ಬೆಂಗಳೂರು: ಇನ್ನು ಮುಂದೆ 9 ಮತ್ತು 10ನೇ ತರಗತಿಗಳನ್ನು ಪ್ರಾಥಮಿಕ ಶಿಕ್ಷಣದ (Education News) “ಮುಂದುವರಿದ ಶಿಕ್ಷಣʼʼ ಎಂದು ಕರೆಯಲಾಗುತ್ತದೆ. ಹೌದು, ಈ ತರಗತಿಗಳು ಇನ್ನು ಮುಂದೆ ಪ್ರೌಢಶಿಕ್ಷಣದ ತರಗತಿಗಳಲ್ಲ. ಪ್ರಾಥಮಿಕ ಶಿಕ್ಷಣದ ಭಾಗವಾಗಲಿವೆ. ಈ ಸಂಬಂಧ ಸರ್ವಾಜನಿಕ ಶಿಕ್ಷಣ ಇಲಾಖೆಯು ಮಂಗಳವಾರದಂದು “ಜ್ಞಾಪನಾ ಪತ್ರʼʼ ಹೊರಡಿಸಿದೆ (Education News). ರಾಜ್ಯ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 3 ರಂದೇ ಆದೇಶ ಕೂಡ ಹೊರಡಿಸಿತ್ತು.
ಈಗಾಗಲೇ 01 ರಿಂದ 8 ಅಥವಾ 6 ರಿಂದ 8 ನೇ ತರಗತಿಗಳು ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು (Education News) ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಮುಂದುವದ ಶಾಲೆ ಎಂದೇ ಪರಿಗಣಿಸಲಾಗುತ್ತದೆ. ಅದರ ಅನ್ವಯವೇ ನೋಂದಣಿ ನಿಯಮಗಳನ್ನು ಅನುಸರಿಸಲಾಗುತ್ತದೆ.
ಪ್ರಾಥಮಿಕ ಶಾಲೆಗಳಿರುವಲ್ಲಿಯೇ 9 ಮತ್ತು10 ನೇ ತರಗತಿಗಳನ್ನು ನಡೆಸುವುದಿದ್ದರೆ ಈ ತರಗತಿಗಳನ್ನು ಹೊಸ ಶಾಲೆ ಎಂದು ಪರಿಗಣಸಬಾರದು ಎಂದು (Education News) ಇಲಾಖೆಯು ಸ್ಪಷ್ಟವಾಗಿ ಸೂಚಿಸಿದ್ದು, ಒಂದು ವೇಳೆ ಬೇರೆ ಆವರಣದಲ್ಲಿ 9 ಮತ್ತು 10 ನೇ ತರಗತಿಗಳನ್ನು ಪ್ರತ್ಯೇಕವಾಗಿ ಆರಂಭಿಸಿದ್ದಲ್ಲಿ ಮಾತ್ರ ಅಂತಹ ಶಾಲೆಯನ್ನು ಪ್ರೌಢ ಶಾಲೆಯೆಂದು ಪರಿಗಣಿಸಬೇಕು ಎಂದು ತಿಳಿಸಲಾಗಿದೆ. ಖಾಸಗಿ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
ಇದನ್ನೂ ಓದಿ| JDS Pancharatna | ಶಾಲೆಯ ಕೊಠಡಿ ಕಟ್ಟಿಸಿಕೊಡಿ ಸಾರ್; ರಸ್ತೆ ಮಧ್ಯೆಯೇ ಎಚ್‌ಡಿಕೆ ಅಡ್ಡಗಟ್ಟಿ ಮಕ್ಕಳ ಮನವಿ