Site icon Vistara News

JEE Main 2022 Session 2: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದ ಎನ್‌ಟಿಎ

JEE Main 2022 Session 2

ನವ ದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಜೆಇಇ ಮೇನ್‌ ಸೆಷನ್‌ 2 ಎಗ್ಸಾಮ್‌ 2022ರ (JEE Main 2022 Session 2) ರಿಜಿಸ್ಟೇಷನ್‌ ಪ್ರಕ್ರಿಯೆಯನ್ನು ಆರಂಭಿಸಿದೆ.

ಈಗಾಗಲೇ ಪ್ರಕಟಿಸಿದಂತೆ ಜೂನ್‌ 1 ರಿಂದ ಈ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಜೂನ್‌ 30 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ಕೂಡ ಜೂನ್‌ 30 ಕೊನೆಯ ದಿನವಾಗಿರುತ್ತದೆ. ಪರೀಕ್ಷೆಯು ಜುಲೈ 21 ರಿಂದ 30 ರವರೆಗೆ ನಡೆಯಲಿದೆ.

ಎನ್‌ಟಿಎ ಹೊರಡಿಸಿದ ಪ್ರಕಟಣೆ ಇಲ್ಲಿದೆ

ಎನ್‌ಐಟಿ ಮತ್ತು ಐಐಐಟಿಗಳಲ್ಲಿ ಬಿಇ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಅರ್ಹತಾ ಪರೀಕ್ಷೆ ಇದಾಗಿದ್ದು, ಮೊದಲ ಸೆಷನ್‌ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾತ್ರ ಈಗ ಸೆಷನ್‌ -2ಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ / ಕ್ರೆಡಿಟ್‌ ಕಾರ್ಡ್‌ / ಡೆಬಿಟ್ ಕಾರ್ಡ್‌ / ಪೇಟಿಎಂ ವ್ಯಾಲೆಟ್‌ ಬಳಸಿ ಪಾವತಿಸಬಹುದಾಗಿದೆ.

ಇತ್ತ ಗಮನಿಸಿ

ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 01-06-2022
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 30-06-2022
ಅಪ್ಲಿಕೇಶನ್‌ ಶುಲ್ಕ ಪಾವತಿಗೆ ಕೊನೆ ದಿನಾಂಕ : 30-06-2022 ರ ರಾತ್ರಿ 11-50
ಫಲಿತಾಂಶ ಪ್ರಕಟ: ಆಗಸ್ಟ್‌, 2022
ಅರ್ಜಿ ಸಲ್ಲಿಸಲು ವೆಬ್‌: https://jeemain.nta.nic.in/
ಹೆಚ್ಚಿನ ಮಾಹಿತಿಗೆ : 011-40759000/011-69227700 or email at jeemain@nta.ac.in.

ಇದನ್ನೂ ಓದಿ | ಜೂನ್ 3 ಅಥವಾ 4ನೇ ವಾರದಲ್ಲಿ PU Results: ತಾತ್ಕಾಲಿಕ ಪಟ್ಟಿ ಪ್ರಕಟ

Exit mobile version