಿಗೆ ಈ ಬ್ರಾಂಚ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. ನೀವು ಕನ್ನಡದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಮಾಡಲು ಬಯಸುವುದಾದರೆ Mechanical Engineering (Kannada Medium) (ಸಿಇಟಿ ಕೋಡ್‌ MK) ಅಥವಾ ಸಿವಿಲ್‌ ಎಂಜಿನಿಯರಿಂಗ್‌ ಮಾಡಲು ಮುಂದಾದರೆ Civil Engineering (Kannada Medium) (ಸಿಇಟಿ ಕೋಡ್‌ CK) ಆಯ್ಕೆ ಮಾಡಿಕೊಳ್ಳಬಹುದು.

ಎರಡು ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿಯೇ ಎಂಜಿನಿಯರಿಂಗ್‌ ಪದವಿಯನ್ನು ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು (VTU) ಕನ್ನಡದಲ್ಲಿ ತಾಂತ್ರಿಕ ಕೋರ್ಸ್‌ ನೀಡುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ ತಾಂತ್ರಿಕ ತಜ್ಞರ ಸಮಿತಿ ರಚಿಸಿ, ಕನ್ನಡದಲ್ಲಿಯೇ ಪಠ್ಯ ಪುಸ್ತಕ/ ಬೋಧನಾ ಸಾಮಗ್ರಿಗಳನ್ನು ಸಿದ್ಧಪಡಿಸಿದೆ. ರಾಜ್ಯದ ನಾಲ್ಕು ಎಂಜಿನಿಯರಿಂಗ್‌ ಕಾಲೇಜುಗಳು ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಪದವಿ ನೀಡಲು ಮುಂದೆ ಬಂದಿವೆಯಾದರೂ ವಿದ್ಯಾರ್ಥಿಗಳು ಬಾರದೇ ಇರುವುದರಿಂದ ಈಗ ಹಿಂದಕ್ಕೆ ಸರಿಯುತ್ತಿವೆ. ವಿದ್ಯಾರ್ಥಿಗಳು ಬಂದರೆ ಕನ್ನಡದಲ್ಲಿಯೇ ಎಂಜಿನಿಯರಿಂಗ್‌ ಕಲಿಸಲು ನಾವು ರೆಡಿ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಎಸ್‌ಜಿಸಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಜಿ.ಪಿ. ರಾಜು.

ಚಿಕ್ಕಬಳ್ಳಾಪುರದ ಎಸ್‌ಜಿಸಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 30 ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವಿದೆ. ವಿದ್ಯಾರ್ಥಿಗಳು ಕೀಳಿರಿಮೆ ಬಿಟ್ಟು ಕನ್ನಡದಲ್ಲಿಯೇ ಕಲಿಯಲು ಮುಂದೆ ಬರಬೇಕು. ಗ್ರಾಮೀಣ ಭಾಗದ ವಿದ್ಯಾಥಿಗಳಿಗೆ ಅವಕಾಶ ದೊರೆಯಲಿ ಎಂದು ನಾವು ಸತತ ಮೂರನೇ ವರ್ಷ ಈ ಅವಕಾಶವನ್ನು ನೀಡುತ್ತಿದ್ದೇವೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಪಿ. ರಾಜು.

ಕನ್ನಡದಲ್ಲಿ ಎಂಜಿನಿಯರಿಂಗ್‌ ನೀಡಲು ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮುಂದೆ ಬಂದಿತ್ತಾದರೂ ಕಳೆದ ಎರಡು ವರ್ಷಗಳಿಂದ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆಯಲು ಮುಂದಾಗದೇ ಇರುವುದರಿಂದ ಈ ವರ್ಷದಿಂದ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ವಿಸ್ತಾರ ನ್ಯೂಸ್‌ಗೆ ತಿಳಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕನ್ನಡದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯಲು ಮುಂದೆ ಬಂದಿದ್ದು, ಒಬ್ಬರಿಗೇ (education news) ಬೋಧನೆ ಕಷ್ಟವಾಗಿದ್ದರಿಂದ ಪ್ರವೇಶವನ್ನು ನಿರಾಕರಿಸಲಾಗಿದೆ. ʻʻಎಂಜಿನಿಯರಿಂಗ್‌ ಪದವಿಯನ್ನು ಕನ್ನಡದಲ್ಲಿ ಪಡೆಯುವುದು ಕಷ್ಟವೇನಲ್ಲ. ನೆರೆಯ ತಮಿಳುನಾಡಿನಲ್ಲಿ ಈ ಅವಕಾಶವನ್ನು ಅಲ್ಲಿಯ ವಿದ್ಯಾರ್ಥಿಗಳು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಉದ್ಯೋಗದಲ್ಲಿ ಕನ್ನಡ ಮಾಧ್ಯಮದವರಿಗೆ ಮೀಸಲು ನೀಡಿದಲ್ಲಿ ಇಲ್ಲಿಯ ವಿದ್ಯಾರ್ಥಿಗಳೂ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದೆ ಬರಬಹುದು ಎಂದು ಚಿಕ್ಕಬಳ್ಳಾಪುರದ ಎಸ್‌ಜಿಸಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಜಿ.ಪಿ. ರಾಜು ವಿವರಿಸಿದ್ದಾರೆ.

ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್‌ ಪುಸ್ತಕಗಳನ್ನು ಹಾಗೂ ಪಠ್ಯ ವಿಷಯಗಳನ್ನು ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಹೀಗಾಗಿ ಮುಂದೆ ಕನ್ನಡ ಆಯ್ಕೆ ಮಾಡಿಕೊಳ್ಳುವವರಿಗೆ ಪಠ್ಯ ಸಾಮಗ್ರಿ ಮತ್ತು ಅಗತ್ಯ ರೆಫರೆನ್ಸ್‌ ಪುಸ್ತಕಗಳೂ ಕನ್ನಡದಲ್ಲಿಯೇ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ರಾಜ್ಯದಲ್ಲಿ ಯಾವೆಲ್ಲಾ ಎಂಜಿನಿಯರಿಂಗ್‌ ಕೋರ್ಸ್‌ ಲಭ್ಯವಿವೆ?

1.Aero Space Engineering
2. Electronics and Telecommunication Engineering
3. Aeronautical Engineering
4. Energy Engineering
5. Agriculture Engineering
6. Environmental Engineering
7. Architecture
8. Industrial and Production Engineering
9. Artificial Intelligence And Data Science
10. Industrial Engineering and Management
11. Artificial Intelligence and Machine Learning “
12. Industrial IOT
13 Automation and Robotics Engineering
14. Information Science and Engineering
15. Automobile Engineering
16. Information Science and Technology
17. Automotive Engineering
18. Information Technology
19. B.Tech (Agri.Engg)
20. Information Technology and Engineering
21. Bachelor of Science (Honours)
22. Manufacturing Science and Engineering
23. Bio Medical Engineering
24. Marine Engineering
25. Bio Technology
26. Mathematics and Computing
27. Bio-Electronics Engineering
28. Mechanical and Smart Manufacturing
29. Bio-Medical and Robotic Engineering
30. Mechanical Engineering
31. B.Tech Computer Technology
32. Mechanical Engineering (Kannada Medium)
33. B.Tech Technology and Entrepreneurship
34. Mechatronics
35. Ceramics and Cement Technology
36. Medical Electronics
37. Chemical Engineering
38. Mining Engineering
39. Civil Engineering
40. Petrochem Engineering
41. Civil Engineering (Kannada Medium)
42. Petroleum Engineering
43. Civil Engineering and Planning
44. Planning
45. Civil Environmental Engineering
46. Planning
47. Computer and Communication Engineering
48. Polymer Science and Technology
49. Computer Engineering
50. Robotics
51. Computer Science and Business Systems
52. Robotics and Artificial Intelligence
53. Computer Science and Design
54. Robotics and Automation
55. Computer Science and Information Technology
56. Silk Technology
57. Computer Science and System Engineering
58. Telecommunication Engineering
59. Computer Science and Technology
60. Textile Technology
61. Computer Science Engineering-AI, Machine Learning
62. Tool Engineering
63. Computer Science Engineering-Artificial Intel.
64. Computer Science Engineering-Big Data
65. Computer Science Engineering-Block Chain
66. Computer Science Engineering-Cyber Security
67. Computer Science Engineering-Data Sciences
68. Computer Science Engineering-Dev Ops
69. Computer Science Engineering-Internet of Things
70. Computers Science And Engineering
71. Construction Technology and Management
72.Computer Science Internet of things, Cyber Security (Block Chain)
73. Elec. and Communication- Industrial Integrated
74. Electrical and Computer Engineering
75. Electrical And Electronics Engineering
76. Electronics and Communication Engineering
77. Electronics and Computer Engineering
78. Electronics and Instrumentation Engineering
79. Electronics and Instrumentation Tech

ರಾಜ್ಯದಲ್ಲಿ ಆಯ್ಕೆ ಮಾಡಿಕೊಳ್ಳಲು ಒಟ್ಟು 79 ಬ್ರಾಂಚ್‌ಗಳಿದ್ದರೂ ಸದ್ಯ ಎರಡು ಬ್ರಾಂಚ್‌ಗಳನ್ನು ಮಾತ್ರ ಕನ್ನಡದಲ್ಲಿ ಕಲಿಯಲು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಅವಕಾಶವನ್ನು ಕನ್ನಡ ವಿದ್ಯಾರ್ಥಿಗಳು ಬಳಸಿಕೊಂಡಲ್ಲಿ, ಬ್ರಾಂಚ್‌ಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗಬಹುದು.

ಇದನ್ನೂ ಓದಿ : Education Guide : ಬೆಸ್ಟ್‌ ಎಂಜಿನಿಯರಿಂಗ್‌ ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಟಾಪ್‌ 5 ಸಲಹೆ

Exit mobile version